ದಾವಣಗೆರೆ | ರಕ್ಷಣೆ ನೀಡುವ ಗೃಹರಕ್ಷಕ ಸಿಬ್ಬಂದಿಗಳಿಗೇ ರಕ್ಷಣೆಯಿಲ್ಲ; ಗಮನಿಸುವರೇ ಅಧಿಕಾರಿಗಳು?

Date:

Advertisements

ಸಮಾಜದ ರಕ್ಷಣೆ, ನೈಸರ್ಗಿಕ, ಆಕಸ್ಮಿಕ ವಿಪತ್ತುಗಳು ಎದುರಾದಾಗ ನಿರ್ವಹಣೆಯ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರ ಪ್ರಾಣಹಾನಿ, ನಷ್ಟ ತಪ್ಪಿಸಲು, ರಕ್ಷಿಸುವ ಕಾರ್ಯಾಚರಣೆ ನಿರ್ವಹಿಸುವವರೇ ಗೃಹರಕ್ಷಕರು. ಅಲ್ಲದೆ ಸಾಮಾನ್ಯ ಆಡಳಿತ ಸೇರಿ, ಸಂಚಾರ, ಪೊಲೀಸ್ ವ್ಯವಸ್ಥೆಗಳಲ್ಲಿಯೂ ಹೊರಗುತ್ತಿಗೆ ಸೇವೆ ಸಲ್ಲಿಸುವ ಗೃಹರಕ್ಷಕ ಸಿಬ್ಬಂದಿಗಳಿಗೇ ಕಾರ್ಯಾಲಯದ ರಕ್ಷಣೆ ಇಲ್ಲವಾಗಿದೆ.

ಈ ಗೃಹರಕ್ಷಕ ದಳದ ಕಚೇರಿ ನೋಡಿದಾಗ ನಿಮಗೆ ಯಾವುದೋ ಹಳೆಯ, ಬಿದ್ದುಹೋದ ಕಟ್ಟಡ ಎನಿಸಿದರೆ ಅದು ಸುಳ್ಳಲ್ಲ. ಬಿರುಕು ಗೋಡೆ, ಮುರಿದುಬಿದ್ದ ಮೇಲ್ಛಾವಣಿ, ಶಿಥಿಲಾವಸ್ಥೆಯ ಕಿಟಕಿಗಳು, ಮುರಿದ ಬಾಗಿಲು ಹೊಂದಿರುವ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೃದಯ ಭಾಗದಲ್ಲಿರುವ ಗೃಹರಕ್ಷಕ ದಳದ ಕಚೇರಿಯ ಸ್ಥಿತಿ.

ಗೃಹರಕ್ಷಕ ಸಿಬ್ಬಂದಿಗಳು, ತಮ್ಮ ಹಾಜರಾತಿ, ಇನ್ನಿತರ ಕರ್ತವ್ಯ ನಿರ್ವಹಣಾ ಮಾಹಿತಿ ನೀಡುವ ತಾಲೂಕು ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಸಂಪೂರ್ಣ ಹಾನಿಗೊಂಡಿದೆ.

Advertisements
1001827287 1
ಹರಿಹರದ ಗೃಹರಕ್ಷಕ ದಳದ ಕಚೇರಿ

ಹೃದಯ ಭಾಗದಲ್ಲಿರುವ ಈಗಾಗಲೇ ತೆರವುಗೊಂಡಿರುವ ತಾಲೂಕಿನ ಹಳೆಯ ನ್ಯಾಯಾಲಯ ಆವರಣದಲ್ಲಿರುವ ನೀರಿನ ಟ್ಯಾಂಕ್ ಸಮೀಪದಲ್ಲಿರುವ ನಗರಸಭೆ ವ್ಯಾಪ್ತಿಗೆ ಒಳಪಡುವ ಹಳೆಯ ಕಟ್ಟಡದಲ್ಲಿ ಕಳೆದ ಹಲವು ವರ್ಷಗಳಿಂದ ಗೃಹರಕ್ಷಕ ದಳದ ಕಚೇರಿಯನ್ನಾಗಿ ನಡೆಸುತ್ತಿದ್ದಾರೆ. ಗೃಹರಕ್ಷಕ ದಳದ ಕಚೇರಿಯೇ ಸೂಕ್ತ ರಕ್ಷಣೆ ಇಲ್ಲದೆ ಮೇಲ್ಛಾವಣಿ ಕುಸಿದುಬಿದ್ದಿದೆ.

