ವಕೀಲ ಈರಣ್ಣಗೌಡರ ಹತ್ಯೆಯನ್ನು ಡಿಐಜಿಯವರಿಂದ ತನಿಖೆ ನಡೆಸಿ ಎಲ್ಲ ಹಂತಕರನ್ನು ಕೂಡಲೇ ಬಂಧಿಸಬೇಕು. ಮೃತರ ಕುಟುಂಬ ವರ್ಗದವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್ ಎಚ್ ಅರುಣ್ ಕುಮಾರ್ ಒತ್ತಾಯಿಸಿದರು.
ಕಲಬುರಗಿಯ ವಕೀಲರ ಸಂಘದ ಸದಸ್ಯ ಈರಣ್ಣ ಗೌಡ ಎಂಬುವವರನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲು ಆಗ್ರಹಿಸಿ ದಾವಣಗೆರೆ ಜಿಲ್ಲೆ ವಕೀಲರ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ದುಷ್ಕರ್ಮಿಗಳಿಬ್ಬರು ಹಾಡಹಗಲಲ್ಲೇ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆ ಮಾಡಿದ ಹಂತಕರನ್ನು ಬಂಧಿಸಬೇಕು. ಕರ್ನಾಟಕದಂತ ವಕೀಲರ ಮೇಲೆ ಇದೇ ರೀತಿ ಹಲ್ಲೆಗಳು ಪದೇಪದೆ ನಡೆಯುತ್ತಿದ್ದು, ತಾಲೂಕು, ಜಿಲ್ಲೆ, ರಾಜ್ಯದ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ಮಾಡಿದ್ದರೂ ಕೂಡ ಪೊಲೀಸರು ಮತ್ತು ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
“ವಕೀಲರಿಗಾಗಿ ಸುರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು. ರಾಜ್ಯದ್ಯಂತ ಪದೇಪದೆ ವಕೀಲರ ಮೇಲೆ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಲೆಗೀಡಾದ ಈರಣ್ಣ ಸೂಕ್ತ ವಕೀಲರ ಕುಟುಂಬಸ್ಥರಿಗೆ ಪರಿಹಾರ ಒದಗಿಸಬೇಕು. ವಕೀಲ ಈರಣ್ಣ ಗೌಡರ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು” ಎಂದು ವಕೀಲರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಎಚ್ ಅರುಣ್ ಕುಮಾರ್, ಕಾರ್ಯದರ್ಶಿ ಎಸ್ ಬಸವರಾಜ್, ಉಪಾಧ್ಯಕ್ಷ ಜಿ ಕೆ ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎ ಎಸ್ ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಾಗೀಶ್ ಕಟಗಿಹಳ್ಳಿ ಮಠ, ಭಾಗ್ಯಲಕ್ಷ್ಮಿ, ಎಂ ಚೌಡಪ್ಪ, ಸಂತೋಷ್ ಕುಮಾರ್, ರಾಘವೇಂದ್ರ ಎಂ, ಅಜ್ಜಯ್ಯ ಅವರಗೆರೆ, ನಾಗರಾಜ್ ಎಲ್, ಮುಸ್ತಾಕ್ ಅಹ್ಮದ್ ಮೌಲ್ವಿ, ಎಚ್ ಎಸ್ ಯೋಗೀಶ್ ಗುಮ್ಮನೂರು ಮಲ್ಲಿಕಾರ್ಜುನ್, ಚಂದ್ರಶೇಖರ್, ಆಂಜನೇಯ ಗುರೂಜಿ, ಧನಂಜಯ, ಎಸ್ ನಾಗರಾಜ್, ಆರ್ ಬಸವರಾಜ್, ಸಲೀಂ, ಹೆಚ್ ಎಸ್ ಗುರುಮೂರ್ತಿ, ಜಿ.ಕೆ.ಬಸವರಾಜ್, ಅಲಮೇಲು ಸೇರಿದಂತೆ ಇತರರು ಇದ್ದರು.