ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಏಪ್ರಿಲ್ 19ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸೇರಿದಂತೆ 40 ಅಭ್ಯರ್ಥಿಗಳ 54 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಕಾಂಗ್ರೆಸ್‌ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ 3 ನಾಮಪತ್ರ, ಬಿಜೆಪಿ ಯಿಂದ ಜಿ.ಎಸ್. ಗಾಯತ್ರಿ 3 ನಾಮಪತ್ರ, ಜಿ.ಎಂ. ಸಿದ್ದೇಶ್ವರ ಬಿಜೆಪಿ 3 ನಾಮಪತ್ರ, ದೊಡ್ಡಶಿ ಎಚ್.ಎಸ್. ಜನಹಿತ ಪಕ್ಷ, ತಿಪ್ಪೇಸ್ವಾಮಿ ಕೆ.ಎ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ 2 ನಾಮಪತ್ರ, ಶ್ರೀನಿವಾಸ್ ಎಂ.ಸಿ. ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ಕೆಆರ್‌ಎಸ್ ಪಕ್ಷದಿಂದ ಕೆ.ಎಸ್. ವೀರಭದ್ರಪ ಉಳಿದಂತೆ ಎಲ್ಲಾ ಪಕ್ಷೇತರರಾಗಿದ್ದು ವಿನಯ್ ಕುಮಾರ್ ಜಿ.ಬಿ ಎರಡು ನಾಮಪತ್ರ, ಪೆದ್ದಪ್ಪ ಎಸ್. ಇರ್ಪಾನುಲ್ಲಾ, ಪ್ರಸನ್ನ ಬಿ.ಆರ್. ಮೆಹಬೂಬ ಪಾಷ, ಬರ್ಕತ್ ಅಲಿಭಾಷ, ಗಾಯಿತ್ರಿ ಜಿ.ಎಂ.ಕೋಂ ಸಿದ್ದೇಶಿ, ಕರಣಂ ಕೊಟ್ರಪ್ಪ ನಾಮಪತ್ರ ಸಲ್ಲಿಸಿದವರು ಎಂದು ಮಾಹಿತಿ ನೀಡಿದರು.
ಇದುವರೆಗೆ ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.12ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ವಿ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ.18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಹಾಗೂ ಕೊನೆ: ದಿನ ಏ.19 ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್‌ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ನಾಲ್ಕು ನಾಮಪತ್ರ, ಬಿಜೆಪಿಯಿಂದ ಜಿ.ಎಸ್.ಗಾಯಿತ್ರಿ 4. ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ 3, ಕೆಆರ್‌ಎಸ್ ಪಕ್ಷದ ರಾಘವೇಂದ್ರ ಜಿ.ಪಿ 2. ಸೋಷಿಯಲ್ ಯುನಿಟ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ ತಿಪ್ಪೇಸ್ವಾಮಿ ಕೆ.ಎ 3 ನಾಮಪತ್ರ, ಪಕ್ಷೇತರರಾಗಿ ವಿನಯ್ ಕುಮಾರ್ ಜಿ.ಬಿ. 4 ನಾಮಪತ್ರ ಸಲ್ಲಿಸಿದ್ದು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದವರಾಗಿದ್ದಾರೆ ಎಂದರು.
ಜನಹಿತ ಪಕ್ಷದ ದೊಡ್ಡಶಿ ಎಚ್.ಎಸ್ ಇವರು ಠೇವಣಿ ಹಣ ಭರಿಸಲು ರೂ.10 ಮುಖಬೆಲೆಯ ನಾಣ್ಯಗಳನ್ನು ತಂದಿದ್ದು ಗಮನ ಸೆಳೆಯಿತು. ಈಬಗ್ಗೆ ಅವರ ಆಪ್ತರಲ್ಲಿ ವಿಚಾರಿಸಿದಾಗ ಸಾರ್ವಜನಿಕರು 10 ಮುಖಬೆಲೆಯ ನಾಣ್ಯಗಳ ಚಲಾವಣೆಗೆ ನಿರಾಕರಿಸುತ್ತಿದ್ದಾರೆ. ಈ ತಪ್ಪು ತಿಳುವಳಿಕೆ ನಿಲ್ಲಿಸಲು ಮತ್ತು ಚಲಾವಣೆಯಲ್ಲಿವೆ ಎಂದು ತಿಳಿಸಲು ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಏಪ್ರಿಲ್ 20ರಂದು ಬೆಳಗ್ಗೆ 11ಗಂಟೆಯಿಂದ ಆರಂಭವಾಗಲಿದೆ. ನಂತರ ಉಮೇದುವಾರರ ಪಟ್ಟಿ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.
