ಅಂಗನವಾಡಿ ಕಾರ್ಯರ್ತೆಯರ ಮತ್ತು ಸಹಾಯಕಿಯರ ಜಿಲ್ಲಾ ಸಮ್ಮೇಳನವು ಆಗಸ್ಟ್ 26ರಂದು ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಂ.ಬಿ ಶಾರದಮ್ಮ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಸಮ್ಮೇಳನದ ಉದ್ಘಾಟನೆಯನ್ನು ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್ ನೆರವೇರಿಸಲಿದ್ದಾರೆ” ಎಂದರು.
“ಸಮ್ಮೇಳನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಸಮಸ್ಯೆಗಳ ಮತ್ತು ದೊರೆಯಬೇಕಾದ ಸೌಲಭ್ಯಗಳ ಕುರಿತು ಚರ್ಚೆಗಳು ನಡೆಯಲಿವೆ. ಸಮಸ್ಯೆಗಳನ್ನು ಮತ್ತು ನಿವಾರಿಸಲು ಮತ್ತು ಸೌಲಭ್ಯ ದೊರಕಿಸಲು ಸರ್ಕಾರ ಮತ್ತು ಅಧಿಕಾರಿ ವರ್ಗದ ಗಮನ ಸೆಳೆಯಲು ಸಮ್ಮೇಳನ ಆಯೋಜಿಸಲಾಗಿದೆ” ಎಂದು ಹೇಳಿದರು.
“ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಬಸವಂತಪ್ಪ ಫೆಡರೇಷನ್ ರಾಜ್ಯಾಧ್ಯಕ್ಷ ಅಮ್ರದ್, ರಾಜ್ಯ ಪ್ರಧಾನ ಕಾರ್ಯದರ್ಶಿಎಂ. ಜಯ್ಯಮ್ಮ, ರಾಜ್ಯ ಉಪಾಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ವಾಸಂತಿ ಉಪ್ಪಾರ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಎಂ.ಎಸ್. ಅಭಿಕುಮಾರ್, ಅವರಗೆರೆ ರುದ್ರಮುನಿ, ಆನಂದರಾಜ್,ಆವರಗೆರೆ ಚಂದ್ರು, ರಾಘವೇಂದ್ರ ನಾಯರಿ, ಹೆಚ್, ಜಿ. ಉಮೇಶ್, ಆವರಗೆರೆ ವಾಸು, ಮಹ್ಮದ್ ಬಾಷಾ, ಎಸ್.ಎಸ್. ಮಲ್ಲಮ್ಮ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಆವರಗೆರೆ ವಾಸು, ಮಲ್ಲಮ್ಮ ವಿಶಾಲಾಕ್ಷಮ್ಮ ಮೃತ್ಯುಂಜಯ ಗೀತಾ ಕೆ ಸಿ, ನಿರ್ಮಲ ಸರ್ವಮ್ಮ ರೇಣುಕಾ ಮತ್ತು ಪದಾಧಿಕಾರಿಗಳು ಹಾಜರಿದ್ದರು.