ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ಸೋಮವಾರ ಆತಂಕದ ಘಟನೆ ಸಂಭವಿಸಿದ್ದು, ಕಾರಿನ ಡೋರ್ ಲಾಕ್ ಆಗಿ ಮಗು ಕಾರಿನೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ.
- Advertisement -
ಕಾರಿನ ಚಾಲಕ ವಾಹನವನ್ನು ನಿಲ್ಲಿಸಿ ಅಂಗಡಿಗೆ ತೆರಳಿದ್ದ ವೇಳೆ, ಕಾರಿನ ಡೋರ್ ಆಟೋಮೆಟಿಕ್ ಆಗಿ ಲಾಕ್ ಆಗಿ ಮಗು ಒಳಗೇ ಸಿಲುಕಿಕೊಂಡಿತ್ತು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮಗುವನ್ನು ಹೊರತೆಗೆದಲು ಸಾರ್ವಜನಿಕರು ಹಲವು ರೀತಿಯಲ್ಲಿ ಕಾರಿನ ಡೋರ್ ತೆರೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಬಳಿಕ ಸಮಯ ವ್ಯರ್ಥ ಮಾಡದೆ ಕಾರಿನ ಗ್ಲಾಸ್ ಒಡೆದು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಘಟನೆಯಲ್ಲಿ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.