ಕಚೇರಿಯಲ್ಲಿ ಮಳೆನೀರು ಸೋರಿಕೆಯಾಗಿ ಕಡತಗಳು ಹಾನಿಗೊಳಗಾಗುವ ಭೀತಿ ಎದುರಾಗಿದೆ. ಅಲ್ಲದೆ ಅಗತ್ಯ ಕರ್ತವ್ಯ ನಿರ್ವಹಣೆಗೆ ತೆರಳುವ ವೇಳೆ, ಕರ್ತವ್ಯದಿಂದ ವಾಪಾಸಾದ ವೇಳೆ ತಡವಾದಲ್ಲಿ ಸಿಬ್ಬಂದಿಗಳು ಇದೇ ಕಚೇರಿಯಲ್ಲಿ ಉಳಿಯಬೇಕಾಗುತ್ತದೆ. ಆದರೆ ಯಾವಾಗ ಮೈಮೇಲೆ ಬೀಳುತ್ತವೆಯೋ ಎನ್ನುವಂತಿರುವ ಬಿರುಕು ಬಿಟ್ಟ ಗೋಡೆಗಳು, ಆಕಾಶವೇ ಪೂರ್ತಿಯಾಗಿ ಕಾಣುವ ಒಡೆದ ಹೆಂಚು, ಛಾವಣಿ, ಅಲ್ಲಲ್ಲಿ ಸಿಮೆಂಟ್ ಕಿತ್ತು ಒಡೆದು ಹೋದ ನೆಲಹಾಸಿನ ಮೇಲೆ ಜೀವಿಸುತ್ತಿದ್ದಾರೆ. ಜನಸಾಮಾನ್ಯರ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ತಮ್ಮ ಜೀವಗಳ ಮೇಲೆ ಗ್ಯಾರಂಟಿಯಿಲ್ಲದೇ ಕಾಲ ದೂಡುವಂತಾಗಿದೆ.

1001827285
ಮುರಿದು ಬಿದ್ದಿರುವ ಮೇಲ್ಚಾವಣಿ

“ಕಚೇರಿ ಒಳಭಾಗಕ್ಕಿದ್ದು, ಸಾರ್ವಜನಿಕರ ಓಡಾಟ ಕಮ್ಮಿಯಿರುವ ಕಟ್ಟಡವಾದ್ದರಿಂದ ಪ್ರತಿದಿನ ಸಂಜೆ ನಂತರ ಪೋಲಿ, ಫಟಿಂಗರ, ಕುಡುಕರು ಅಡ್ಡೆಯಾಗಿಬಿಡುತ್ತದೆ. ಹತ್ತಿರದಲ್ಲೇ ಇರುವ ಬಾರ್‌ಗಳಿಂದ ಬರುವ ಕುಡುಕರು, ಮದ್ಯಪ್ರಿಯರೆಲ್ಲಾ ಈ ಕಚೇರಿ ಹೊರಾಂಗಣದಲ್ಲಿರುವ ಆವರಣ, ಜಗಲಿ ಮೇಲೆ ಕುಳಿತು ಹರಟೆ ಹೊಡೆಯುವ, ಮದ್ಯ, ಸಿಗರೇಟು ಸೇವನೆಯಂತಹ ದುಷ್ಕೃತ್ಯ ನಡೆಸುತ್ತಿದ್ದಾರೆ.‌ ಕೆಲವೊಮ್ಮೆ ಬುದ್ದಿವಾದ ಹೇಳಿದವರು ಅವಾಚ್ಯ ಶಬ್ದಗಳಿಂದ ನಿಂದನೆಗೊಳಗಾದ ಪ್ರಸಂಗಗಳು ನೆಡೆದಿವೆ. ಇದಕ್ಕೆ ತಡೆಹಾಕುವ ಕಾರ್ಯ ಮಾಡಬೇಕಾಗಿದೆ” ಎನ್ನುತ್ತಾರೆ ಹಿರಿಯ ನಾಗರಿಕರೊಬ್ಬರು.

