ದಾವಣಗೆರೆ | ಜಗಜೀವನ್ ರಾಮ್ ಚರ್ಮ ಕೈಗಾರಿಕಾ ತರಬೇತಿ ಕೇಂದ್ರ ನಡೆಸದಂತೆ ಸವರ್ಣೀಯರ ತಡೆ; ಆರೋಪ

Date:

Advertisements

ಜಗಜೀವನ್ ರಾಮ್ ಚರ್ಮ ಕೈಗಾರಿಕಾ ತರಬೇತಿ ಕೇಂದ್ರವನ್ನು ನಡೆಸದಂತೆ ಸವರ್ಣೀಯರು ತಡೆಯುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ಆರೋಪಿಸಿದ್ದಾರೆ.

ದಸಂಸ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. “ಜಿಲ್ಲೆಯ ಜಗಳೂರು ತಾಲೂಕಿನ ಆಡಳಿತ ವತಿಯಿಂದ ತೊರೆಸಿದ್ದಿಹಳ್ಳಿ ಗ್ರಾಮದ ಸರ್ವೆ ನಂಬರ್‌ 75ರ 2ಎಕರೆ ಜಮೀನಿನಲ್ಲಿ ಜಗಜೀವನರಾಂ ಚರ್ಮ ಕೈಗಾರಿಕಾ ತರಬೇತಿ ಕೇಂದ್ರ ಮಂಜೂರಾಗಿದ್ದು, ಸದರಿ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ 1.65 ಕೋಟಿ ಮಂಜೂರಾಗಿದ್ದು, ದಲಿತರಿಗೆ ಉದ್ಯೋಗದ ಜತೆಗೆ ಸುಮಾರು 50 ರಿಂದ 60 ಆರ್‌ಸಿಸಿ ಮನೆಗಳು ಹಾಗೂ ತರಬೇತಿ ಕೇಂದ್ರ ನಿರ್ಮಿಸಲು ಅನುದಾನ ಮಂಜೂರಾಗಿದೆ. ಆದರೆ ಗ್ರಾಮದ ಪಟ್ಟಭದ್ರ ಹಿತಾಸಕ್ತಿವುಳ್ಳ ವ್ಯಕ್ತಿಗಳು ಹೇಗಾದರೂ ಮಾಡಿ ತರಬೇತಿ ಕೇಂದ್ರ ನಡೆಸುವುದನ್ನು ತಡೆಯಬೇಕೆಂಬ ಹುನ್ನಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ತಮಲ್ಲಿರುವ ರಾಜಕೀಯ ಮತ್ತು ಹಣದ ಪ್ರಭಾವವನ್ನು ಬಳಸಿ ದಲಿತ ನಾಯಕರನ್ನು ಎತ್ತಿಕಟ್ಟಿ ತರಬೇತಿ ಕೇಂದ್ರದ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಕೇಂದ್ರಕ್ಕೆ ನಿರಂತರವಾಗಿ ಶ್ರಮಿಸಿದ ಮಹದೇವ, ರುದ್ರಮುನಿ, ಆರ್ ರಮೇಶ, ಟಿ ರಮೇಶ, ರವಿ, ಧನಂಜಯಪ್ಪ, ಯಲ್ಲಪ್ಪ, ಡಿ.ತಿಪ್ಪೇಸ್ವಾಮಿ, ಪ್ರಸನ್ನ, ಜಯಣ್ಣ, ಚಂದ್ರಪ್ಪ, ರಾಮಪ್ಪ ಮುಂತಾದ ಸಂಗಡಿಗರಿಗೆ ವಿನಾಕಾರಣ ಹಲ್ಲೆ ಮಾಡುವುದು, ಇವರ ವಿರುದ್ಧ ಸುಳ್ಳು ದೂರು ದಾಖಲಿಸುವುದನ್ನು ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

“ಮಹಂತೇಶ್‌ ವಿರುದ್ಧ ಸುಳ್ಳು ದೂರು ದಾಖಲಿಸಿ, ಇವರನ್ನು ಜೈಲಿಗೂ ಕಳುಹಿಸಿದ್ದಾರೆ. ಇಷ್ಟಾದರೂ ಛಲ ಬಿಡದ ಈ ಯುವಕರು ದಲಿತರ ಬಾಳು ಹಸನಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ಹೋರಾಡುತ್ತಿದ್ದಾರೆ. ಇವರಿಂದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ತರಬೇತಿ ಕೇಂದ್ರವನ್ನು ಮಾಡಿದರೆ, ದಲಿತರಿಗೆ ಉದ್ಯೋಗ, ವಸತಿ ದೊರಕುವುದರ ಜೊತೆಗೆ ದಲಿತರ ಜೀವನ ಉದ್ಧಾರವಾಗುತ್ತದೆಂದು ಮನಗಂಡ ಸಿದ್ಧಿಹಳ್ಳಿ ಗ್ರಾಮದ ಸವರ್ಣೀಯರು ನಮ್ಮ ಹೊಲಕ್ಕೆ ಮತ್ತು ಮನೆಗಳಿಗೆ ಕೆಲಸಗಾರರು, ಇಲ್ಲದಂತಾಗುತ್ತದೆಂದು ತರಬೇತಿ ಕೇಂದ್ರ ತಡೆಗೆ ಮುಂದಾಗಿದ್ದಾರೆ” ಎಂದರು.

