ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ 1818 ಜನವರಿ 01ರಂದು 500 ಮಂದಿ ಮಹಾರ್ ಸೈನಿಕರು, 28,000 ಮಂದಿ ಪೇಶ್ವೆಗಳ ಶೋಷಣೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ, ಯುದ್ಧ ಗೆದ್ದು ಬಂದ ಈ ನೆನಪನ್ನು ನಾವೆಲ್ಲ ಸ್ಮರಿಸಿಕೊಳ್ಳುವ ದಿನ ಇದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಸ್ಮರಿಸಿದರು.
ದಾವಣಗೆರೆಯಲ್ಲಿ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಹಿರಿಯರು ಹಾಗೂ ಬಾಬಾ ಸಾಹೇಬರು ಕೋರೆಗಾಂವ್ ವಿಜಯೋತ್ಸವ ಆಚರಿಸುವ ಮೂಲಕ ನಮ್ಮೆಲ್ಲರಿಗೂ ಈ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸಿದ್ದಾರೆ” ಎಂದರು.
ತಾಲೂಕು ಸಂಚಾಲಕ ಅಣಜಿ ಹನುಮಂತಪ್ಪ ಮಾತನಾಡಿ, “ನೂರಾರು ವರ್ಷಗಳ ಹಿಂದೆ ಅಸ್ಪೃಶ್ಯರ ಹಕ್ಕು ಪಡೆಯಲು ಹೋರಾಡಿ ಹುತಾತ್ಮರಾದ ಮತ್ತು ಯುದ್ಧ ಗೆದ್ದ ನಮ್ಮ ಹಿರಿಯರಿಗೆ ಗೌರವ ಸಮರ್ಪಣೆ ಮಾಡಲು ಹೆಮ್ಮೆಯಿಂದ ಈ ಆಚರಣೆ ಮಾಡಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕೇಬಲ್ ಹಾಕಲು ಕೆಪಿಟಿಸಿಎಲ್ ಅಗೆದ ರಸ್ತೆ ದುರಸ್ತಿಗೆ ಎಂಸಿಸಿ ಸೂಚನೆ
ಸಂಭ್ರಮಾಚರಣೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮೀ, ಜಿಲ್ಲಾ ಕಲಾ ಮಂಡಳಿ ಸದಸ್ಯ ದೊಡ್ಡಪ್ಪ ಅವರಗೋಳ್ಳ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಗುಮ್ಮಾನೂರ್ ಹನುಮಂತಪ್ಪ, ತಾಲೂಕು ಸಂಘಟನಾ ಸಂಚಾಲಕರುಗಳಾದ ನಿಂಗಪ್ಪ ಅಣಜಿ, ಚಿತ್ತಾನಹಳ್ಳಿ ನಾಗರಾಜ್, ಹಾಲೇಶ್ ಕುಂದುವಾಡ, ನಗರ ಸಂಚಾಲಕ ಶಿವಶಂಕರ್ ಎಸ್ ಎಂ, ತಾಲೂಕು ಮಹಿಳಾ ಸಂಚಾಲಾಕಿ ಆರತಿ ಚಿತ್ತಾನಹಳ್ಳಿ ಹಾಗೂ ಹೋಬಳಿ ಸಂಚಾಲಕ ನಾಗರಾಜ್ ಹುಚ್ಚವ್ವನಹಳ್ಳಿ, ಹೋಬಳಿ ಸಂಘಟನಾ ಸಂಚಾಲಕ ತ್ಯಾಗರಾಜ ಸೇರಿದಂತೆ ಇತರರು ಇದ್ದರು.