ದಾವಣಗೆರೆ | ವಿದ್ಯುತ್ ಪರಿವರ್ತಕದಿಂದ ಬೆಂಕಿ; ಆತಂಕದಲ್ಲೇ ದಿನದೂಡುತ್ತಿರುವ ಸ್ಥಳೀಯರು

Date:

Advertisements

ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿಗಳು ಹೊತ್ತಿಕೊಳ್ಳುತ್ತಿದ್ದು, ಯಾವಾಗ ಅವಘಡ ಸಂಭವಿಸುವುದೋ ಎಂದು ಅಲ್ಲಿ ವಾಸಿಸುವ ಅಕ್ಕಪಕ್ಕದ ಮನೆಗಳ ಜನರು ಭೀತಿಯಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ಪರಿಹರಿಸಬೇಕಾಗಿದ್ದ ವಿದ್ಯುತ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಜನವಸತಿ ಪ್ರದೇಶದಲ್ಲಿ ಬುಡಾನ್ ಸಾಬ್ ಎಂಬುವವರ ಮನೆ ಎದುರೇ ಈ ವಿದ್ಯುತ್ ಪರಿವರ್ತಕವಿದೆ. ಈ ಪರಿವರ್ತಕದಿಂದ ಆಗಾಗ ಬೆಂಕಿ ಕಿಡಿಗಳು ಚಿಮ್ಮುತ್ತಿದ್ದು, ರಸ್ತೆಯಲ್ಲಿ ಓಡಾಡುವ ಬೀದಿಯ ಜನರ ಮೇಲೆ ಯಾವಾಗ ಕಿಡಿ ಬೀಳುವುದೋ? ಯಾರಿಗೆ ವಿದ್ಯುತ್ ಶಾಕ್ ತಗಲುವುದೋ? ಎಂಬ ಆತಂಕದ ಬದುಕಿನಲ್ಲೇ ಜನರು ಓಡಾಡುತ್ತಿದ್ದಾರೆ.

ವಿದ್ಯುತ್‌ ಪರಿವರ್ತಕ 1

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈಗಾಗಲೇ ಕಳೆದೆರಡು ದಿನಗಳ ಹಿಂದೆ ಈ ವಿದ್ಯುತ್ ಪರಿವರ್ತಕದಿಂದ ಬೆಂಕಿ ಹೊತ್ತಿಕೊಂಡು ಕೆಟ್ಟು ಹೋಗಿದೆ. ಅದರಿಂದ ಉಗುಳಿದ ಬೆಂಕಿಯ ಕಿಡಿಗಳು ಅಲ್ಲೇ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ. ಈ ಘಟನೆ ನಡೆದರೂ ಕೂಡ ಸ್ಥಳೀಯ ಬೆಸ್ಕಾಂ ಸಿಬ್ಬಂದಿಗಳಾಗಲಿ, ಪ್ರಸರಣ ಕೇಂದ್ರದ ಮುಖ್ಯಸ್ಥರು, ಎಂಜಿನಿಯರ್‌ಗಳಾಗಲಿ ಯಾರೂ ಕೂಡ ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಸೌಜನ್ಯಕ್ಕೂ ಕೂಡ ಅಲ್ಲಿ ಏನಾಗಿದೆ. ಏನು ಪರಿಹಾರ ಬೇಕೆಂಬುದನ್ನೂ ಕೂಡಾ ಕೂಡ ಕೇಳಿಲ್ಲ. ಪರಿವರ್ತಕ ಸುಟ್ಟು ಹೋಗಿದ್ದು, ಹಾಳಾದ ನಂತರ ಅದರ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ” ಎಂದು ಆರೋಪಿಸಿದರು.‌