“ತಮ್ಮಲ್ಲಿರುವ ಹಣಕೊಟ್ಟು ರಾಜಕೀಯ ಪ್ರಭಾವ ಬಳಸಿಕೊಂಡು ಈ ಯುವಕರ ಮೇಲೆ ನಿರಂತರವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಪೊಲೀಸರೂ ಕೂಡ ಈ ಯುವಕರಿಗೆ ರಕ್ಷಣೆಯನ್ನು ನೀಡುತ್ತಿಲ್ಲ. ಯುವಕರು ದೂರು ನೀಡಿದರೆ ಸ್ಪಂದಿಸುತ್ತಿಲ್ಲ. ಬದಲಾಗಿ ನಿರ್ಲಕ್ಷ್ಯವಹಿಸುವುದು ಮತ್ತು ಪೊಲೀಸರೇ ಯುವಕರಿಗೆ ಬೆದರಿಸುವುದು, ಭಯಹುಟ್ಟಿಸುವುದು, ಮಾಡುವುದಲ್ಲದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಯುವಕರು ನೀಡಿದ ದೂರಿಗೆ ‘ಬಿ’ ವರದಿಯನ್ನು ಸಲ್ಲಿಸಿ, ಯುವಕರುಗಳ ಮೇಲೆ ಚಾರ್ಜ್ ಶೀಟ್‌ ಹಾಕುತ್ತ ಬಂದಿದ್ದಾರೆ. ಈ ಅಂಶವನ್ನು ಗಮನಿಸಿದರೆ ಪೊಲೀಸರೂ ಕೂಡ ತೊರೆಸಿದ್ದಿಹಳ್ಳಿ ಗ್ರಾಮದ ಉನ್ನತ ಜಾತಿಯವರ ಪ್ರಭಾವಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ನಮ್ಮ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿರುವುದಕ್ಕೆ ನಮ್ಮ ಬಳಿ ದಾಖಲಾತಿಗಳಿವೆ ಅವುಗಳನ್ನು ನೀಡುತ್ತೇವೆ” ಎಂದರು.

“ಆಶ್ಚರ್ಯಕರ ಸಂಗತಿ ಎಂದರೆ, ಜಗಳೂರು ತಾಲೂಕಿನ ಕೆಲ ದಲಿತ ನಾಯಕರುಗಳು ನಮ್ಮಗಳ ವಿರುದ್ಧವೇ ಪತ್ರಿಕಾಗೋಷ್ಠಿ ಮಾಡಿರುವುದು ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಈ ಪತ್ರಿಕಾಗೋಷ್ಠಿಯಲ್ಲಿ ದಲಿತ ನಾಯಕರು, ತೊರೆಸಿದ್ದಿಹಳ್ಳಿ ಗ್ರಾಮದಲ್ಲಿ ಎಲ್ಲರೂ ಸಹೋದರರಾಗಿ ಬದುಕುತ್ತಿರುವುದಾಗಿ ಹೇಳಿರುವುದು ಆಶ್ಚರ್ಯ ಉಂಟುಮಾಡಿದೆ. ಈ ನಾಯಕರು ಎಂದೂ ತೊರೆಸಿದ್ದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ತೊರೆಸಿದ್ದಿಹಳ್ಳಿಯ ದಲಿತರ ಪರಿಸ್ಥಿತಿ ಆಲಿಸಿಲ್ಲ, ಕೇವಲ ತೊರೆಸಿದ್ದಿಹಳ್ಳಿ ಗ್ರಾಮದ ಸವರ್ಣೀಯರನ್ನು ಓಲೈಸಲು ಜಗಳೂರು ತಾಲೂಕಿನ ದಲಿತ ನಾಯಕರೇ, ದಲಿತರನ್ನು ಕೊಲ್ಲುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಗ್ರಾಮದಲ್ಲಿ ಡಾ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ತರಬೇತಿ ಕೇಂದ್ರವನ್ನು ನಿರ್ಮಿಸಲು ಸಹಕರಿಸಬೇಕೆಂದು ತಮ್ಮಲ್ಲಿ ಮನವಿ ಮತ್ತು ಸದರಿ ಭವನಕ್ಕೆ ಹೋರಾಟ ಮಾಡುತ್ತಿರುವ ಯುವಕರಿಗೂ ಹಾಗೂ ಅವರ ಕುಟುಂಬ ವರ್ಗಕ್ಕೂ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಈ ಸುದ್ದಿ ಓದಿದ್ದೀರಾ? ಅತ್ತಿಬೆಲೆ ಪಟಾಕಿ ದುರಂತ | ನಾಲ್ವರು ಅಧಿಕಾರಿಗಳ ಅಮಾನತು

“ನಮ್ಮ ಗ್ರಾಮದ ಕೆಲವು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ವಿಪರೀತವಾಗಿದ್ದು, ಮದ್ಯಪಾನ ಮಾಡಿ ನಮ್ಮ ಕುಟುಂಬ ವರ್ಗದವರ ಮೇಲೆ ಜಗಳ ಮಾಡುವುದು ನಮ್ಮ ಗ್ರಾಮದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಣಜಿ, ಹನುಮಂತಪ್ಪ, ದಸಂಸ ಪದಾಧಿಕಾರಿಗಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X