ದಾವಣಗೆರೆ | ಶಾಂತಿ, ಸಮೃದ್ಧಿಯ ನಾಡೇ, ಕನ್ನಡ ನಾಡು: ಚಿಂತಕ ವೀರಭದ್ರಪ್ಪ

Date:

Advertisements

ಶಾಂತಿ, ಸಮೃದ್ಧಿಯ ನಾಡು ಕನ್ನಡ ನಾಡು ಎಂದು ಸಾಹಿತಿ ಮತ್ತು ಚಿಂತಕ ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಪತ್ರಕರ್ತರ ಸಂಘ, ಕನ್ನಡಪರ ಸಂಘಟನೆಗಳು ಮತ್ತು ದಾವಣಗೆರೆ ಮಹಾನಗರ ಪಾಲಿಕೆ ಆಯೋಜಿಸಿರುವ ನಾಲ್ಕು ದಿನಗಳ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

“ದಾವಣಗೆರೆಯಲ್ಲಿನ ಕನ್ನಡ ರಾಜ್ಯೋತ್ಸವದ ಉತ್ಸಾಹ ನೋಡಿದರೆ ಕನ್ನಡ ಭಾಷೆ ಅರ್ಧ ಚಂದ್ರಾಕಾರವಾಗಿ ಉಳಿಯುತ್ತದೆ. ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಅಖಂಡತೆಗಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನೆಡೆಸಬೇಕು” ಎಂದು ಒತ್ತಾಯಿಸಿದರು.

Advertisements

“ವಿಷ್ಣು ಪುರಾಣದಲ್ಲಿಯೇ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬದು ಸಾವಿರಾರು ವರ್ಷಗಳ ಹಿಂದೆಯೇ ಉಲ್ಲೇಖವಾಗಿದೆ ಎಂದರೆ ಕನ್ನಡದ ಇತಿಹಾಸ ಹೇಗಿದೆಯೆಂದು ತಿಳಿಯಬಹುದು. ಕನ್ನಡಿಗರು ಪರಾಕ್ರಮಿಗಳು ಎನ್ನುವ ಮಾತು 8ನೇ ಶತಮಾನದಲ್ಲಿ ಕಪ್ಪೆ ಅರೆಭಟ್ಟನ ಶಾಸನದಲ್ಲಿಯೇ ತಿಳಿದುಬಂದಿದೆ. ಇಂತಹ ಕನ್ನಡ ನಾಡು ಸಕಲರಿಗೂ ಸಮೃದ್ಧಿ-ಶಾಂತಿ ಕೊಡುತ್ತದೆ. ಜಾಗತೀಕರಣ ಪ್ರಭಾವದಿಂದ ತೃತೀಯ ಜಗತ್ತಿನ 500 ಭಾಷೆಗಳು ನಶಿಸುತ್ತಿವೆಯೆಂದು ವರದಿಗಳು ಹೇಳುತ್ತಿವೆ. ಆದರೆ ಕನ್ನಡ ನಶಿಸುವುದಿಲ್ಲ. ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿ. ಕನ್ನಡದ ಸ್ಥಾನವನ್ನು ಬೇರೆ ಭಾಷೆ ಆಕ್ರಮಿಸಲು ಬಿಡಬಾರದು” ಎಂದು ಕರೆ ನೀಡಿದರು.‌

