ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಮಾದಿಗ ಯುವಕ ಮಾರುತಿ ಎಂಬಾತ ಜೆಸಿಬಿ ಚಾಲಕನಾಗಿದ್ದು, ಕೆಲಸದ ನಿಮಿತ್ತ ಗೊಲ್ಲರಹಟ್ಟಿ ಒಳಗೆ ಪ್ರವೇಶ ಮಾಡಿರುವುದನ್ನು ವಿರೋಧಿಸಿ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಚನ್ನಗಿರಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದರು.
ಮಾದಿಗ ಸಮಾಜದ ಮಾರುತಿ ಎಂಬ ಯುವಕ ಜೆಸಿಬಿ ಚಾಲಕನಾಗಿದ್ದು, ಕೆಲಸದ ನಿಮಿತ್ತ ಗ್ರಾಮಕ್ಕೆ ಪ್ರವೇಶ ಮಾಡಿದ್ದಾರೆ. ಒಂದು ಸಮುದಾಯದವರು ಜಾತಿಯನ್ನು ಕೇಳಿದಾಗ ಆ ಯುವಕ ಮಾದಿಗ ಜಾತಿಯವರು ಎಂದು ಹೇಳಿದ್ದಾರೆ. ಗ್ರಾಮದ ಕೆಲವು ವ್ಯಕ್ತಿಗಳು ಮಾದಿಗರು ಒಳಗೆ ಬರಬಾರದು ಎಂದು ಮನಸ್ಸೋ ಇಚ್ಛೆ ತಳಿಸಿದ್ದಾರೆ. ಅವರ ತಾಯಿಯನ್ನು ಕರೆಸಿ ಅವರಿಗೂ ಹೀನ-ಮಾನವಾಗಿ ನಿಂದಿಸಿ, ₹20,000 ಸಾವಿರ ದಂಡ ವಿಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಫೆ.2ರಿಂದ 4ರವರೆಗೆ ಹಂಪಿ ಉತ್ಸವ; ಜಿಲ್ಲಾಡಳಿತ ಸಿದ್ಧತೆ
“ಮಾದಿಗ ಜನಾಂಗದ ಮಾರುತಿ ಮೇಲೆ ಹಲ್ಲೆ ಖಂಡಿಸಿ ಹಲ್ಲೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು” ಎಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಡಿಎಸ್ಎಸ್ ತಾಲೂಕು ಸಂಚಾಲಕ ಚಿತ್ರಲಿಂಗಪ್ಪ ಗಾಂಧಿನಗರ ಉಮಾಪತಿ, ರಂಗನಾಥ್, ಹರೀಶ್ ಮಂಜುನಾಥ ಮಂಜಣ್ಣ ಚಿರಂಜೀವಿ ಹಿರೇಗಂಗೂರು, ಕುಬೇಂದ್ರ, ಸ್ವಾಮಿ, ಹಾಲೇಶ್, ರಮೇಶ್, ತಿಪ್ಪೇಶ್, ಶಿವಣ್ಣ, ಶಿವು, ಮಂಜುನಾಥ ಸೇರಿದಂತೆ ಇತರರು ಇದ್ದರು.