ದಾವಣಗೆರೆ | ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಬಂದ್

Date:

Advertisements

ಹಲವು ದಶಕಗಳಿಂದ ಹೋರಾಟ ಮಾಡಿದ್ದರೂ ಕೂಡ ಇನ್ನೂ ನೀರು ಬಾರದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರವಾಗಿ ನಡೆಯಬೇಕು, ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಅನುದಾನ ಬಿಡುಗಡೆ ಮಾಡಿ, ಜಗಳೂರು ತಾಲೂಕಿಗೆ ನೀರು ಹರಿಸಬೇಕು ಎಂದು ವಿವಿಧ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಿದ್ದವು.

ಬಂದ್ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಪ್ರತಿಭಟನೆಗೆ ಸ್ಥಳೀಯರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅತೀ ಕನಿಷ್ಠ ಮಳೆಯಿಂದ ಸತತ ಹಲವಾರು ವರ್ಷಗಳಿಂದ ಬರ ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರೈತರು ಒಂದು ವರ್ಷ ಸಹ ಬೆಳೆಗಳನ್ನು ಬೆಳೆದಿಲ್ಲ. ಪಂಪ್ ಸೆಟ್ ಹಾಗೂ ಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದ್ದು, ನೀರಾವರಿ ಆಶ್ರಿತ ಬೆಳೆ ತೋಟಗಳು ಒಣಗುತ್ತಿವೆ. ಇನ್ನಾದರೂ ಭದ್ರಾ ಮೇಲ್ದಂಡೆ ನೀರು ಬರುತ್ತದೆ ಎಂದು ಕನಸು ಕಂಡಿದ್ದ ರೈತರಿಗೆ ಸರ್ಕಾರಗಳು ಪೋಳ್ಳು ಭರವಸೆಯನ್ನು ನೀಡಿವೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತ ಪಡಿಸಿದರು.

Advertisements

ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ, ಅನುದಾನ ಬಿಡುಗಡೆ ಮಾಡಿಲ್ಲ. ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಿ ರೈತರ ಜೀವ ಉಳಿಸಿ ಈ ವರುಷ ಬಜೆಟ್ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸ ಬೇಕು ಮತ್ತು ಶೀಘ್ರವೇ ಭದ್ರ ನೀರು ಬರಬೇಕು ಎಂದು ಮುಖಂಡರು ಒತ್ತಾಯಿಸಿ ವ್ಯಾಪಕವಾಗಿ ಬಂದ್ ಮಾಡಿ ಆಗ್ರಹಿಸಿದರು.

ಇದೇ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್‌ ಶ್ರೀನಿವಾಸ್ ರಾವ್, ಪಿಎಸ್ಐ ಸಾಗರ್ ಮತ್ತು ಒಂದು ಕೆಎಸ್‌ಆರ್ ಎರಡು ಡಿ.ಆರ್ ಪೊಲೀಸ್ ವಾಹನಗಳು ಹೊರ ಜಿಲ್ಲೆಗಳಿಂದ 50 ಪೊಲೀಸ್ ಸಿಬ್ಬಂದಿ ಕಾವಲಿದ್ದು, ಬಂದ್ ವೇಳೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸ ಲಾಗಿತ್ತು.

ಬೆಳಿಗ್ಗೆ 5:30ಕ್ಕೆ ಹೋರಾಟಗಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೋರಾಟಕ್ಕೆ ವ್ಯಾಪಕ ಬೆಂಬಲ ನೀಡಿ ಎಂದು ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರಿಗೆ, ಹೋಟೆಲ್ ಮಾಲೀಕರಿಗೆ ಹೋರಾಟಕ್ಕೆ ಸಹಕರಿಸಬೇಕು ಎಂದು ಹೋರಾಟಗಾರರು ಮನವಿ ಮಾಡಿದರು.

