ಗ್ರಾಮದಲ್ಲಿ ದಾಂಧಲೆ ನಡೆಸುತ್ತಿದ್ದ ಕೋಣವನ್ನು ಓಡಿಸಲು ಹೋದ ವ್ಯಕ್ತಿಯನ್ನೇ ಕೋಣ ಗುದ್ದಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಎನ್ ಬಸವನಹಳ್ಳಿಯಲ್ಲಿ ಕೋಣವೊಂದನ್ನು ದೇವರ ಹೆಸರಿನಲ್ಲಿ ಬಿಡಲಾಗಿತ್ತು. ಅದು ಗ್ರಾಮದ ಎಮ್ಮೆಗಳು ಮೇಯುವ ಸ್ಥಳಕ್ಕೆ ದಾಂಧಲೆ ನಡೆಸುತ್ತಿತ್ತು. ಕೋಣದ ದಾಂಧಲೆಗೆ ಗ್ರಾಮದ ಜನರು ಬೇಸತ್ತಿದ್ದರು.
ಭಾನುವಾರ ಸಂಜೆಯೂ ಗ್ರಾಮದಲ್ಲಿ ಕೋಣ ಅವಾಂತರ ಸೇಷ್ಠಿಸಿದೆ. ಈ ವೇಳೆ ಅದನ್ನು ಓಡಿಸಲು ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಹೋಗಿದ್ದು, ಅವರನ್ನೇ ಗುದ್ದಿ ಕೊಂದಿದೆ.