ದಾವಣಗೆರೆ | ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಶೋಷಣೆ ವಿರುದ್ಧ ಎದ್ದು ನಿಲ್ಲಬೇಕಿದೆ: ಈಶ್ವರಾನಂದ ಶ್ರೀ ಕರೆ

Date:

Advertisements

ಪ್ರಸ್ತುತದಲ್ಲಿಯೂ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಶೋಷಣೆ, ಶೈಕ್ಷಣಿಕ ಅಸಮಾನತೆ ವಿರುದ್ಧ ಎದ್ದು ನಿಲ್ಲಬೇಕಿದೆ. ಸ್ವಾತಂತ್ರ್ಯ ಸ್ವಾಭಿಮಾನಿ, ಸಂಗೊಳ್ಳಿ ರಾಯಣ್ಣರ ಆಶಯಗಳನ್ನು ಈಡೇರಿಸಬೇಕಾಗಿದೆ ಎಂದು ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಶ್ರೀಗಳು ಕರೆ ನೀಡಿದರು.

ದಾವಣಗೆರೆ ನಗರದ ಜಿಲ್ಲಾ ವಿದ್ಯಾವರ್ಧಕ ಸಂಘದ ಬಯಲು ಸಭಾಂಗಣದಲ್ಲಿ ಜಿಲ್ಲೆಯ ಕುರುಬ ಸಮಾಜ ಸೇರಿದಂತೆ ವಿದ್ಯಾವರ್ಧಕ ಸಂಘ ಸದಸ್ಯರು, ಹಾಲುಮತ ಮಹಾಸಭಾ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸೇರಿದಂತೆ ಕುರುಬ ಸಮಾಜದ ವಿವಿಧ ಸಂಘಟನೆಗಳ ಭಕ್ತರು, ನೌಕರರು, ಉದ್ಯಮಿಗಳು, ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಸೇರಿದಂತೆ ಪಾಲ್ಗೊಂಡು ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಅಕ್ಕಿ ಸಮರ್ಪಿಸಿದ ವೇಳೆ ಆಶೀರ್ವಚನ ನೀಡಿ ಮಾತನಾಡಿದರು.

“ಹೊಸದುರ್ಗ ತಾಲೂಕಿನ ಕೆಲ್ಲೋಡು ಶಾಖಾ ಮಠ ಮತ್ತು ಕಾಗಿನೆಲೆ ಪೀಠ ತಳ‌ಸಮುದಾಯದ, ಹಿಂದುಳಿದವರ ಸ್ವಾಭಿಮಾನದ ಸಂಕೇತ. ಈ ಭಾಗದ ಭಕ್ತರ ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಭಕ್ತರಿದ್ದರೆ ಮಠ, ಪೀಠಗಳು. ಭಕ್ತರು ನೀಡುವ ಸೇವೆ ಅನನ್ಯ. ಸಮಾಜದ ಸಂಘಟಿತ ಒಗ್ಗೂಡಿಕೆಯು ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಶಕ್ತಿ ಕೇಂದ್ರವೂ ಕೂಡ ಆಗಬೇಕಾದ ತುರ್ತು ಅಗತ್ಯವಿದೆ” ಎಂದು ಪ್ರತಿಪಾದಿಸಿದರು.

Advertisements

“ಶೋಷಿತ ಹಿಂದುಳಿದ ಕುರುಬ ಸಮುದಾಯ ತಮ್ಮಲ್ಲಿನ ಸಂಕುಚಿತ ಭಾವನೆಗಳನ್ನು ತೊಡೆದು ಹಾಕಬೇಕು. ಶೋಷಿತ ಹಿಂದುಳಿದ ಕುರುಬ ಸಮುದಾಯ ಇಡೀ ದೇಶದ ಇತರೆ ವರ್ಗದ ಸಮುದಾಯಗಳ ಜತೆ ಸೌಹಾರ್ದತೆಯಿಂದ ಒಗ್ಗೂಡಿ ಸಹಬಾಳ್ವೆಯಿಂದ ತಲೆಯೆತ್ತಿ ನಿಲ್ಲಬೇಕಾಗಿದೆ. ಕುರುಬ ಸಮಾಜದ ಮೇಲೆ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಶೋಷಣೆ, ಶೈಕ್ಷಣಿಕ ಅಸಮಾನತೆ ವಿರುದ್ಧ ಎದ್ದು ನಿಲ್ಲಬೇಕಿದೆ. ಸ್ವಾತಂತ್ರ್ಯ ಸ್ವಾಭಿಮಾನಿ, ಸಂಗೊಳ್ಳಿ ರಾಯಣ್ಣರ ಆಶಯಗಳು ಈಡೇರಬೇಕಾಗಿದೆ. ಅದಕ್ಕಾಗಿ ನೀವೆಲ್ಲ ಒಗ್ಗೂಡಿ ಗುರು ಪೀಠಗಳನ್ನು ಗಟ್ಟಿಗೊಳಿಸಬೇಕು” ಎಂದರು.

