ಮುಂಬರುವ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ನೀಡಲು ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ ಬಿಸಿಯೂಟ ತಯಾರಕ ಸಂಘಟನೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನೆಡೆಯಲಿರುವ ಪ್ರತಿಭಟನೆ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಸದೆ ಪ್ರಿಯಾಂಕ ಗಾಂಧಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಬಿಸಿಯೂಟ ತಯಾರಕರಿಗೆ ಆರನೇ ಗ್ಯಾರಂಟಿಯಾಗಿ 6000 ವೇತನ ಕೊಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಅದನ್ನು ಈಡೇರಿಸಿಲ್ಲ. ಸರ್ಕಾರವು ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷತೆಯಿಂದ ಬಿಸಿ ಊಟ ತಯಾರಕರು ಸಮಯಕ್ಕೆ ಸರಿಯಾಗಿ ವೇತನ ಪಾವತಿ ಇಲ್ಲದೆ, ವರ್ಷಕ್ಕೆ ಎರಡು ಮೂರು ಬಾರಿ ವೇತನ ಪಡೆಯುವಂತಾಗಿದೆ. ಈ ಹಿನ್ನಲೆ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ದಾವಣಗೆರೆ ಜಿಲ್ಲಾ ಸಮಿತಿ, ತಮಗೆ 6ನೇ ಗ್ಯಾರಂಟಿಯಾಗಿ ಘೋಷಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಫೆ. 3ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಫೈನಾನ್ಸ್ ಕಂಪನಿ ಕಿರುಕುಳ: ಕಾಣೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಮೃತದೇಹ ನದಿಯಲ್ಲಿ ಪತ್ತೆ
ಈ ವೇಳೆ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಸಂಘಟನೆಯ ಮುಖಂಡ ಚಂದ್ರು ಆವರಗೆರೆ, ಜಿಲ್ಲಾ ಉಪಾಧ್ಯಕ್ಷೆ ಸರೋಜಾ, ಹರಿಹರ ತಾಲೂಕು ಸಂಘಟನೆಯ ಮುಖಂಡರುಗಳಾದ ನಾಗವೇಣಿ, ಶೃತಿ, ವಿಶಾಲಮ್ಮ, ಗೌರಮ್ಮ, ಮಂಗಳ, ಮಂಜುಳಾ, ಸುಧಾ ಸೇರಿದಂತೆ ಇತರರು ಹಾಜರಿದ್ದರು.
