ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ (ಬಿ.ಡಬ್ಲ್ಯು.ಎಫ್.), ಅಬುಧಾಬಿ ಹಮ್ಮಿಕೊಂಡಿರುವ ಸರಳ ಸಾಮೂಹಿಕ ವಿವಾಹ ಸಮಾರಂಭವು ಫೆ. 17ರಂದು ಬೆಳಗ್ಗೆ 11ಕ್ಕೆ ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ʼಝಾರಾ ಕನ್ವೆಂಶನ್ ಸೆಂಟರ್ʼನಲ್ಲಿ ನಡೆಯಲಿದೆ.
ಬಿಡಬ್ಲ್ಯುಎಫ್ ಸಂಘಟಿಸುತ್ತಿರುವ ಎಂಟನೇ ಸಾಮೂಹಿಕ ವಿವಾಹ ಇದಾಗಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಲಿದ್ದು, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ಮತ್ತು ಆಶೀರ್ವಚನ ಮಾಡಲಿದ್ದಾರೆ. ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಯೇನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲ ಕುಂಞಿ ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದು, ಬ್ಯಾರೀಸ್ ವೆಲ್ಫೇರ್ ಫೋರಂನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆ ಪ್ರಾಸ್ತಾವಿಕ ಮಾತುಗಳ್ಳಾನಡಲಿದ್ದಾರೆ. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಸಾಧಕರಿಗೆ ಸನ್ಮಾನ
ಮಂಗಳೂರಿನ ಭಾರತ್ ಇನ್ಫ್ರಾಟೆಕ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ. ಮತ್ತು ಸೌದಿ ಅರೇಬಿಯಾದ ಅಲ್‌ಜುಬೈಲ್‌ನಲ್ಲಿರುವ ಅಲ್ ಮುಝೈನ್ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಝಕರಿಯಾ ಜೋಕಟ್ಟೆ ಅವರಿಗೆ ಜೀವಮಾನ ಸಮಾಜ ಸೇವೆಗಾಗಿ ಸನ್ಮಾನ ಏರ್ಪಡಿಸಲಾಗಿದ್ದು, ರಾಜ್ಯ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ ಮತ್ತು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟವನ್ನು ಸಮಾರಂಭದಲ್ಲಿ ಅಭಿನಂದಿಸಿ, ಗೌರವಿಸಲಾಗುವುದು.
ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಮಾಜಿ ಶಾಸಕ ಮೊಹಿದಿನ್ ಬಾವಾ, ಬಿಸಿಸಿಐ ಅಧ್ಯಕ್ಷ ಎಸ್. ಎಂ. ರಶೀದ್, ನಂಡೆ ಪೆಙಲ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಸುಲ್ತಾನ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್, ಮುಸ್ಲಿಮ್ ಮುಖಂಡರಾದ ರಿಯಾಝ್ ಅಬ್ದುಲ್ ಖಾದರ್ ಬಾವಾ, ಎ..ಎ. ಹೈದರ್ ಪರ್ತಿಪ್ಪಾಡಿ, ಹಮ್ಮಾದ್ ಬಶೀರ್ ಸಾಗರ್, ಹಮೀದ್ ಉಳ್ಳಾಲ್, ಆಸಿಫ್ ಸೂರಲ್ಪಾಡಿ, ಸಿ. ಮಹಮೂದ್ ಹಾಜಿ, ಜಿ. ಮುಹಮ್ಮದ್ ಹನೀಫ್, ಅಬ್ದುಲ್ ನಾಸಿರ್, ಮುಹಮ್ಮದ್ ಹಾರಿಸ್, ಶೌಕತ್ ಶೌರಿ, ಕೆ.ಕೆ. ಶಾಹುಲ್ ಹಮೀದ್, ಎಂ.ಬಿ. ಅಬ್ದುಲ್ ರಹಿಮಾನ್, ಮನ್ಸೂರ್ ಅಹ್ಮದ್, ಮುಹಮ್ಮದ್ ಸಲೀಂ, ಆಲಿ ಕುಂಞಿ ಪಾರೆ, ಆಸಿಫ್ ಸೂಫಿಖಾನ, ಹಕೀಂ ತುರ್ಕಲಿಕೆ, ನಿಸಾರ್ ಎಫ್. ಮುಹಮ್ಮದ್, ಅಬ್ಬಾಸ್ ಉಚ್ಚಿಲ್ ಮತ್ತು ಎಸ್. ಎಂ. ಫಾರೂಕ್ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ ಎಂದು ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.