ದಾವಣಗೆರೆ | 32 ಚೆಕ್ ಪೋಸ್ಟ್, ದಾಖಲೆ ರಹಿತ ನಗದು, ಚಿನ್ನ, ಅಕ್ರಮ ಮದ್ಯದ ಮೇಲೆ ನಿಗಾ: ಡಿಸಿ

Date:

Advertisements

ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ನ್ಯಾಯಸಮ್ಮತ, ಪಾರದರ್ಶಕವಾಗಿ ಹಾಗೂ ಮುಕ್ತವಾಗಿ ನಡೆಸಲು ಗಡಿಭಾಗ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 32 ಕಡೆ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಶಾಮನೂರು ಕ್ರಾಸ್ ಚೆಕ್‍ಪೋಸ್ಟ್, ಹರಿಹರ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಅವರು, ಪ್ರತಿ ಚೆಕ್‍ಪೋಸ್ಟ್‌ಗಳಲ್ಲಿ ಮೂರು ಜನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ದಿನದ 24 ಗಂಟೆಯೂ ಕಾವಲು ಇರುವ ಮೂಲಕ ಅಕ್ರಮವಾಗಿ ಸಾಗಣೆ ಮಾಡುವ ವಸ್ತುಗಳು, ಮದ್ಯ, ನಗದು ಮತ್ತು ಇನ್ನಿತರೆ ಬಂಗಾರದ ವಸ್ತುಗಳ ಮೇಲೆ ನಿಗಾ ಇಡುವರು ಎಂದರು.

ಆ ಮಾರ್ಗದಲ್ಲಿ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ವಸ್ತುಗಳನ್ನು ಸಾಗಣೆ ಮಾಡಲು ಅಭ್ಯಂತರ ಇರುವುದಿಲ್ಲ, ಆದರೆ ಸಂಬಂಧಿಸಿದ ವಸ್ತುಗಳು, ಹಣ, ಯಾವುದೇ ಇದ್ದಲ್ಲಿ ದಾಖಲೆಗಳು ಅತ್ಯವಶ್ಯಕವಾಗಿದ್ದು ವಾಹನ ಸವಾರರು, ಸಾರ್ವಜನಿಕರು ಚೆಕ್‍ಪೋಸ್ಟ್ಗಳಲ್ಲಿ ಹಾಜರುಪಡಿಸುವ ಮೂಲಕ ಸಿಬ್ಬಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

Advertisements

ಕಣ್ಗಾವಲಿಗಾಗಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗಳಲ್ಲಿ ಸಿಬ್ಬಂದಿಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯವನ್ನು ನಿರ್ವಹಿಸುವುದರೊಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಎಲ್ಲಾ ವಾಹನಗಳ ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.

ಚೆಕ್‍ಪೋಸ್ಟ್‍ಗಳ ವಿವರ: 103-ಜಗಳೂರು ವಿಧಾನಸಭಾ ಕ್ಷೇತ್ರ: ಬಿದರಕೆರೆ ಹತ್ತಿರ, ಗಡಿಮಾಕುಂಟೆ, ಅರಸೀಕೆರೆ ಠಾಣೆ ವ್ಯಾಪ್ತಿಯ ಕುರೆಮಾಗನಹಳ್ಳಿ ಹತ್ತಿರ, ಚಳ್ಳಕೆರೆ ರಸ್ತೆ ಮುಸ್ಟೂರು ಹತ್ತಿರ, ಬಿಳಿಚೋಡು ವ್ಯಾಪ್ತಿಯ ಕನಾನಕಟ್ಟೆ ಎನ್.ಎಚ್. 13 ಹತ್ತಿರ. 105-ಹರಿಹರ ವಿಧಾನಸಭಾ ಕ್ಷೇತ್ರ: ಹರಿಹರ ರಾಘವೇಂದ್ರ ಮಠದ ಹತ್ತಿರ, ಹಲಸಬಾಳು ಕ್ರಾಸ್, ಕುರುಬರಹಳ್ಳಿ ಹತ್ತಿರ, ನಂದಿಗುಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ: ಭೂಮಿಕ ನಗರ, ಲೋಕಿಕೆರೆ ಕ್ರಾಸ್, ಕಲ್ಪನಹಳ್ಳಿ ಸರ್ಕಲ್(ಮಾಗಾನಹಳ್ಳಿ), ಎನ್.ಎಚ್-4 ಶಾಮನೂರು ಕ್ರಾಸ್, ವಿದ್ಯಾನಗರ ಲಾಸ್ಟ್ ಬಸ್ ಸ್ಟಾಪ್ ಹತ್ತಿರ.

107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಾಡ ಕ್ರಾಸ್, ಬೇತೂರು ರೋಡ್, ಕೊಂಡಜ್ಜಿ ರಸ್ತೆ, ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ ಬಳಿ.

108-ಮಾಯಕೊಂಡ ವಿಧಾನಸಭಾ ಕ್ಷೇತ್ರ: ಹೆಬ್ಬಾಳ್ ಟೋಲ್ ಗೇಟ್, ಕಾರಿಗನೂರು ಕ್ರಾಸ್, ಎಚ್.ಬಸಾಪುರ.

109-ಚನ್ನಗಿರಿ ವಿಧಾನಸಭಾ ಕ್ಷೇತ್ರ: ಜೋಳದಾಳ್, ಮಾವಿನಕಟ್ಟೆ, ತಾವರೆಕೆರೆ, ಮಾದಾಪುರ, ಸಂತೇಬೆನ್ನೂರು.

110-ಹೊನ್ನಾಳಿ ವಿಧಾನಸಭಾ ಕ್ಷೇತ್ರ: ನ್ಯಾಮತಿ ಪೊಲೀಸ್ ಠಾಣೆಯ ಟಿ.ಜಿ.ಹಳ್ಳಿ ಕ್ರಾಸ್, ಸವಳಂಗ, ಹೊಳೆಹರಳಹಳ್ಳಿ ಕ್ರಾಸ್, ಹೊನ್ನಾಳಿ ಪೊಲೀಸ್ ಠಾಣೆಯ ಗೊಲ್ಲರಹಳ್ಳಿ ಕ್ರಾಸ್, ಕುಳಗಟ್ಟೆ ಕ್ರಾಸ್, ಜೀನಹಳ್ಳಿ ಕ್ರಾಸ್ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X