ದಾವಣಗೆರೆ | ಹಂಸಲೇಖಗೆ ಶ್ರೀಗುರು ಪುಟ್ಟರಾಜ ಪುರಸ್ಕಾರ

Date:

Advertisements

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಶ್ರೀಗುರು ಪುಟ್ಟರಾಜ ಪುರಸ್ಕಾರ ನೀಡಿ ಮೂರು ಸಾವಿರದ ಮಠದ ಡಾ. ಗುರುಸಿದ್ದರಾಜೇಂದ್ರ ಶ್ರೀ ಗೌರವಿಸಿದ್ದಾರೆ.

ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಪಂಚಾಕ್ಷರಿ ಗವಾಯಿಗಳ 79ನೇ ಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗುರುಸಿದ್ದರಾಜೇಂದ್ರ ಶ್ರೀ, “ಹಂಸಲೇಖ ಅವರು ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಲಿಂ. ಎರೆಕುಪ್ಪಿ ಹಿರೇಮಠದ ತಿಪ್ಪಯ್ಯ ನವರ ಸ್ಮರಣಾರ್ಥ ಕೊಡಮಾಡುವ ‘ಶ್ರೀ ಗುರು ಪುಟ್ಟರಾಜ ಪುರಸ್ಕಾರ’ ನೀಡಿರುವುದು ಶ್ಲಾಘನೀಯ. ಕನ್ನಡಕ್ಕೆ ಕುತ್ತು ಬಂದಾಗ ಎಲ್ಲರೂ ಎಚ್ಚರಗೊಳ್ಳಬೇಕೆಂದು ಕರೆ ನೀಡಿರುವ ಹಂಸಲೇಖಾ ಅವರ ಕಾಳಜಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು” ಎಂದು ತಿಳಿಸಿದರು.

Advertisements

“ಹಾನಗಲ್ ಕುಮಾರಸ್ವಾಮಿ ಮತ್ತು ಪಂಚಾಕ್ಷರಿ ಗವಾಯಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಅನೇಕ ಸನ್ಯಾಸಿಗಳು ಭಕ್ತರಿಂದ ಹಣ, ಬಂಗಾರ, ಆಸ್ತಿಯನ್ನು ಜೋಳಿಗೆಗೆ ಹಾಕಿಸಿಕೊಂಡಿದ್ದೇವೆ. ಆದರೆ, ಹಾನಗಲ್ ಮಠದ ಕುಮಾರಸ್ವಾಮಿಗಳು ಅಂಧ ಮಕ್ಕಳನ್ನು ಜೋಳಿಗೆಗೆ ಹಾಕಿಸಿಕೊಂಡು ಬಂದು ಅವರಿಗೆ ಸಂಗೀತ ದೀಕ್ಷೆ ನೀಡಿದ ಮಹಾನ್ ಸಾಧಕರಾಗಿದ್ದಾರೆ. ಜಗತ್ತಿನ ಸನ್ಯಾಸಿಗಳ ಪಟ್ಟಿಯಲ್ಲಿ ಈ ರೀತಿಯ ಭಿಕ್ಷೆ ಬೇಡಿದ ಏಕೈಕ ಸನ್ಯಾಸಿ ಇದ್ದರೆ ಅದು ಹಾನಗಲ್‌ನ ಕುಮಾರಸ್ವಾಮಿಗಳು ಮಾತ್ರ. ಅವರ ಶಿಷ್ಯರಾಗಿ ಪಂಚಾಕ್ಷರ ಗವಾಯಿಗಳು ಅದೇ ಪರಂಪರೆಯನ್ನು ಬಂದು ಮುಂದುವರೆಸಿಕೊಂಡು ಅವರು ಮಾಡಿದ ಸಾಧನೆ ಕೂಡ ಅಪರೂಪವಾದುದು” ಎಂದು ಬಣ್ಣಿಸಿದರು.

ಹೊಸಪೇಟೆ ಹಾಲಕೇರಿಯ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, “ಮಠಮಾನ್ಯಗಳಿಗೆ ಸಾಕಷ್ಟು ಜವಾಬ್ದಾರಿಗಳಿವೆ. ಆದರೆ ಸ್ವಾಮೀಜಿಗಳು ಮಾಡಬೇಕಾದ ತಮ್ಮ ಕರ್ತವ್ಯಗಳನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿಗಳು ನಿಷ್ಟಾವಂತ ಸನ್ಯಾಸಿಗಳಾಗಿ ಮಠ ಮತ್ತು ಸಮಾಜದ ಉದ್ದಾರ ಮಾಡಿ, ನೂರಾರು ಅಂದ ವಿದ್ಯಾಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇದುವೆ ಒಬ್ಬ ನಿಜವಾದ ಸ್ವಾಮೀಜಿ ಮಾಡಬೇಕಾದ ಕರ್ತವ್ಯ” ಎಂದರು.

“ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಂತ ಪವಿತ್ರವಾದ ಕೆಲಸ, ಅದರಲ್ಲೂ ನಯನ ಇಲ್ಲದ ಮಕ್ಕಳಿಗೆ ಶಿಕ್ಷಣ ನೀಡುವುದು ನಿಜವಾದ ಪರಮಾತ್ಮನ ಸೇವೆಯಾಗಿದೆ. ಅನ್ನ ದಾಸೋಹದ ಮೂಲಕ ಹೊಟ್ಟೆ ತುಂಬಿಸಬಹುದು. ಆದರೆ ದುಡಿದು ತಿನ್ನಬೇಕೆಂಬ ದೂರದೃಷ್ಟಿಯಿಂದ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಕುಮಾರಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳು ಇಲ್ಲದೇ ಇದ್ದಿದ್ದರೆ ಅಂಧ ಮಕ್ಕಳು ಭಿಕ್ಷೆ ಬೇಡುವ ಸ್ಥಿತಿಗೆ ಬರುತ್ತಿದ್ದರು, ಆದರೆ ಇಂದು ಸಂಗೀತ ಶಿಕ್ಷಣದ ಮೂಲಕ ಸಾವಿರಾರು ಅಂಧ ವಿದ್ಯಾರ್ಥಿಗಳು ರಾಷ್ಟ್ರ, ಅಂತರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ” ಎಂದು ಹೇಳಿದರು.

ಸಮಾರಂಭದಲ್ಲಿ ಆವರಗೊಳ್ಳದ ಶಿವಾಚಾರ್ಯ ಮಹಾಸ್ವಾಮಿಗಳು, ಹೊಸಪೇಟೆಯ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ವಿಧಾನಪರಿಷತ್ ಮಾಜಿ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಹಿರಿಯ ಲೆಕ್ಕ ಪರಿಶೋಧಕ ಡಾ. ಅಥಣಿ ಎಸ್.ವೀರಣ್ಣ, ಪುಣ್ಯಾಶ್ರಮದ ಕಾರ್ಯದರ್ಶಿ ಸ್ವಾಮಿ,ದೇವರಮನೆ ಶಿವಕುಮಾರ್ ಇತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X