ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಚುರುಕುಗೊಂಡಿದ್ದು, ಜಿಲ್ಲೆಯ 18,03,766 ಮತದಾರರಿಗೆ ಜುಲೈ 22ರವರೆಗೆ ಶೇ.100ರಷ್ಟು ಎನ್ಯುಮರೇಶನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 13,72,632 ಫಾರ್ಮ್‌ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಡಿಜಿಟೈಸೇಶನ್‌ನಲ್ಲಿ ಬೆಳ್ತಂಗಡಿ ಕ್ಷೇತ್ರ 1,83,809 ನಮೂನೆಗಳೊಂದಿಗೆ ಮುಂಚೂಣಿಯಲ್ಲಿದ್ದು, ಮಂಗಳೂರು ಕ್ಷೇತ್ರದಲ್ಲಿ 1,82,916, ಸುಳ್ಯದಲ್ಲಿ 1,80,024, ಬಂಟ್ವಾಳದಲ್ಲಿ 1,69,517, ಪುತ್ತೂರಿನಲ್ಲಿ 1,68,382, ಮಂಗಳೂರು ನಗರ ಉತ್ತರದಲ್ಲಿ 1,65,189, ಮಂಗಳೂರು ನಗರ ದಕ್ಷಿಣದಲ್ಲಿ 1,62,326 ಹಾಗೂ ಮೂಡುಬಿದಿರೆ ಕ್ಷೇತ್ರದಲ್ಲಿ 1,60,469 ಎನ್ಯುಮರೇಶನ್ ಫಾರ್ಮ್‌ಗಳನ್ನು ಡಿಜಿಟೈಸ್ ಮಾಡಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಜಿಲ್ಲಾದ್ಯಂತ ಮುಂದುವರಿಸಲಾಗುತ್ತಿದ್ದು, ಉಳಿದ ನಮೂನೆಗಳ ಡಿಜಿಟೈಸೇಶನ್ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






