ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ ಅವರ ತತ್ವಗಳು ಎಂದಿಗೂ ಜಾಗತಿಕ ಶಾಂತಿಗಾಗಿ ಅಗತ್ಯವಾಗಿವೆ ಎಂದು ಗಾಂಧಿ ಸರ್ವೋದಯ ಸಮಿತಿಯ ಕಸವನಹಳ್ಳಿ ರಮೇಶ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, “ಅಕ್ಟೋಬರ್ 5ರಂದು ಗಾಂಧಿ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ. ಗಾಂಧಿ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ” ಎಂದು ತಿಳಿಸಿದರು.
“ಕಾರ್ಯಕ್ರಮದಲ್ಲಿ ಗಾಂಧಿ ಕುರಿತಾದ ಛಾಯಚಿತ್ರ ಪ್ರದರ್ಶನ, ಭಜನೆ, ಜಾನಪದ ಹಾಡು, ಲಾವಣಿ ಮುಂತಾದ ಕಲಾ ಪ್ರದರ್ಶನಗಳೂ ಇರಲಿವೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ಮಾಳಿಗೆ, ಆಲೂರು ರಾಮಣ್ಣ, ಅಭಿದ್ ಬೈಯ, ರಾಜೇಶ್, ಜಯಣ್ಣ, ಶಶಿಕಲಾ, ಸಂತೋಷ್ ರಾಥೋಡ್ ಮತ್ತಿತರರು ಇದ್ಧರು.