“ಸಂಜೆ ಬಳಿಕ ಕತ್ತಲು ಆವರಿಸಿದರೆ ಕಚೇರಿಯಲ್ಲಿ ಬೆಳಕೇ ಇರುವುದಿಲ್ಲ. ಕಾರಣ ಕಳೆದ 40-50 ವರ್ಷಗಳಿಂದ ಗೃಹರಕ್ಷಕ ದಳದ ಕಾರ್ಯಾಲಯವೆಂದು ಗುರುತಿಸಿಕೊಂಡಿರುವ ಈ ಕಚೇರಿಗೆ ವಿದ್ಯುತ್ ಸಂಪರ್ಕವೇ ಇಲ್ಲವೆಂದರೆ ನೀವು ನಂಬಲೇಬೇಕು. ಇತ್ತೀಚಿನ ದಿನಗಳಲ್ಲಿ ಈ ಕಾರ್ಯಾಲಯಕ್ಕೆ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ನಗರಸಭೆ ‌ಬಂದ್ ಮಾಡಿದೆ.‌ ಸ್ಥಳೀಯ ನಗರಸಭೆಯವರಾಗಲಿ, ವಿದ್ಯುತ್ ಇಲಾಖೆಯಾಗಲಿ ಕಚೇರಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ನಿತ್ಯ ಸಂಜೆಯಾಗುತ್ತಲೇ ಗೃಹರಕ್ಷಕ ಕಾರ್ಯಾಲಯದ ಆವರಣ ಕಗ್ಗತ್ತಲೆಯ ಪ್ರದೇಶವಾಗಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಸುತ್ತ-ಮುತ್ತಲಿನಲ್ಲಿ ಬೀದಿ ದೀಪಗಳು ಇದ್ದರೂ ಅವುಗಳ ಬೆಳಕು ಈ ಕಾರ್ಯಾಲಯದ ಸುತ್ತಲು ಬೆಳಗುತ್ತಿಲ್ಲ. ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಗಳ ಬೆಳಕು ಇಲ್ಲದ ಕಾರಣವೇ ಸಂಜೆ ವೇಳೆ ಕುಡುಕರು, ಪುಂಡರ ಹಾವಳಿಗೆ ಕಾರಣವಾಗಿದೆ” ಎನ್ನುತ್ತಾರೆ ಗೃಹರಕ್ಷಕ ದಳದ ಹಿರಿಯ ಸಿಬ್ಬಂದಿ ಮಂಜುನಾಥ್.

1001827280

“ರಾತ್ರಿ ವೇಳೆ ಕುಳಿತು ಕುಡಿದು ಬಿಸಾಡಿದ ಬಾಟಲಿ, ಕವರ್‌ಗಳನ್ನು ಇತರೆ ತ್ಯಾಜ್ಯಗಳನ್ನು ಬೆಳಿಗ್ಗೆ ವೇಳೆ ಅನಿವಾರ್ಯವಾಗಿ ಸಿಬ್ಬಂದಿಯೇ ಸ್ವಗೊಳಿಸಿಕೊಳ್ಳಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“20 ಮಹಿಳಾ ಸಿಬ್ಬಂದಿ, 50 ಮಂದಿ ಪುರುಷರು ಸೇರಿ ಒಟ್ಟು 70 ಜನ ಗೃಹರಕ್ಷಕ ಸಿಬ್ಬಂದಿಗಳು ನಿತ್ಯ ಈ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸಿತ್ತಿದ್ದು, ಬಂದು ಹೋಗುತ್ತಿದ್ದಾರೆ. ಕಾಯಾಲಯದಲ್ಲಿನ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾಳಾಗಿದೆ. ಕಾರ್ಯಾಲಯದಲ್ಲಿ ಪ್ರತ್ಯೇಕ ಮಹಿಳೆಯರು, ಪುರುಷರ ಕೊಠಡಿಗಳಿಲ್ಲ. ಕನಿಷ್ಠ ಮಹಿಳಾ ಕೊಠಡಿ ಕೂಡ ಇಲ್ಲದಾಗಿದೆ. ಶೌಚಾಲಯ, ಮೂತ್ರಾಲಯ ವ್ಯವಸ್ಥೆ ಇಲ್ಲ. ಮಳೆ ಬಂತೆಂದರೆ ಛಾವಣಿ ಸೋರಿಕೆಯಾಗಿ ಮಳೆಯ ನೀರೆಲ್ಲಾ ಕಾರ್ಯಾಲಯದ ಒಳಗೆ ಸೇರುತ್ತದೆ. ಇಂತಹ ಸ್ಥಿತಿಯಲ್ಲಿರುವ, ಸಂಪೂರ್ಣ ಹಾಳಾಗಿರುವ ಕಾರ್ಯಾಲಯದತ್ತ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸ್ಥಳೀಯ ಆಡಳಿತ, ತಹಶೀಲ್ದಾರ್ ಗಮನಹರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಸಿಬ್ಬಂದಿಗಳು ಮನವಿ ಮಾಡಿದ್ದಾರೆ.

