ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡೋಣ ಎಂದು ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಕರೆ ನೀಡಿತು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಸಭೆಯಲ್ಲಿ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, “ಪ್ರಭಾ ಮಲ್ಲಿಕಾರ್ಜುನ್ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಗೊತ್ತಿರುವ ವಿಚಾರ. ಸೌಮ್ಯ ಸ್ವಭಾವದವರಾಗಿದ್ದು, ವಿದ್ಯಾವಂತರಾಗಿದ್ದಾರೆ. ದಾವಣಗೆರೆ ಜನತೆಗೆ ಬಹು ಅಗತ್ಯವಾಗಿರುವಂತಹ ವ್ಯಕ್ತಿಯಾಗಿದ್ದು, ಅಂತಹ ಸಾಮಾಜಿಕ ಕಳಕಳಿ ಇರುವ ವಿದ್ಯಾವಂತರು ಹಾಗೂ ದಾವಣಗೆರೆ ಜಿಲ್ಲೆಯ ಪ್ರತಿ ಸಮಸ್ಯೆಗಳನ್ನು ಆಲಿಸುತ್ತಾ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂಥವರು” ಎಂದರು.
“ಎಸ್ ಎಸ್ ಕೇರ್ ಟ್ರಸ್ಟ್‌ನ ಮುಖ್ಯಸ್ಥರಾಗಿರುವ ಅವರು ಟ್ರಸ್ಟ್ ವತಿಯಿಂದ ದಾವಣಗೆರೆ ಜಿಲ್ಲಾದ್ಯಂತ ಆರೋಗ್ಯ ತಪಾಸಣೆ, ಉಚಿತ ಶಿಬಿರ ಸೇರಿದಂತೆ ಬಡವರ, ಜನಸಾಮಾನ್ಯರ ಸೇವೆ ಮಾಡುತ್ತಿದ್ದು, ಸಂಸದರಾದಲ್ಲಿ ಇನ್ನೂ ಹೆಚ್ಚು ಸೇವೆ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.
“ಜಿಲ್ಲೆಯ ಪ್ರತಿ ಮನೆಮನೆಗೂ ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಸದಸ್ಯರು ಹೋಗಿ ಮತಯಾಚಿಸಬೇಕು. ಅವರ ಗೆಲುವಿಗೆ ಹಗಲಿರುಳು ಕೆಲಸ ಮಾಡೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಹಣಗೆರೆಕಟ್ಟೆ ಗ್ರಾಮದಲ್ಲಿ ಗೀತಾ ಶಿವರಾಜಕುಮಾರ್ ಚುನಾವಣೆ ಪ್ರಚಾರ
ಅಭಿಮಾನಿ ಬಳಗದ ಅಧ್ಯಕ್ಷೆ ಶುಭಮಂಗಳ, ಸದಸ್ಯರುಗಳಾದ ಚಂದ್ರಶೇಖರ್ ಡೋಲಿ, ವಿನೋಬನಗರದ ಸಂದೇಶ್ ನಾಯಕ್, ವಿನಯ್, ಮಹೇಶ್, ಮಹಮ್ಮದ್ ಫೈಝೋ, ಕಾಂಗ್ರೆಸ್‌ನ ಹಿರಿಯ ಮುಖಂಡರುಗಳಾದ ನಂಜಾನಾಯಕ್, ಗಣೇಶ ಹುಲ್ಮನಿ, ಸಾಗರ್ ಎಲ್‌ಎಂಎಚ್, ಪಾಲಿಕೆ ಸದಸ್ಯರುಗಳಾದ ಸುಧಾ ಇಟ್ಟಿಗುಡಿ, ಮೀನಾಕ್ಷಿ ಜಗದೀಶ್, ಮುಖಂಡರುಗಳಾದ ಮಂಜುನಾಥ್ ಇಟ್ಟಿಗುಡಿ, ಜಗದೀಶ್ ಭಾರತ್ ಕಾಲೋನಿ, ರಂಗನಾಥ ಬೋದಾಳ, ಪರಮೇಶ್ವರ್ ಸೇರಿದಂತೆ ಇತರರು ಇದ್ದರು.
