‘ ದಲಿತರಿಗೆ ಮೀಸಲಿಟ್ಟ ಎಸ್ಸಿಎಸ್ಪಿ – ಟಿಎಸ್ಪಿ ದುಡ್ಡೇ ಬೇಕಾ ಗ್ಯಾರೆಂಟಿ ಯೋಜನೆಗಳಿಗೆ, ಈ ಕೂಡಲೇ ಪರಿಶಿಷ್ಟರ ಅಭಿವೃದ್ಧಿಗಿರಿಸಿದ್ದ ಹಣವನ್ನು ಹಿಂದುರುಗಿಸುವಂತೆ’ ಒತ್ತಾಯಿಸಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿಯವರು ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದ ಎಸ್ಸಿಎಸ್ಪಿ – ಟಿಎಸ್ಪಿ ಯೋಜನೆಯ ಹಣವನ್ನು ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ಬಳಸಿಕೊಂಡಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.
ದಸಂಸ ಮೈಸೂರು ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆಯವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಪತ್ರವನ್ನು ಕಳಿಸಿಕೊಡುವಂತೆ, ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ಹಣವನ್ನು ಕೂಡಲೇ ಮರಳಿಸಿ, ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಡುವಂತೆ ಸರ್ಕಾರದ ಗಮನಕ್ಕೆ ತರಬೇಕಾಗಿ ಕೋರಿದ್ದಾರೆ.
” ಪರಿಶಿಷ್ಟರ ಅಭಿವೃದ್ಧಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕ ಅಸಮಾನತೆಯ ಅಂತರ ಕಡಿಮೆ ಮಾಡಲು ಬಳಸಬೇಕಿದ್ದ ಹಣ, ಬಿಜೆಪಿಯವರ ಹಾದಿ ಹಿಡಿದಿದ್ದು ನಿಜಕ್ಕೂ ಶೋಚನಿಯ.ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳಿಗೆ ದಲಿತರ ದುಡ್ಡು ಬಳಸಿದರೆ. ಬಿಜೆಪಿ ಯಾವುದೇ ಯೋಜನೆ, ಜನಪರ ಕಾರ್ಯಕ್ರಮ ಕೈಗೊಳ್ಳದಿದ್ದರೂ ಎಸ್ಸಿಎಸ್ಪಿ – ಟಿಎಸ್ಪಿ ಹಣ ದುರುಪಯೋಗ ಮಾಡಿತ್ತು ” ಎಂದು ಕಿಡಿಕಾರಿದರು.
ದಸಂಸ ಸಂಚಾಲಕ ಶಂಭುಲಿಂಗ ಸ್ವಾಮಿ ಮಾತನಾಡಿ ” ದಲಿತರ, ಶೋಷಿತರ, ಅಲ್ಪ ಸಂಖ್ಯಾತರ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಸಮುದಾಯಗಳ ಹಿತ ಕಾಯದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬಿಡದೆ ಬೇರೆ ಬೇರೆ ಯೋಜನೆ ಹೆಸರಿನಲ್ಲಿ ಬಳಕೆ ಮಾಡಿಕೊಂಡಿದ್ದು ದ್ರೋಹ ಬಗೆದಂತೆ. ಈ ಕೂಡಲೇ ಮಾಡಿರುವ ಪ್ರಾಮಾದ ಅರ್ಥ ಮಾಡಿಕೊಂಡು ಬಳಕೆ ಮಾಡಿಕೊಂಡಿರುವ ಹಣವನ್ನು ಪರಿಶಿಷ್ಟರ ಅಭಿವೃದ್ಧಿಗೆ ಹಿಂದಿರುಗಿಸಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಮಾರ್ಚ್ 8 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಮನವಿ ಸಲ್ಲಿಸುವಾಗ ತಿಮ್ಮೆಗೌಡ, ಕುಮಾರ್, ರಮೇಶ್, ಶಿವು,ಪ್ರಕಾಶ್, ಶೇಖರ್, ಎನ್ ರಾಜಣ್ಣ, ದಿಲೀಪ, ಮಲ್ಲಿಕಾರ್ಜುನ, ಶಿವಸ್ವಾಮಿ, ಸಾದಿಕ್, ಗುರುಲಿಂಗು,ಅಪ್ಸರ್ ಆಹಮದ್,ಮಹೇಶ್, ಚಂದು, ಪ್ರೇಮ, ಮಹದೇವಮ್ಮ,ಶ್ರೀನಿವಾಸ್,ಸೋಮಣ್ಣ, ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
