ಉಡುಪಿ | ಚಿಲ್ಲರೆ ವಿಷಯಕ್ಕೆ ದಲಿತ ಯುವತಿ ಮೇಲೆ ಹಲ್ಲೆ, ದಲಿತ ಹಕ್ಕುಗಳ ಸಮಿತಿ ಖಂಡನೆ

Date:

Advertisements

ಕುಂದಾಪುರ ಬಳಿಯ ಮಾವಿನಕಟ್ಟೆ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ಹಣದ ವಿಷಯದಲ್ಲಿ ಮಹಿಳೆಯೊಬ್ಬರು ದಲಿತ ಯುವತಿ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ಖಂಡಿಸಿದೆ.

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿಯನ್ನು ಹಾಗೂ ಈಕೆಯ ಹೆತ್ತವರನ್ನು ಮಂಗಳವಾರ ಭೇಟಿಯಾದ ಡಿ ಎಚ್ ಎಸ್ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರು ನೇತೃತ್ವದ ನಿಯೋಗ ಯುವತಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿಸಿತು. ಮಾತ್ರವಲ್ಲ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಜೊತೆಗೆ ನಿಂತು ಸಹಕರಿಸುವುದಾಗಿ ಕುಟುಂಬದವರಿಗೆ ಭರವಸೆ ನೀಡಿತು.

ಘಟನೆ ನಡೆದ ಬೆನ್ನಿಗೆ ವಿಳಂಬ ಮಾಡದೆ ಆರೋಪಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ ಪೊಲೀಸ್ ಅಧಿಕಾರಿಗಳ ಕರ್ತವ್ಯ ಪಾಲನೆಯನ್ನು ಡಿ ಎಚ್ ಎಸ್ ಪರವಾಗಿ ಅಭಿನಂದಿಸಲಾಯಿತು.

Advertisements
1005755144

ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಸಂಜೀವ ಬಳ್ಕೂರು, ಸಹ ಸಂಚಾಲಕರಾದ ರವಿ ವಿ. ಎಂ., ಸಂಹಿತ್ ಸುಜಯ್ ಬಳ್ಕೂರು, ವಿಜಯ್ ಕುಮಾರ್ ಬಳ್ಕೂರು, ಮಂಜುನಾಥ್ ಬಳ್ಕೂರು, ಸಿಐಟಿಯು ನಾಯಕರಾದ ಎಚ್. ನರಸಿಂಹ ಹಾಗೂ ಚಂದ್ರಶೇಖರ ವಿ. ಉಪಸ್ಥಿತರಿದ್ದರು.

ಬುಧವಾರದಂದು ಜನವಾದಿ ಮಹಿಳಾ ಸಂಘಟನೆ ಮತ್ತು ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್) ನಿಯೋಗ ಜಂಟಿಯಾಗಿಸಂತ್ರಸ್ತೆ ಲಕ್ಷ್ಮಿ ಅವರ ಮನೆಗೆ ಭೇಟಿ ನೀಡಿತು. ಮುಂದಿನ ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯ – ಸಹಕಾರ ನೀಡುವುದಾಗಿ ನಿಯೋಗ ಭರವಸೆ ನೀಡಿತು.

ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ, ಶೀಲಾವತಿ ಇದ್ದರು. ದಲಿತ ಮುಖಂಡರಾದ ಜಯಕುಮಾರ್, ಶಶಿ ಬಳ್ಕೂರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X