ಧರ್ಮಸ್ಥಳ ಪ್ರಕರಣ | ಎಂಟು ತಿಂಗಳ ಹಿಂದೆ ಸತ್ತ ವ್ಯಕ್ತಿಯ ಅಸ್ಥಿಪಂಜರ ಎಂಬುದು ಸುಳ್ಳು: ಎಸ್‌ಐಟಿ ಅಧಿಕಾರಿಗಳ ಸ್ಪಷ್ಟನೆ

Date:

Advertisements

ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ಹಲವು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು 11ನೇ ಪಾಯಿಂಟ್ ಸಮೀಪದಲ್ಲಿ ಸುಮಾರು 8-9 ತಿಂಗಳ ಹಳೆಯ ಸಂಪೂರ್ಣ ಅಸ್ಥಿಪಂಜರ ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ “ಈ ವರದಿ ಸುಳ್ಳು, ಸಿಕ್ಕಿರುವುದು ಹಳೆಯ ಅಸ್ಥಿಪಂಜರ, ಹೊಸದಲ್ಲ” ಎಂದು ಎಸ್ಐಟಿ ಮೂಲಗಳು ಈದಿನ ಡಾಟ್‌ ಕಾಮ್‌ಗೆ ತಿಳಿಸಿದೆ.

ದೂರುದಾರ ಗುರುತಿಸಿದ್ದ 13 ಸ್ಥಳಗಳ ಪೈಕಿ ಆರನೇ ಪಾಯಿಂಟ್‌ ಮತ್ತು 11ನೇ ಪಾಯಿಂಟ್‌ನ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. 11ನೇ ಪಾಯಿಂಟ್‌ನ ಸಮೀಪದಲ್ಲಿ ಮರದ ಬುಡದಲ್ಲಿ ಸಂಪೂರ್ಣ ಅಸ್ಥಿಪಂಜರ ಸಿಕ್ಕಿದೆ, ಅದು 8-9 ತಿಂಗಳು ಹಳೆಯದ್ದು ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಇದು ಸುಳ್ಳು ಮಾಹಿತಿ. ಈವರೆಗೆ ಸಿಕ್ಕಿರುವುದೆಲ್ಲವೂ ಹಳೆಯ ಅಸ್ಥಿಪಂಜರಗಳು ಎಂದು ಎಸ್‌ಐಟಿ ಮೂಲಗಳು ಈದಿನ ಡಾಟ್‌ ಕಾಮ್‌ಗೆ ಸ್ಪಷ್ಟಪಡಿಸಿದೆ.

ಇದನ್ನು ಓದಿದ್ದೀರಾ? BREAKING NEWS | ಧರ್ಮಸ್ಥಳ ಪ್ರಕರಣ: ಪಾಯಿಂಟ್ ನಂ 11ರ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ

Advertisements

ನಿನ್ನೆ ನಡೆದ ಕಾರ್ಯಾಚರಣೆ ವೇಳೆ ದೂರುದಾರ 11ನೇ ಪಾಯಿಂಟ್‌ನ ಸಮೀಪದ ಪ್ರದೇಶದಲ್ಲೂ ಅಕ್ರಮವಾಗಿ ಮೃತದೇಹ ಹೂತಿರುವುದಾಗಿ ತಿಳಿಸಿದ್ದಾನೆ. ಹಾಗೆಯೇ ಹೊಸದಾಗಿ ಇನ್ನೂ 17 ಸ್ಥಳಗಳನ್ನು ಗುರುತಿಸಲಾಗಿದ್ದು, ಒಟ್ಟು 30 ಸ್ಥಳಗಳನ್ನು ಗುರುತು ಮಾಡಲಾಗಿದೆ. 11ನೇ ಪಾಯಿಂಟ್ ಸಮೀಪ ಅಸ್ಥಿಪಂಜರದ ಅವಶೇಷವೂ ಪತ್ತೆಯಾಗಿದೆ.

ಈ ಬೆನ್ನಲ್ಲೇ ಟಿವಿ9 ಸೇರಿದಂತೆ ಹಲವು ಮಾಧ್ಯಮಗಳು ದೂರುದಾರ ಹೊಸದಾಗಿ ಗುರುತಿಸಿದ ಸ್ಥಳದಲ್ಲಿ ಮರದ ಬುಡದಲ್ಲಿ 8ರಿಂದ 9 ತಿಂಗಳು ಹಳೆಯ ಅಸ್ಥಿಪಂಜರ ಸಿಕ್ಕಿದೆ. ಸಂಪೂರ್ಣ ಅಸ್ಥಿಪಂಜರ ಸಿಕ್ಕಿದ್ದು, ಅದು ಪುರುಷನದ್ದು ಎಂದು ವರದಿ ಮಾಡಿದೆ. ದೂರುದಾರ 1990-2000ರ ವ್ಯಾಪ್ತಿಯಲ್ಲಿ ಆಗಿರುವ ಪ್ರಕರಣಗಳ ಬಗ್ಗೆ ತಿಳಿಸಿದ್ದಾನೆ. ಆದರೆ ಇದು 8ರಿಂದ 9 ತಿಂಗಳು ಹಳೆಯ ಅಸ್ಥಿಪಂಜರ ಎಂದು ಮಾಧ್ಯಮಗಳು ಹೇಳಿಕೊಂಡಿದೆ.

ಈ ಬಗ್ಗೆ ಎಸ್‌ಐಟಿ ತಂಡವನ್ನು ಈದಿನ ಡಾಟ್‌ ಕಾಮ್ ಸಂಪರ್ಕಿಸಿದ್ದು, “ಇವೆಲ್ಲವೂ ಸುಳ್ಳು ಸುದ್ದಿಗಳು. ನಿನ್ನೆ ಸಿಕ್ಕಿರುವಂತದ್ದು ಹಳೆಯ ಮೃತದೇಹ, ಹೊಸದಲ್ಲ. ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿದ್ದು ಅದನ್ನು ನಂಬಬೇಡಿ” ಎಂದು ಎಸ್‌ಐಟಿ ಮೂಲಗಳು ಈದಿನ ಡಾಟ್‌ ಕಾಮ್‌ಗೆ ತಿಳಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X