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, “ದಾವಣಗೆರೆಯ ಪಾಲಿಕೆ ಇತಿಹಾಸದಲ್ಲಿ ಇದು ಅದ್ದೂರಿ ಕನ್ನಡ ರಾಜ್ಯೋತ್ಸವ. ಈ ಹಿಂದೆ ಇಂತಹ ಕಾರ್ಯಕ್ರಮಗಳು ಪಾಲಿಕೆಯಲ್ಲಿ ನಡೆದಿಲ್ಲ. ಕನ್ನಡ ರಾಜ್ಯೋತ್ಸವದ ಹಬ್ಬಕ್ಕೆ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ. ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆ ಎಂದರೆ ದಾವಣಗೆರೆಯಿಂದಲೇ ಕನ್ನಡ ಉಳಿದಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಭಾಷೆಗಳ ಪ್ರಭಾವ ಹೆಚ್ಚಿದೆ. ಆದರೆ ಇಲ್ಲಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಪ್ರಭಾವವಿಲ್ಲ. ಕನ್ನಡ ಉಳಿಸುವ ಕರ್ತವ್ಯಕ್ಕೆ ಮಕ್ಕಳಿಗೆ ಕನ್ನಡ ಕಲಿಸಲು ಮುಂದಾಗಬೇಕು” ಎಂದು ತಿಳಿಸಿದರು.

ಮುಸ್ಲಿಂ ಧರ್ಮಗುರು ಜೈನಿ ಷಕಾಫಿರ್ ಮಾತನಾಡಿ, “ಕನ್ನಡದ ಮೇಲಿನ ಕನ್ನಡಿಗರ ಅಭಿಮಾನ ಗೌರವ ದೊಡ್ಡದು. ಇವತ್ತು ಕನ್ನಡಿಗರಿಂದಲೇ ಕನ್ನಡವನ್ನು ಕಾಪಾಡುವ ಪರಿಸ್ಥಿತಿ ಎದುರಾಗಿದೆ. ಎಲ್ಲ ಭಾಷೆಗಳಿಗಿಂತಲೂ ಬರೆಯಲು ಕನ್ನಡದ ಅಕ್ಷರಗಳೇ ಚೆಂದ. ಕನ್ನಡ ಭಾಷೆಯ ಮೇಲಿನ ದಾಳಿ, ಕನ್ನಡದ ಪರಂಪರೆ, ಸಂಸ್ಕೃತಿ ಮೇಲೆ ದಾಳಿ. ಹಾಗಾಗಿ ಕನ್ನಡದ ಮೇಲಿನ ದಾಳಿಯನ್ನು ನಾವು ಹಿಮ್ಮೆಟ್ಟಿಸಬೇಕು. ಕನ್ನಡವೆಂದರೆ ಮಾನವರನ್ನು ಬೆಸೆಯುವ, ಕೂಡಿಸುವ ಭಾಷೆ. ಒಂದು ರಾಜ್ಯ ಹಲವು ಜಗತ್ತುಗಳು ಎನ್ನುವಂತೆ ಎಲ್ಲ ವೈವಿಧ್ಯತೆ ಕನ್ನಡ ನಾಡಿನಲ್ಲಿವೆ” ಎಂದು ಅಭಿಪ್ರಾಯಪಟ್ಟರು.

ಮಾಯಕೊಂಡ ಶಾಸಕ ಬಸವಂತಪ್ಪ ಮಾತನಾಡಿ, “ಇಡೀ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಕನ್ನಡ ಮಾತಾಡುವ ಪ್ರದೇಶ ದಾವಣಗೆರೆ. ನಮ್ಮಲ್ಲಿ ಹಲವು ಕನ್ನಡಪರ ಹೋರಾಟಗಾರರ ಸಂಘಟನೆಗಳಿವೆ. ಆದರೆ ಕನ್ನಡ ಹೋರಾಟಗಾರರ ಅವಶ್ಯಕತೆ ನಮಗಿಂತಲೂ ಬೆಳಗಾವಿ, ಬಳ್ಳಾರಿ, ಬೆಂಗಳೂರು ತರಹದ ಗಡಿಬಾಗದಲ್ಲಿ ಬೇಕಿದೆ. ಕಾಂಗ್ರೆಸ್ ಸರ್ಕಾರ ಕನ್ನಡ ನಾಮಫಲಕ ಕಡ್ಡಾಯಗೊಳಿಸಿದೆ. ನಮ್ಮ ಮನೆಯಲ್ಲಿ ಮಾತೃ ಭಾಷೆ ಯಾವುದೇ ಇದ್ದರೂ ಹೊರಗಡೆ ಕನ್ನಡ ಬಳಸೋಣ” ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ ಮಾತನಾಡಿ “1928 ರಿಂದಲೇ ಭಾಷಾವಾರು ಪ್ರಾಂತ್ಯ ರಚನೆ ಹೋರಾಟ ಪ್ರಾರಂಭವಾಯಿತು. ನೆಹರುರವರ ಮುಂದಾಳತ್ವದ ಸಮಿತಿ ಆಗಲೇ ರಾಜ್ಯಗಳ ರಚನೆಗೆ ವರದಿ ನೀಡಿತ್ತು. ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯಗಳ ರಚನೆಯಾಗಿ, 1956ರಲ್ಲಿ ಕರ್ನಾಟಕ ರಾಜ್ಯ ರಚನೆಯಾಯಿತು. ರಚನೆಯಲ್ಲಿ ಕುವೆಂಪು, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣ ರಾಯರು, ದರಾ ಬೇಂದ್ರೆ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ನಿಮ್ಮೆಲ್ಲರದು” ಎಂದು ತಿಳಿಸಿದರು..
 
ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, “ಕನ್ನಡದ ಶಕ್ತಿ ಎಂದರೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಮಂದಿ ಕವಿಗಳು ಕನ್ನಡ ಭಾಷೆ ಓದಿದವರು. ಶರಣರು ವಚನಗಳನ್ನು ,ದಾಸರು ಪದಗಳನ್ನು, ಸರ್ವಜ್ಞ ತ್ರಿಪದಿಗಳ ರೀತಿ ಬೇರೆ ಬೇರೆ ಕವಿಗಳು ಗದ್ಯ, ಕಾವ್ಯ, ರಚಿಸಿ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಿ ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಮಾತೃ ಭಾಷೆ ಬೇರೆ ಇದ್ದರೂ ಜೋಗದ ಸಿರಿ ಬೆಳಕಿನಲ್ಲಿ ರಚಿಸಿ ಕನ್ನಡ ಸೇವೆಗೈದ ನಿಸಾರ್ ಅಹಮದ್ ನೆನಪಾಗುತ್ತಾರೆ. ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆಂಗಲ್ ಚಂಡಮಾರುತ; ಹಲವೆಡೆ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ

ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದ ಸಿ ವೇದಮೂರ್ತಿ, ಸಿದ್ದಯ್ಯ ಹಿರೇಮಠ, ಅಲ್ಲಾಭಕ್ಷಿ, ದೇವಿಕಾ ಸುನಿಲ್, ಶಿವರಾಜ್ ಈಳಿಗೇರ, ಬಿ ಕೆ ಕಾವ್ಯ ಸೇರಿದಂತೆ ರಂಗಭೂಮಿ, ಸಾಹಿತ್ಯ, ಕಲೆ, ಶಿಕ್ಷಣ, ಸಮಾಜ ಸೇವೆಯಲ್ಲಿ ತೊಡಗಿರುವ ಹಲವಾರು ಸಾಧಕರಿಗೆ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ರೇಣುಕಾ ಮಹಾಪೌರ ಚಮನ್ ಸಾಬ್, ಪಾಲಿಕೆ ಸದಸ್ಯ ಆಯುಬ್ ಖಾನ್, ವಿನಾಯಕ್ ಪೈಲ್ವಾನ್, ಗಡಿಗುಡಾಲ್ ಮಂಜುನಾಥ್ , ಪ್ರಸನ್ನ ಕುಮಾರ್, ಮಾಜಿ ಮಹಾಪೌರರಾದ ವೀರೇಶ್, ದೂಡ ಅಧ್ಯಕ್ಷ ದಿನೇಶ್ ಶೆಟ್ಟಿ, ವರದಿಗಾರರಾದ ವರದರಾಜ್ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಯಲ್ಲಪ್ಪ ಸೇರಿದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಾನಗರ ಪಾಲಿಕೆ ನೌಕರರು, ಪೌರಕಾರ್ಮಿಕರು, ಸಾರ್ವಜನಿಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X