ದಾವಣಗೆರೆ | ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪುಗಳ ಅಳವಡಿಕೆ; ದಸಂಸ ಆಕ್ರೋಶ

Date:

Advertisements

ಮನೆ, ಮನೆಗೆ ಕುಡಿಯುವ ನೀರು ತಲುಪಿಸಲು ಅಳವಡಿಸಿರುವ ಪೈಪುಗಳಲ್ಲಿ ಬಹುತೇಕ ಪೈಪುಗಳು ಚರಂಡಿಗಳಲ್ಲಿವೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ಹೊರವಲಯದಲ್ಲಿರುವ ಗುತ್ತೂರು ಗ್ರಾಮದ ಊರು ಬಾಗಿಲು, ಎ ಕೆ ಕಾಲೋನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳಲ್ಲೇ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್ ಆರೋಪಿಸಿದ್ದಾರೆ.

ಜಿಲ್ಲೆಯ ಹರಿಹರ ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ದಸಂಸ ಕಾರ್ಯಕರ್ತರು ಸ್ಥಳ ಪರಿಶೀಲನೆ ನಡೆಸಿದಾಗ “ಹರಿಹರದಲ್ಲಿ ಕೆಯುಐಡಿಎಫ್‌ಸಿ, ಕೆಐಯುಡಬ್ಲ್ಯೂ, ಎಂಐಪಿ, ಪಿಐಯು ಸಂಸ್ಥೆಗಳಿಂದ ಜಾರಿಯಾಗುತ್ತಿರುವ ಜಲಸಿರಿ ಕುಡಿಯುವ ನೀರಿನ ಯೋಜನೆಯ ನ್ಯೂನತೆಗಳು ನಿತ್ಯವೂ ಹೊರ ಬರುತ್ತಿವೆ. ಗ್ರಾಮದ ಮುಖ್ಯ ರಸ್ತೆ, ಓಣಿಗಳ ಕ್ರಾಸ್ ರಸ್ತೆಗಳಲ್ಲಿ ಸದರಿ ಜಲಸಿರಿ ಪೈಪುಗಳ ಜಾಯಿಂಟ್‌ಗಳು ಚರಂಡಿ ತ್ಯಾಜ್ಯದಲ್ಲಿ ಮುಳುಗಿವೆ” ಎಂದು ದೂರಿದರು.

“ಚರಂಡಿ ನೀರು ಸಣ್ಣ ಪ್ರಮಾಣದಲ್ಲಿ ಪೈಪಿನ ಒಳ ಹೊಕ್ಕಿದ್ದರೂ ಯಾರಿಗೂ ತಿಳಿಯುವುದಿಲ್ಲ. ಜನತೆ ಮಾತ್ರ ಇದು ಸ್ವಚ್ಚ ನೀರೆಂದು ಸೇವಿಸುತ್ತಾರೆ. ಕುಟುಂಬದ ಸದಸ್ಯರ ಆರೋಗ್ಯ ಹದಗೆಟ್ಟರೆ ಯಾರು ಜವಾಬ್ದಾರರು?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

“ಈ ಹಿಂದೆ ಜಲಸಿರಿ ನ್ಯೂನತೆಗಳ ಬಗ್ಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇವರಿಗೆ ಸಂಘಟನೆಯಿಂದ ದೂರು ನೀಡಿದ ನಂತರ ನಗರದ ಕೆಲವೆಡೆ ಚರಂಡಿಗಳಲ್ಲಿ ಹಾದು ಹೋಗಿರುವ ನೀರಿನ ಪೈಪುಗಳಿಗೆ ಹೊದಿಕೆ ಪೈಪುಗಳನ್ನು ಅಳವಡಿಸಲಾಗಿದೆ. ಆದರೆ ಚರಂಡಿ ಬಿಟ್ಟು ಬೇರೆಡೆಗೆ ನೀರಿನ ಪೈಪುಗಳನ್ನು ಸ್ಥಳಾಂತರಿಸಿಲ್ಲ. ಚರಂಡಿ ಹಾಗೂ ಒಳಚರಂಡಿ ಪೈಪುಗಳಿಂದ 8 ಅಡಿ ಅಂತರದಲ್ಲಿ ಜಲಸಿರಿ ನೀರಿನ ಪೈಪುಗಳನ್ನು ಅಳವಡಿಸಬೇಕೆಂದು ಸರ್ಕಾರ ಸ್ವಷ್ಟವಾಗಿ ನೀತಿ ರೂಪಿಸಿದ್ದರೂ ಕೆಯುಐಡಿಎಫ್‌ಸಿ, ಕೆಐಯುಡ‌ಬ್ಲ್ಯೂ, ಎಐಪಿ, ಪಿಐಯು ಸಂಸ್ಥೆಗಳು ಈ ನಿಯಮಗಳನ್ನು ಗಾಳಿಗೆ ತೂರಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಗ್ರಾಮ ಪಂಚಾಯತಿ ನಿರ್ಲಕ್ಷ್ಯ; ನಿವಾಸಿಗಳಿಂದಲೇ ಚರಂಡಿ ಸ್ವಚ್ಛತೆ ಕಾರ್ಯ

“ನಗರದಲ್ಲಿ ಜಲಸಿರಿ ಯೋಜನೆ ಜಾರಿಯಲ್ಲಿ ತೊಡಗಿರುವ ಸಂಸ್ಥೆಯ ಇಂಜಿನಿಯರ್‌ಗಳು, ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಬೇಕು. ಹರಿಹರದ ಜನರ ಆರೋಗ್ಯವನ್ನು ಕಾಪಾಡಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಯ ನ್ಯೂನತೆಗಳನ್ನು ಸರಿಪಡಿಸದಿದ್ದರೆ ನಗರಸಭೆ ಎದರು ಸಂಘಟನೆಯಿಂದ ಪ್ರತಿಭಟನೆ ಕೈಗೊಂಡು, ತನಿಖಾ ಸಂಸ್ಥೆಗಳಿಗೆ ದೂರು ನೀಡಿ ಹೋರಾಟ ಮುಂದುವರೆಸಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X