ಭಾಲ್ಕಿ | ಕಾಯಕ ಶರಣ ಕುಂಬಾರ ಗುಂಡಯ್ಯ, ಕುರುಬ ಗೊಲ್ಲಾಳನವರ ಜಯಂತಿ ಆಚರಣೆ

Date:

ಭಾಲ್ಕಿಯ ಚನ್ನಬಸವಾಶ್ರಮ ಸಮೀಪದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಬುಧವಾರ ಕುಂಬಾರ ಗುಂಡಯ್ಯ ಹಾಗೂ ಕುರುಬ ಗೊಲ್ಲಾಳ ಶರಣರ ಜಯಂತಿ ಮತ್ತು324ನೇ ಶರಣ ಸಂಗಮ ಕಾರ್ಯಕ್ರಮ ನಡೆಯಿತು.

- Advertisement -

ಸಾನಿಧ್ಯ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ಕುಂಬಾರ ಗುಂಡಯ್ಯ ಹಾಗೂ ಕುರುಬ ಗೊಲ್ಲಾಳ ಉಭಯ ಶರಣರು ಕಾಯಕದ ಮೂಲಕ ಕೈಲಾಸವನ್ನು ಧರೆಗೆ ತಂದ ಮಹಾನ್ ಶರಣರು. ಅವರ ಜೀವನ, ತತ್ವ ಹಾಗೂ ವಿಚಾರಧಾರೆಗಳು ಇಂದಿನ ಆಧುನಿಕ ಸಮಾಜಕ್ಕೆ ದಾರಿದೀಪವಾಗಿವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

” ಕಾಯಕ ಶರಣರು ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮಾರ್ಗವನ್ನು ತೋರಿಸಿದ್ದಾರೆ. ಹಣ, ಅಧಿಕಾರ ಮತ್ತು ಸಂಪತ್ತಿನಿಂದ ನಿಜವಾದ ಸಮಾಧಾನ ದೊರೆಯುವುದಿಲ್ಲ. ಆದರೆ ಶರಣರ ಸಂಗ ಮತ್ತು ವಚನಗಳ ಅಧ್ಯಯನದಿಂದ ಜೀವನದಲ್ಲಿ ನೆಮ್ಮದಿ ಆತ್ಮತೃಪ್ತಿ ದೊರೆಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅನುಭಾವ ನೀಡಿ, “ಕಾಯಕ ಶರಣರಾದ ಕುಂಬಾರ ಗುಂಡಯ್ಯ ಹಾಗೂ ಕುರುಬ ಗೊಲ್ಲಾಳೇಶ್ವರ ಅವರು 12ನೇ ಶತಮಾನದ ಮಹಾನ್ ಶರಣರಾಗಿದ್ದು, ಅವರ ಜೀವನ ಸಂದೇಶಗಳು ಸಮಾಜಕ್ಕೆ ಬೆಳಕಿನ ಕಿರಣಗಳಾಗಿವೆ. ಶರೀರದ ಗಾಯಕ್ಕೆ ಔಷಧ ಇರುವಂತೆ ಮನಸ್ಸಿನ ಗಾಯಕ್ಕೆ ಶರಣರ ವಚನಗಳೇ ದಿವ್ಯ ಔಷಧಿಯಾಗಿವೆ” ಎಂದು ಹೇಳಿದರು.

ಕುಂಬಾರ ಗುಂಡಯ್ಯ ಅವರು ಭಾಲ್ಕಿಯಲ್ಲಿ ಜನಿಸಿ, ತಮ್ಮ ಧರ್ಮಪತ್ನಿ ಕೇತಲದೇವಿಯೊಂದಿಗೆ ಗಡಿಗೆ ತಯಾರಿಸುವ ಕಾಯಕದ ಮೂಲಕ ಶಿವನ ಒಲುಮೆ ಪಡೆದ ಮಹಾನುಭಾವರಾಗಿದ್ದರು. ಕಾಯಕವನ್ನು ಕೇವಲ ಆದಾಯಕ್ಕಾಗಿ ಅಲ್ಲ, ಆನಂದ ಮತ್ತು ಆತ್ಮಸಾಕ್ಷಾತ್ಕಾರಕ್ಕಾಗಿ ನಡೆಸಿದವರು. ಕುರುಬ ಗೊಲ್ಲಾಳ ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ಕಲ್ಯಾಣಕ್ಕೆ ಆಗಮಿಸಿ ಶರಣ ಸಂಕುಲದಲ್ಲಿ ಭಾಗವಹಿಸಿ, ಹತ್ತು ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ” ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈರಾಜ ಪಾತ್ರೆ, ಪ್ರಧಾನ ಕಾರ್ಯದರ್ಶಿ ಸಂತೋಷ ಬಿ.ಜಿ.ಪಾಟೀಲ, ರೋಟರಿ ಕ್ಲಬ್ ಕಾರ್ಯದರ್ಶಿ ಅಶೋಕ ರಾಜೋಳೆ ಹಾಗೂ ಖಜಾಂಜಿ ಅವಿನಾಶ ಮಲ್ಗೆ, ಅನೀಲಕುಮಾರ ತಳವಾಡೆ, ವಿಜಯಕುಮಾರ ಪಾಟೀಲ ಯರನಳ್ಳಿ, ಮಲ್ಲಮ್ಮ ಆರ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ : ಬೀದರ್‌ | ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ತಾಲೂಕು ರೋಟರಿ ಕ್ಲಬ್ ಅಧ್ಯಕ್ಷೆ ಶೈಲಜಾ ತಳವಾಡೆ ದೀಪ ಕಾರ್ಯಕ್ರಮ ಉದ್ಘಾಟಿಸಿದರು. ಶಿವರಾಜ ಮಲ್ಲೇಶಿ, ಜೈಪ್ರಕಾಶ ಕುಂಬಾರ ಸೇರಿದಂತೆ ಅನೇಕ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಜು ಜುಬರೆ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಾಂತಯ್ಯ ಸ್ವಾಮಿ ವಚನ ಗಾಯನ ನಡೆಸಿದರು. ದೀಪಕ ಠಮಕೆ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...