ಸಂವಿಧಾನದ ಉಳಿವಿಗಾಗಿ ʼಶಾಂತಿಯ ತೋಟ ದೇಶ ಉಳಿಸಿʼ ಸಂಕಲ್ಪ ಯಾತ್ರೆ ಆರಂಭಗೊಂಡಿದ್ದು, ಏಪ್ರಿಲ್ 5ರಂದು ದಾವಣಗೆರೆಗೆ ಆಗಮಿಸಿತು. ಯಾತ್ರೆಯನ್ನು ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಸ್ವಾಗತಿಸಿದರು.
ʼಸಂವಿಧಾನದ ಮೌಲ್ಯಗಳನ್ನು ಉಳಿಸುವುದು, ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸಮಾನತೆಯನ್ನು ಕಾಪಾಡುವುದು, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವʼವನ್ನು ಉತ್ತೇಜಿಸುವ ಗುರಿಯೊಂದಿಗೆ ಆಯೋಜಿಸಿರುವ ಸಂವಿಧಾನ ಉಳಿವಿಗಾಗಿ, ʼದೇಶ ಉಳಿಸಿ ಸಂಕಲ್ಪ ಯಾತ್ರೆ ದಾವಣಗೆರೆಗೆ ಆಗಮಿಸಿದ ವೇಳೆ ನಗರದ ಜಯದೇವ ವೃತ್ತದಲ್ಲಿ ಪ್ರಗತಿಪರ ಮುಖಂಡರು, ಸಾರ್ವಜನಿಕರೊಂದಿಗೆ ಸಭೆ ಸಂವಾದ ಕಾರ್ಯಕ್ರಮ ನೆಡೆಸಿ ಸಂವಿಧಾನ, ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾರ್ವಜನಿಕರ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ, ಭಾರತದಲ್ಲಿ ನೆಡೆಯುತ್ತಿರುವ ಜನವಿರೋಧಿ ರೈತ, ಕಾರ್ಮಿಕ ವಿರೋಧಿ ನೀತಿ, ಶೋಷಣೆಗಳ ಬಗ್ಗೆ, ಅವುಗಳ ಪರಿಹಾರಕ್ಕೆ ಚುನಾವಣೆಯಲ್ಲಿರುವ ಅವಕಾಶಗಳ ಕುರಿತು ಮುಖಂಡರು ಮಾಹಿತಿ ನೀಡಿದರು.
“ಯಾತ್ರೆ ಮುಂದುವರೆದು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಲಿದೆ. ಯಾತ್ರೆಯು ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ” ಎಂದು ಮುಖಂಡರು ತಿಳಿಸಿದರು.
ಯಾತ್ರೆ ನಗರದ ಹದಡಿ ರಸ್ತೆಯಲ್ಲಿ ಮೆರವಣಿಗೆ ಹೊರಟು ಜಯದೇವ ವೃತ್ತದವರೆಗೆ ಸಾಗಿತು. ನಂತರ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು. ಕೊನೆಯಲ್ಲಿ, ಹೋರಾಟಗಾರರು ಮತ್ತು ಸಂಘಟನೆಯ ಮುಖಂಡರೊಂದಿಗೆ ಸಂವಾದ ನಡೆಯಿತು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಕಾಂಗ್ರೆಸ್ ಪ್ರಣಾಳಿಕೆ ದೇಶದ ಅಭ್ಯುದಯಕ್ಕೆ ಸಹಕಾರಿ: ಅನಿಲ್ ಕುಮಾರ್ ತಡಕಲ್
ಈ ಸಂದರ್ಭದಲ್ಲಿ ಅಪ್ಪಾ ಸಾಹೆಬ್, ಉಮೇಶ್ ಆವರಗೆರೆ, ಅನೀಸ್ ಪಾಷಾ, ಚಂದ್ರು ಆವರಗೆರೆ, ಆದಿಲ್ ಖಾನ್, ಜಮೀನು ಖಾನಂ, ಪವಿತ್ರ ಸತೀಶ್, ಸತೀಶ್ ಅರವಿಂದ್, ರಾಮಾಂಜನೇಯ, ನಿಜಾಮುದ್ದೀನ್ ದಾವಣಗೆರೆ ಸೇರಿದಂತೆ ಮುಂತಾದವರು ಇದ್ದರು.
