ದಾವಣಗೆರೆ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಮತ್ತು ನಿವೇಶನ, ವಸತಿ ರಹಿತರ ಹೋರಾಟ ಸಮಿತಿ ಜಂಟಿಯಾಗಿ ʼನಿವೇಶನ ರಹಿತರು ಮತ್ತು ವಸತಿ ರಹಿತರು ಸರ್ಕಾರದಿಂದ ನಿವೇಶನ ಪಡೆಯುವುದು ಹೇಗೆʼ ಎನ್ನುವ ಜಾಗೃತಿ ಸಭೆಯನ್ನು ಆಯೋಜಿಸಿದ್ದವು.

ಈ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅವರು, ʼಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ, ಸ್ವಂತ ನಿವೇಶನ ವಸತಿ ಇಲ್ಲದ ಫಲಾನುಭವಿಗಳು ಸರ್ಕಾರದ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ತಮ್ಮ ಅರ್ಜಿಯನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ನಿವೇಶನ ಮತ್ತು ವಸತಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದನ್ನು ಪಡೆಯಲು ಎಲ್ಲಾ ಅರ್ಹ ಫಲಾನುಭವಿಗಳು ಮುಂದಾಗಬೇಕುʼ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಆಗ್ರಹ
ಸಭೆಯಲ್ಲಿ ಸಿಪಿಐ ಪಕ್ಷದ ಮುಖಂಡರುಗಳಾದ ಗದಿಗೇಶ ಪಾಳೇದ, ಎಸ್ ಶೇಖರ ನಾಯಕ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯೆ ಸರೋಜಾ ಸೇರಿದಂತೆ ಇತರರು ಭಾಗವಹಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