“ಕಾಗಿನೆಲೆ ಕನಕ ಕೆಲ್ಲೂಡ್ ಶಾಖಾ ಮಠದಲ್ಲಿ ಏಳನೇ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ವಿಶಾಲ ಮಠದ ಅವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಗಳ ಸುಸಜ್ಜಿತ ಮಠ, ಶೈಕ್ಷಣಿಕ ಕಟ್ಟಡಗಳು, ಏಷ್ಯಾದಲ್ಲಿಅತ್ಯಂತ ಬೃಹತ್ ಎತ್ತರದ 37 ಅಡಿಯ ಕನಕ ಶಿಲಾಮೂರ್ತಿ ಸೇರಿದಂತೆ ಬೃಹತ್ ಬೃಂದಾವನ ಇಂಥ ಅದ್ಭುತ ಪೂರ್ವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳಿಗೆ ನಿತ್ಯವೂ ಅನ್ನದಾನ ದಾಸೋಹಕ್ಕೆ ಇಡೀ ದಾವಣಗೆರೆ ಜಿಲ್ಲೆಯ ಭಕ್ತರು ದೇಣಿಗೆ ನೀಡುತ್ತಿದ್ದಾರೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ರಾಷ್ಟ್ರಪ್ರಶಸ್ತಿ ವಿಜೇತ ಬಾಲ ನಟ ರೋಹಿತ್​ಗೆ ಅಪಘಾತ; ಐಸಿಯುನಲ್ಲಿ ಚಿಕಿತ್ಸೆ

ಸಂದರ್ಭದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಕುಂಬಳೂರು ಪಾಲಾಕ್ಷಪ್ಪ, ಕನಕ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪರಶುರಾಮ್, ದಾವಣಗೆರೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ಕಾರ್ಯದರ್ಶಿ ದೀಪಕ್ ಜೋಗಪ್ಪನವರ್, ಲೋಕಿಕೆರೆ ಸಿದ್ದಪ್ಪ, ಸತೀಶ್ ಕೊಳೇನಹಳ್ಳಿ, ಸಿದ್ದಲಿಂಗಪ್ಪ, ನಗರಸಭೆ ಮಾಜಿ ಸದಸ್ಯ ಎಲ್ಐಸಿ ನಿಂಗಣ್ಣ, ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ, ಹದಡಿ ಮಾಂತೇಶ್ ತ್ಯಾವಣಗಿ, ಮಹಾಂತೇಶ್, ಕೊಗನೂರು ಮಂಜು ಎಕ್ಕನಹಳ್ಳಿ ದ್ಯಾಮಣ್ಣ, ಅಣಬೇರು ಶಿವಮೂರ್ತಿ, ಮಂಜುನಾಥ್, ಆನೇಕಲ್ ವೀರಣ್ಣ, ಬಟ್ಟಲಕಟ್ಟೆ ಪರಶುರಾಮ್, ಶಿಕ್ಷಕ ಲೋಕಿಕೆರೆ ಶಂಕರ್ ಮೂರ್ತಿ, ಹದಡಿ ಬಸವರಾಜ್, ನಿವೃತ್ತ ಶಿಕ್ಷಕ ಶಿವಣ್ಣ, ಷಣ್ಮುಖಪ್ಪ, ಶಶಿಧರ್, ದೀಟೂರು ಚಂದ್ರು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಜಾರಿ, ಬಹುದಿನಗಳ ಕನಸು ನನಸು ಮಾಡಿದ ಎಲ್ಲರಿಗೂ ಅಭಿನಂದನೆ: ಎಸ್. ಎನ್. ಬಳ್ಳಾರಿ

ಪರಿಶಿಷ್ಟ ಜಾತಿಗಳ ಮೂರು ದಶಕಗಳ ಒಳಮೀಸಲಾತಿ ಹೋರಾಟವನ್ನು ಮಾನ್ಯ ಸುಪ್ರೀಂ ಕೋರ್ಟ್...

ಚಿಕ್ಕಮಗಳೂರು l ಅಕ್ರಮ ಪ್ಲಾಸ್ಟಿಕ್ ಮಾರಾಟ: ನಗರಸಭೆ ಅಧಿಕಾರಿಗಳು ದಾಳಿ

ಚಿಕ್ಕಮಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ...

ಕೋಲಾರ | 9 ತಿಂಗಳಿನಿಂದ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ಕಾರ್ಮಿಕರು

ಕೋಲಾರ ನಗರಸಭೆಯಲ್ಲಿ ಕೆಲಸ ಮಾಡುವ 74 ಮಂದಿ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ...

ಬೀದರ್‌ | ವಚನ ಸಾಹಿತ್ಯ, ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠದ ಕೊಡುಗೆ ಅನನ್ಯ : ಪುರಷೋತ್ತಮ ಬಿಳಿಮಲೆ

ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠ...

Download Eedina App Android / iOS

X