ದಾವಣಗೆರೆ | ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್‌; ಜಿಲ್ಲಾಧಿಕಾರಿಯಿಂದ ಸನ್ಮಾನ

Date:

Advertisements

ದ್ವಿತೀಯ ಪಿಯುಸಿ ವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್‌ಸಿ ನಡೆಸುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ 101ನೇ ರ್‍ಯಾಂಕ್‌ ಪಡೆದ ಸೌಭಾಗ್ಯ ಬೀಳಗಿಮಠ ಅವರಿಗೆ ದಾವಣಗೆರೆ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ ವಿ ಅವರು ಅಭಿನಂದನಾ ಪತ್ರ ಹಾಗೂ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು.

“ದಾವಣಗೆರೆಯಲ್ಲಿ ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಯಾವುದೇ ಕೋಚಿಂಗ್ ಕೇಂದ್ರದಲ್ಲಿ ತರಬೇತಿ ಪಡೆಯದೆ ಪುಸ್ತಕಗಳನ್ನು ಓದುವ ಮೂಲಕ ಸ್ವಂತ ಓದಿನಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ರ್‍ಯಾಂಕ್‌ ಪಡೆದಿರುವುದಕ್ಕೆ ಹೆಮ್ಮೆಯಿಂದ ಸನ್ಮಾನಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿಯವರು ನಿಮ್ಮ ಸೇವಾ ಅವಧಿಯಲ್ಲಿ ಸಾಧನೆ ಮಾಡಿದವರಿಗೆ ಇದೇ ರೀತಿ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಿದಲ್ಲಿ ಅವರೂ ಕೂಡಾ ನಿಮ್ಮಂತೆ ಶ್ರಮಪಟ್ಟು ಓದುವ ಮೂಲಕ ಉನ್ನತ ಸ್ಥಾನಕ್ಕೇರುವರು” ಎಂದರು.

22 ವರ್ಷದ ಸೌಭಾಗ್ಯ ಬೀಳಗಿಮಠ ಅವರು ಪ್ರೌಢ ಶಿಕ್ಷಣವನ್ನು ದಾವಣಗೆರೆಯ ಜಿಲ್ಲಾಧಿಕಾರಿ ನಿವಾಸದ ಹತ್ತಿರವಿರುವ ಎಜು ಏಷಿಯಾ ಶಾಲೆಯಲ್ಲಿ ಮತ್ತು ಪಿಯುಸಿಯನ್ನು ಸಿದ್ದಗಂಗಾ ಶಾಲೆಯಲ್ಲಿ ಪೂರೈಸಿ ಧಾರವಾಡದಲ್ಲಿ ಕೃಷಿ ಪದವಿ ಪಡೆದಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬರಗಾಲ, ಬೆಲೆ ಏರಿಕೆ ಸಮಯದಲ್ಲಿ ಗ್ಯಾರಂಟಿಗಳು ಜನರ ಕೈ ಹಿಡಿದಿವೆ: ಗೀತಾ ಶಿವರಾಜ್‌ಕುಮಾರ್

ಈ ವೇಳೆ ಅಪರ ಜಿಲ್ಲಾಧಿಕಾರಿ ಆಫ್ರೀನ್ ಭಾನು ಸೈಯ್ಯದಾ ಎಸ್ ಬಳ್ಳಾರಿ, ಸೌಭಾಗ್ಯ ಬೀಳಗಿಮಠ ಇವರ ತಂದೆ ಶರಣಯ್ಯಸ್ವಾಮಿ, ತಾಯಿ ಶರಣಮ್ಮ, ಸಹೋದರ, ಮಾರ್ಗದರ್ಶನ ಮಾಡಿದ ಪ್ರೊಫೆಸರ್ ಡಾ ಅಶ್ವಿನಿ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ ಆರ್ ತಿಪ್ಪೇಸ್ವಾಮಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಫಸಲ್ ಭೀಮಾ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ: ರೈತರಿಗೆ ಅನ್ಯಾಯ

ವಿಜಯಪುರ ಜಿಲ್ಲೆಯ ಕೊರವಾರ ಗ್ರಾಮದಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ಮಧ್ಯವರ್ತಿಗಳಿಂದ ರೈತರಿಗೆ...

ಗದಗ | ನಮ್ಮ ದೇಶದ ಭವಿಷ್ಯ ಅಕ್ಕ ತಂಗಿಯರ ಕೈಯಲ್ಲಿದೆ: ಸಚಿವ ಡಾ. ಎಚ್. ಕೆ. ಪಾಟೀಲ

"ನಮ್ಮ ದೇಶದ ಭವಿಷ್ಯ ಅಕ್ಕ ತಂಗಿಯರ ಕೈಯಲ್ಲಿದೆ ಎಂಬ ಮಾತು ಹೇಳಲು...

ಕಲಬುರಗಿ | ಕಾಯಂ ಜನತಾ ನ್ಯಾಯಾಲಯದ ಬಗ್ಗೆ ಜಾಗೃತಿ ಅಭಿಯಾನ

ಕಲಬುರಗಿ ಜಿಲ್ಲೆಯ ಜೇವರ್ಗಿ ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ...

ಇಂಡಿ | ಬಿಜೆಪಿ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಅಭಿಯಾನ; ತನಿಖೆಗೆ ಒತ್ತಾಯ

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ಬಸವೇಶ್ವರ...

Download Eedina App Android / iOS

X