Advertisements
ವಿದ್ಯುತ್‌ ಪರಿವರ್ತಕ 2

ಗ್ರಾಮ ಪಂಚಾಯಿತಿ ಸದಸ್ಯ ಮೊಸೀಮ್ ಮಾತನಾಡಿ, “ಗ್ರಾಮದ ಬುಡಾನ್ ಸಾಬ್ ಎಂಬುವರ ಮನೆ ಎದುರು ಟಿಸಿ ಇದೆ. ಟಿಸಿಯ ಎರಡೂ ಕಂಬಗಳ ನಡುವೆಯೇ ಮನೆಯ ಹೊರಗೆ, ಒಳಗೆ ಓಡಾಡಬೇಕು. ಆಗಾಗ ಟಿಸಿಯಿಂದ ಬೆಂಕಿಯ ಕಿಡಿಗಳು ಸಿಡಿಯುತ್ತವೆ. ಇದರಿಂದ ಕುಟುಂಬಸ್ಥರು ಭಯದಿಂದ ಬದುಕು ನೂಕುವಂತಾಗಿದೆ. ಪರಿವರ್ತಕದ ಮುಂದೆಯೇ ಜನರು, ಜಾನುವಾರುಗಳು ಓಡಾಡುವುದರಿಂದ ಸಾವು-ನೋವು ಸಂಭವಿಸಿದರೆ ಯಾರು ಹೊಣೆ? ವಿದ್ಯುತ್ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲ.‌ ವಿದ್ಯುತ್ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಲು ಅದರ ಸ್ಥಳಾಂತರ ವೆಚ್ಚವನ್ನು ಬುಡಾನ್ ಸಾಬ್ ಅವರೇ ಭರಿಸಲು ಹೇಳಿದ್ದಾರೆ” ಎಂದು ಆರೋಪಿಸಿದರು.‌

ವಿದ್ಯುತ್‌ ಪರಿವರ್ತಕ 5

“ಈ ಗ್ರಾಮ ಚನ್ನಗಿರಿ ತಾಲೂಕು ವ್ಯಾಪ್ತಿಗೆ ಒಳಪಟ್ಟರೂ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಇರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಹಾಗೂ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಳಿಕ ಶಾಸಕರು, ಸಂಬಂಧಪಟ್ಟ ವಿದ್ಯುತ್ ಸಹಾಯಕ ಎಂಜಿನಿಯರ್‌ಗೆ ಕರೆಮಾಡಿ ಸ್ಥಳಾಂತರ ಮಾಡಲು ತಿಳಿಸಿದ್ದಾರೆನ್ನುವ ಮಾಹಿತಿ ಇದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ಅನುದಾನ ನೀಡುವಂತೆ ಒತ್ತಾಯ

ಸಂತೆಬೆನ್ನೂರು ವಿದ್ಯುತ್ ಪ್ರಸರಣ ಕೇಂದ್ರದ ಸಹಾಯಕ ಅಭಿಯಂತರ ನಾಗರಾಜ್ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ ಮಾತನಾಡಿ, “ಇದು ಬಹಳ ದಿನಗಳಿಂದ ನಮ್ಮ ಗಮನದಲ್ಲಿದ್ದು, ಅಲ್ಲಿ ಪರಿವರ್ತಕ ಸ್ಥಳಾಂತರಿಸಲು ಜಾಗದ ಸಮಸ್ಯೆಯಿದೆ. ಗ್ರಾಮದ ಹೊರಕ್ಕೆ ತೆಗೆದುಕೊಂಡು ಹೋಗಿ ಹಾಕಿದರೆ ವಿದ್ಯುತ್ ಗುಣಮಟ್ಟ, ವೋಲ್ಟೇಜ್ ಕಡಿಮೆಯಾಗಿ ಜನರಿಗೆ ಸಮಸ್ಯೆಯಾಗುತ್ತದೆ. ಅಲ್ಲಿಯೇ ಕೆಲವು ಸ್ಥಳಗಳಲ್ಲಿ ಗುರುತು ಮಾಡಿದ್ದು, ಅಲ್ಲಿ ಸ್ಥಳೀಯರು ಅಡ್ಡಿಪಡಿಸುತ್ತಿದ್ದಾರೆ. ಇನ್ನೊಂದೆಡೆ ಖಾಲಿ ಜಾಗವಿದ್ದರೂ ಹತ್ತಿರದಲ್ಲಿ ಶಾಲೆಯಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಲ್ಲಿ ಟಿಸಿ ಅಳವಡಿಸಲಾಗುತ್ತಿಲ್ಲ. ಇದನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಶಾಸಕರಿಗೂ ತಿಳಿಸಿದ್ದು, ಗ್ರಾಮಸ್ಥರು ಸೂಕ್ತ ಸ್ಥಳ ನೀಡಿದರೆ ಶೀಘ್ರವೇ ಪರಿವರ್ತಕ ಸ್ಥಳಾಂತರಿಸಿಕೊಡುತ್ತೇವೆ” ಎಂದು ಮಾಹಿತಿ ನೀಡಿದರು.

“ಒಟ್ಟಿನಲ್ಲಿ ಯಾರಿಗೂ ತೊಂದರೆಯಾಗದಂತೆ ವಿದ್ಯುತ್ ಇಲಾಖೆಯು ಸೂಕ್ತವಾದ ಸ್ಥಳಕ್ಕೆ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವ ಕೆಲಸ ನಿರ್ವಹಿಸಲಿ” ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X