ಹಲವು ಮೃತದೇಹ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಇಂದು(ಜುಲೈ 30) ಮೂರನೇ ಸ್ಥಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ದೊರಕಿಲ್ಲ. ನೇತ್ರಾವತಿ ಸ್ನಾನಗುಡ್ಡದ ಪಕ್ಕದ ಬಂಗ್ಲೆ ಗುಡ್ಡದಲ್ಲಿನ ಕಾಡಿನೊಳಗೆ ಗುರುತಿಸಿದ ಜಾಗಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ದೂರುದಾರ ಗುರುತಿಸಿರುವ ಜಾಗಗಳ ಪೈಕಿ ಮೊದಲನೇ ಸ್ಥಳವನ್ನು ಅಗೆಯುವ ಕಾರ್ಯಾಚರಣೆ ನಿನ್ನೆ ನಡೆದಿತ್ತು. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಒಂದು ಬಟ್ಟೆ ತುಂಡು ಹಾಗೂ ಒಂದು ಬ್ಯಾಗ್ ಪತ್ತೆಯಾಗಿತ್ತು. ಆದರೆ ಇದ್ಯಾವುದೂ ಸದ್ಯದ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳಾಗಿ ತೋರುವುದಿಲ್ಲ ಎಂದು ಉನ್ನತ ಮೂಲಗಳು ಈದಿನ ಡಾಟ್ ಕಾಂಗೆ ಖಚಿತಪಡಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಧರ್ಮಸ್ಥಳಕ್ಕೆ ಬಂದ ಬೇರೆ ಇತರೆ ಯಾತ್ರಿಕರ ವಸ್ತುಗಳು ಅವಾಗಿವೆ ಎಂದು ತಿಳಿದುಬಂದಿದೆ. ಗುರುತು ಮಾಡಲಾದ ನಾಲ್ಕನೇ ಜಾಗವನ್ನು ಈಗಾಗಲೇ ಅರ್ಧದಷ್ಟು ಅಗೆಯಲಾಗಿದೆ. ಇಂದು ಐದು ಅಥವಾ ಆರನೇ ಜಾಗವನ್ನು ಅಗೆಯುವುದು ಖಚಿತವಾಗಿದೆ. ಎಸ್ ಐಟಿ ಮುಖ್ಯಸ್ಥರಾದ ಪ್ರಣವ್ ಮೊಹಂತಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.