ದಾವಣಗೆರೆ | ಅಕ್ರಮವಾಗಿ ಆಸ್ತಿ ಒತ್ತುವರಿ; ಅಧಿಕಾರಿಗಳ ವಿರುದ್ಧ ಗೆದ್ದು ಬೀಗಿದ ರೈತ ಮೇಘರಾಜಪ್ಪ

Date:

Advertisements

ಅಕ್ರಮವಾಗಿ ಆಸ್ತಿ ಒತ್ತುವರಿ ಮಾಡಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಜಗಳೂರು ತಾಲೂಕು ಅಧಿಕಾರಿಗಳ ವಿರುದ್ಧ ವೃದ್ಧ ರೈತರೊಬ್ಬರು ಗೆದ್ದು ಬೀಗಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ಒಡೆಯರಳ್ಳಿ ಗ್ರಾಮದ ರೈತ ಮೇಘರಾಜಪ್ಪ ಸ್ಥಳೀಯ ಆಡಳಿತದ ವಿರುದ್ಧ ಛಲ ಬಿಡದೆ ಹೋರಾಡಿ ತಮ್ಮ ಜಮೀನನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಅಂತಿಮವಾಗಿ ಹಿಂದಿನ ಅವಧಿಯ ಮತ್ತು ಪ್ರಸ್ತುತ ಅವಧಿಯ ಅಧಿಕಾರಿಗಳು ಲೋಕಾಯುಕ್ತ ಕೋರ್ಟ್‌ನಲ್ಲಿ ಹಾಜರಾಗಿ, ರೈತ ಮೇಘರಾಜಪ್ಪನವರ ಜಮೀನಿಗೆ ಯಾವುದೇ ಅತಿಕ್ರಮ ಪ್ರವೇಶ ಮಾಡುವುದಾಗಲಿ, ಜಮೀನಿನ ವಿಷಯದಲ್ಲಿ ತಲೆ ಹಾಕುವುದಾಗಲೀ ಮಾಡುವುದಿಲ್ಲ” ಎಂದಿದ್ದಾರೆ.

ಈ ಹಿಂದೆ ವೃದ್ಧರ ಇತರೆ ಜಮೀನಿನ ಕಬಳಿಕೆ ಸಂಬಂಧಪಟ್ಟಂತೆ ಈದಿನ ಡಾಟ್‌ ಕಾಂರೈತರ ಜಾಗ ಕಬಳಿಸಲು ದಿದ್ದಿಗೆ ಗ್ರಾಮ ಪಂಚಾಯಿತಿ ಹುನ್ನಾರ, ಆರೋಪ” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಹಲವಾರು ವರ್ಷಗಳಿಂದ ಪೂರ್ವಜರ ಆಸ್ತಿಯನ್ನು ಉಳಿಸಿ ಅನುಭವಿಸಿಕೊಂಡು ಬಂದಿದ್ದ ಜಾಗವನ್ನು ಕಬಳಿಸಲು ಸ್ಥಳೀಯ ಆಡಳಿತ ಯತ್ನಿಸಿದಾಗ. ಮೇಘರಾಜಪ್ಪ ಇದರ ವಿರುದ್ಧ ಹೋರಾಡಿ 1999ರಲ್ಲಿ ತಮ್ಮ ಪರವಾಗಿ ಆದೇಶ ಪಡೆದಿದ್ದರು. ಅಲ್ಲಿಂದಲೂ ಯಾವುದೇ ತಕರಾರು ಮಾಡದಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು 2021ರಲ್ಲಿ ಆಸ್ತಿಯ ಈ-ಸ್ವತ್ತಿಗೆ ಅರ್ಜಿ ಹಾಕಿದಾಗ ಈ ಖಾತೆ ಮಾಡಿಕೊಡಲು ₹50,000 ಲಂಚ ಕೇಳಿದ್ದರು. ಆದರೆ ಅದನ್ನು ನಿರಾಕರಿಸಿದಾಗ ಸದರಿ ಜಮೀನನ್ನು ಶಾಲೆ ಮತ್ತು ಗ್ರಾಮ ಪಂಚಾಯಿತಿ ಜಾಗವೆಂದು ಅಕ್ರಮವಾಗಿ ವಶಪಡಿಸಿಕೊಳ್ಳಲು 14 ಮಂದಿಗೆ ನೋಟಿಸ್ ನೀಡಿದ್ದರು. ಆ ಪೈಕಿ ಮೇಘರಾಜಪ್ಪನವರ ಜಮೀನನ್ನು ಕಬಳಿಸಲು ಸಂಚು ರೂಪಿಸಲಾಗಿತ್ತು ಎಂದು ಆರೋಪ ವ್ಯಕ್ತವಾಗಿತ್ತು.

Advertisements

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ʼಹಿಂದಿ ಹೇರಿಕೆʼ ಎಂಬುದು ಕೇವಲ ರಾಜಕೀಯ ದೊಂಬರಾಟವೇ?; ಕನ್ನಡಪರ ಹೋರಾಟಗಾರರ ಆಕ್ರೋಶ

ಈ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ, ಆ ಜಾಗವು ಶಾಲೆ ಅಥವಾ ಗ್ರಾಮ ಪಂಚಾಯಿತಿಗೆ ಸೇರಿದ ಜಾಗವೆಂದು ಖಚಿತಪಡಿಸಲು ಯಾವುದೇ ಪೂರಕ ದಾಖಲೆಗಳಿರದೆ ಅಧಿಕಾರಿಗಳು ದಾಖಲೆ ಸಲ್ಲಿಸಲು ವಿಫಲರಾಗಿದ್ದರು. ಇಲ್ಲಿ ಮೇಘರಾಜಪ್ಪನವರು ಪೂರಕ ದಾಖಲೆಗಳನ್ನು ಒದಗಿಸಿದ್ದರು. ಈ ಬಗ್ಗೆ ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ತಪ್ಪಾಗಿರುವುದನ್ನು ಕಂಡು ಎಚ್ಚೆತ್ತಿರುವ ಅಧಿಕಾರಿಗಳು ಡಿಸೆಂಬರ್‌ನಲ್ಲಿ ಸ್ಥಳ ಮಹಜರು ಮಾಡಿ ಲೋಕಾಯುಕ್ತ ಕೋರ್ಟಿಗೆ ವರದಿ ಸಲ್ಲಿಸಿದ್ದು, ಈ ಜಮೀನಿಗೆ ಯಾವುದೇ ಅತಿಕ್ರಮ ಪ್ರವೇಶ ಮತ್ತು ಜಮೀನಿನ ವಿಷಯದಲ್ಲಿ ಪ್ರವೇಶ ಮಾಡುವುದಿಲ್ಲವೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯ ವೃದ್ಧರೈತ ಮೇಘರಾಜಪ್ಪನಿಗೆ ನ್ಯಾಯ ಒದಗಿಸಿಕೊಟ್ಟಿದೆ.

ರೈತ ಮೇಘರಾಜಪ್ಪನ ಆಸ್ತಿಯನ್ನು ಅಳತೆ ಮಾಡಲಾಗಿದ್ದು, ಯೋಜನೆ ಸಿದ್ಧಪಡಿಸಿ, ಅವರ ಸ್ವಾಧೀನದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲವೆಂಬ ಭರವಸೆ ನೀಡಲಾಗಿದೆ.

ರೈತ ಮೇಘರಾಜಪ್ಪ ತನ್ನ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಅನುಭವಿಸುವಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲವೆಂದು ದಿದ್ದಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಲೋಕಾಯುಕ್ತ ನ್ಯಾಯಾಲಯದಲ್ಲಿ ಒಪ್ಪಿ ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X