ಧರ್ಮಸ್ಥಳದಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ಸ್ಥಳಗಳಲ್ಲಿ GROUND PENETRATING RADAR(ರೇಡಾರ್) ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಈವರಗೆ, ಸಾಕ್ಷಿ-ದೂರುದಾರ ತೇರಿರುವ 10 ಸ್ಥಳಗಳಲ್ಲಿ ಕೆಲವು ಸ್ಥಳದಲ್ಲಿ ಕಳೇಬರಗಳು ಪತ್ತೆ ಯಾಗಿರುತ್ತದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿರುತ್ತಾನೆ. ಅಪಾರ ಮಳೆಯನ್ನು ಕಾಣುವ ಧರ್ಮಸ್ಥಳ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಬಂಧನಕ್ಕೆ ಸುಜಾತಾ ಭಟ್ ಪರ ವಕೀಲರ ಆಗ್ರಹ
ಹಾಗೆಯೇ, “ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟಿಕೊಂಡ ಗುರುತ್ತಿನಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನಾವು ಈಗಾಗಲೇ ದಿನಾಂಕ ಜುಲೈ 29ರಂದು ಮನವಿ ಮಾಡಿಕೊಂಡಂತೆ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ GROUND PENETRATING RADAR (ಗ್ರೌಂಡ್ ಪೆನೇಟ್ರೇಟಿಂಗ್ ರೆೇಡಾರ್) ಗಳನ್ನು ಬಳಸಿ ಈಗಾಗಲೇ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ” ಎಂದು ಆಗ್ರಹಿಸಿದ್ದಾರೆ.
“ಹುಲ್ಲುಕಡ್ಡಿಯನ್ನು ತೆರವುಗೊಳಿಸಲು ಬಳಸುವ ಯಂತ್ರದಷ್ಟು ಗಾತ್ರವಿರುವ GPRಗಳನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇನ್ನು ಎಸ್‌ಐಟಿ ತಂಡವನ್ನು ಶ್ಲಾಘಿಸಿರುವ ಅವರು, “ಅತ್ಯುತ್ತಮ ತಂಡದ ನೆರವಿನೊಂದಿಗೆ ಎಸ್‌ಐಟಿಯು ಹೊರತೆಗೆಯುವ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಶ್ಲಾಘನೀಯ. ಪ್ರಣಬ್ ಮೊಹಂತಿಯವರ ನೇತೃತ್ವದ ಎಸ್‌ಐಟಿಯು GPRಗಳನ್ನು ಅಳವಡಿಸುವುದೆಂಬ ನಿರೀಕ್ಷೆಯನ್ನು ಅನೇಕ ತಜ್ಞರು ಹೊಂದಿರುತ್ತಾರೆ. GPRಗಳನ್ನು ನಿಯೋಜಿಸಲು ಎಸ್‌ಐಟಿಯವರಿಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೆರವಾಗುತ್ತಾರೆಂಬ ಅಚಲ ನಂಬಿಕೆ ಮತ್ತು ವಿಶ್ವಾಸ ನಮ್ಮದು” ಎಂದು ಹೇಳಿದ್ದಾರೆ.

ಹೌದು GPR ಟೆಕ್ನಾಲಜಿ ಉಪಯೋಗಿಸಿ ಶವಗಳ ನಿಖರ ಮಾಹಿತಿ ಪಡೆಯಬಹುದು. ಡ್ರೋನ್ ಮೌಂಟೆಡ್ ಅಥವಾ ಹ್ಯಾಂಡ್ ಹೆಲ್ಡ್ GPR ಯೂಸ್ ಮಾಡಬೇಕು. ರಾಡಾರ್ ಕ್ಯಾಮೆರಾ ತರ ಇಮೇಜ್ ಕೊಡ್ತದೆ ಗಾದೆಯ ಮಾತೇ ಇದೆ ನೋಡಿ ” the camera never lies “