ದಾವಣಗೆರೆಯ ಮುಖ್ಯ ರಸ್ತೆಯಾದ ಎಪಿಎಂಸಿ ಬಳಿ ಚಳ್ಳಕೆರೆ ಟೋಲ್ ಗೇಟ್ ಬಳಿ ವಾಹನ ಸವಾರರು ಸಂಚಾರಕ್ಕೆ ಮುಂದಾದಾಗ ಹೋರಾಟಗಾರರು ಸಂಚಾರಕ್ಕೆ ಅವಕಾಶ ಮಾಡಿಕೊಡದೆ ಇಂದು ಬಂದ್ ಇದ್ದು ಸಹಕರಿಸಲು ಮನವಿ ಮಾಡಿ ವಾಪಸ್ ಕಳಿಸಿದ ಘಟನೆಗಳು ಜರುಗಿದವು. ನಂತರ ಇಫ್ತಾ ಕಲಾವಿದರಾದ ಐರಣಿ ಚಂದ್ರು ಅವರಿಂದ ಹೋರಾಟದ ಕ್ರಾಂತಿ ಗೀತೆಗಳ ಆಡುವ ಮೂಲಕ ವಾಹನ ಸವಾರರಿಗೆ ಬಂದ್ ಗೆ ವ್ಯಾಪಕ ಬೆಂಬಲ ನೀಡಿ ಎಂದು ತಿಳಿಹೇಳಿದರು.

ಹೋರಾಟಕ್ಕೆ ರೈತ ಸಂಘಟನೆಗಳು, ಆಟೋ ಚಾಲಕರು, ಬಸ್ ಮಾಲೀಕರ ಸಂಘ, ಕನ್ನಡ ರಕಣಾ ವೇದಿಕೆ, ದಲಿತ ಸಂಘಟನೆ, ವಿಧದ ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು.

ಇದೇ ಸಂದರ್ಭದಲ್ಲಿ ಭದ್ರ ಮೇಲ್ದಂಡೆ ಯೋಜನೆ ಹೋರಾಟಗಾರರಾದ ಯಾದವ್ ರೆಡ್ಡಿ, ಮಹಾಲಿಂಗಪ್ಪ, ವಕೀಲ ಸಂಘದ ಅಧ್ಯಕ್ಷ ಓಂಕಾರೇಶ್ವರ, ರುದ್ರೇಶ್, ಎನ್.ಎಸ್. ರಾಜು, ಶಂಭು ಲಿಂಗಪ್ಪ, ಕಲಾವಿದರಾದ ಐರಾಣಿ ಚಂದ್ರು, ಎಸ್.ಸಿ/ ಎಸ್.ಟಿ ಪತ್ರಿಕ ವರದಿಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಟ್ಟಿ ಮಂಜುನಾಥ್, ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ, ವಕೀಲ.ಆರ್ ಓಬಳೇಶ್, ರೈತ ಸಂಘಟನೆಯ ಮುಖಂಡರಾದ ಚೆರಂಜೀವಿ, ರಾಜನಟ್ಟಿ ರಾಜು, ಕುಬೇರಪ್ಪ, ಸತ್ಯಮೂರ್ತಿ, ಲಕ್ಷ್ಮಣ್, ಭರಮಸಮುದ್ರ ರಾಜು, ಸಂಗೇನಹಳ್ಳಿ ಅಶೋಕ್ ಕುಮಾರ್, ನಾಗಲಿಂಗಪ್ಪ, ಮೈಲೇಶ್, ಇಂದಿರಾ ಗುರುಸ್ವಾಮಿ, ಸತೀಶ್, ಗ್ಯಾಸ್ ಓಬಣ್ಣ, ತೋರಣಗಟ್ಟೆ ಬಡಪ್ಪ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಮಾಂತೇಶ್, ಲೋಕಣ್ಣ ರೇವಣ್ಣ, ದೊಣ್ಣೆ ಹಳ್ಳಿ ಲೋಕೇಶ್, ಕೋಳಿ ಅಂಗಡಿ ಮಾಲೀಕರಾದ ಎಂ.ಎಸ್. ನಜೀರ್ ಅಹ್ಮದ್, ರೈತ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X