ವರದಕ್ಷಿಣೆಗಾಗಿ ಪತಿಯೇ ಪತ್ನಿಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೇತ್ರಾವತಿ (26) ಕೊಲೆಯಾದ ಮಹಿಳೆ. ಕಳೆದ 7 ವರ್ಷದ ಹಿಂದೆ ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪನ ಜೊತೆ ನೇತ್ರಾವತಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ದೇವೇಂದ್ರಪ್ಪ ವರದಕ್ಷಿಣೆ ರೂಪದಲ್ಲಿ 10 ತೊಲ ಬಂಗಾರ 1 ಲಕ್ಷ ರೂ ನಗದು ಹಾಗೂ ಬೈಕ್ ಕೂಡ ಪಡೆದಿದ್ದ ಎನ್ನಲಾಗಿದೆ.
ಈ ಹಿಂದೆ ಕೂಡಾ ನೇತ್ರಾವತಿ ಮೇಲೆ ದೇವೇಂದ್ರಪ್ಪನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಹಲವು ಬಾರಿ ಪೀಡಿಸಿ ಹಲ್ಲೆ ನಡೆಸಿದ್ದರು. ರಾಜಿ ಸಂಧಾನ ಮಾಡಿ ಇಬ್ಬರನ್ನು ಹಲವು ಬಾರಿ ಒಂದು ಮಾಡಿದ್ದರು. ಆದರೆ ನಿನ್ನೆ ರಾತ್ರಿ ದೇವೇಂದ್ರಪ್ಪ ಹಾಗೂ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ನೇತ್ರಾವತಿ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ | ಕೆರೆಯಲ್ಲಿ ಮುಳುಗಿ ಮೂವರು ಮಹಿಳೆಯರ ಸಾವು.
ನೇತ್ರಾವತಿ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಮಲೆಬೆನ್ನೂರು ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.