1001827288

ಹರಿಹರ ಗೃಹರಕ್ಷಕ ದಳದ ಸಾರ್ಜೆಂಟ್ ಎಸ್ ಕೇಶವ ಮಾತನಾಡಿ, “ಕಳೆದ ಹಲವಾರು ವರ್ಷಗಳಿಂದ ನಮ್ಮ ಕಾರ್ಯಾಲಯದ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರುಗಳಿಗೆ, ಸಂಸದರು, ತಹಶೀಲ್ದಾರ್, ಪೌರಾಯುಕ್ತರು, ನಗರಸಭೆ ಅಧ್ಯಕ್ಷರಿಗೆ, ಸರ್ವ ಸದಸ್ಯರಿಗೆ ಮನವಿ ನೀಡಿದ್ದೇವೆ. ಸಮಾಜದ ರಕ್ಷಣೆಯ ಸಲುವಾಗಿ ಕಾರ್ಯನಿರ್ವಹಿಸುವ ಗೃಹರಕ್ಷಕ ಸಿಬ್ಬಂದಿಗಳಿಗೇ ಕಚೇರಿಯ ರಕ್ಷಣೆ ಇಲ್ಲದಂತಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿ ನಮ್ಮ ಕಾರ್ಯಾಲಯದ ಹೊಸ ನಿರ್ಮಾಣ ಅಥವಾ ಸುಸಜ್ಜಿತ ಕಾರ್ಯಾಲಯ ಒದಗಿಸಿಕೊಡಬೇಕು” ಎಂದು ಅಳಲು ತೋಡಿಕೊಂಡರು.

“ಗೃಹರಕ್ಷಕ ದಳದ ಸ್ವಯಂಸೇವಕರು ಗೃಹರಕ್ಷಕ ದಳದ ಸ್ವಂತ ಕಚೇರಿಯ ನಿವೇಶನಕ್ಕಾಗಿ ಬಹುವರ್ಷಗಳಿಂದ ಸ್ಥಳೀಯ ಶಾಸಕರಿಗೆ, ನಗರಸಭಾ ಆಡಳಿತಕ್ಕೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬರುತ್ತಿದ್ದರೂ, ಈವರೆಗೂ ಒಂದು ನಿವೇಶನವನ್ನು ನೀಡದೇ ಇರುವುದು ವಿಪರ್ಯಾಸವೆನಿಸುತ್ತದೆ” ಎಂದರು.

ಹರಿಹರ ಗೃಹರಕ್ಷಕ ದಳ ಪ್ರಭಾರಿ ಘಟಕ ಅಧಿಕಾರಿ ಕೆ ಎಚ್ ಪ್ರಕಾಶ್ ಮಾತನಾಡಿ “ಈಗಿನ ಕಚೇರಿಯನ್ನು ಬಹಳ ವರ್ಷಗಳ ಹಿಂದೆ ಬಾಡಿಗೆ ರೂಪದಲ್ಲಿ ಸುಮಾರು ₹50 ನಮ್ಮ ಗೃಹರಕ್ಷಕ ದಳ ಕಚೇರಿಗೆ ನೀಡಲಾಗಿತ್ತು. ಮಳೆ ಗಾಳಿಗೆ ಕಟ್ಟಡವು ಸಂಪೂರ್ಣವಾಗಿ ಹಾಳಾಗಿದ್ದು, ಮೇಲ್ಛಾವಣಿ ಕುಸಿದಿದೆ. ಇದೇ ಜಾಗವನ್ನು ನಮ್ಮ ಕಚೇರಿಗೆ ನೀಡಿದಲ್ಲಿ ಅಥವಾ ಬೇರೆ ನಿವೇಶನ ನೀಡಿದ್ದಲ್ಲಿ ನಮ್ಮ ಕೇಂದ್ರ ಕಚೇರಿಯಿಂದ ₹5 ಲಕ್ಷ ಅನುದಾನ ಕಟ್ಟಡ ನಿರ್ಮಾಣಕ್ಕೆ ನೀಡುತ್ತಾರೆ. ಒಂದು ಸ್ವಂತ ಕಚೇರಿಗೆ ನಿವೇಶನದ ಅಗತ್ಯವಿದ್ದು, ಇದಕ್ಕೆ ಶಾಸಕರು ಮತ್ತು ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡಬೇಕು” ಎಂದು ಮನವಿ ಮಾಡಿದರು.‌

ಹಲವು ವರ್ಷಗಳಿಂದ ಸಮಾಜದ ಹಲವು ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ರಕ್ಷಣೆಯ ಕಾರ್ಯಗಳಲ್ಲಿ ರಕ್ಷಕರಾಗಿ ಕಾರ್ಯನಿರ್ವಹಿಸುವ ಗೃಹರಕ್ಷಕ ದಳದ ಸಿಬ್ಬಂದಿ, ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ, ಸ್ವಂತ ಕಚೇರಿ ಇಲ್ಲದೆ ಪಾಳು ಬಿದ್ದಿರುವ ಕಚೇರಿಯಲ್ಲಿ ರಕ್ಷಣೆಯ ಕಾರ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸೂಕ್ತ ಕಚೇರಿಯ ರಕ್ಷಣೆ ಒದಗಿಸಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X