ದಾವಣಗೆರೆಯಲ್ಲಿ ಕನ್ನಡ ನಾಮಫಲಕ ಅಳವಡಿಸದ ವಾಣಿಜ್ಯ ಮಳಿಗೆಗಳು ಮತ್ತು ಇತರೆಡೆಗಳಲ್ಲಿ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ, ಶೇ.60ರಷ್ಟು ನಾಮಪಲಕಗಳನ್ನು ಅಳವಡಿಸದ ಮಳಿಗೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ಆರಂಭಿಸಿದ್ದಾರೆ.
ದಾವಣಗೆರೆ ನಗರದ ರೈಲ್ವೆ ಸ್ಟೇಷನ್ ಹಿಂಭಾಗ ಗಡಿಯಾರ ಕಂಬದಿಂದ ಮಂಡಿಪೇಟೆಯಲ್ಲಿ ಆಂಗ್ಲ ಭಾಷೆಯ ನಾಮಫಲಕಗಳನ್ನು ಎರಡು ಬದಿಗಳಲ್ಲಿ ತೆರವು ಗೊಳಿಸುವ ಕಾರ್ಯಚರಣೆ ನಡೆಯಿತು. ಈ ವೇಳೆ ಕೆಲವು ಅಂಗಡಿಯ ಮಾಲೀಕರು ಅವರು ಬರುವುದನ್ನು ಕಂಡು ತಾವೆ ಸ್ವತಃ ತೆರವುಗೊಳಿಸುತ್ತಿದ್ದರು. ಒಟ್ಟಿನಲ್ಲಿ ತಡವಾಗಿಯಾದರೂ ಕನ್ನಡ ಪರ ಆದೇಶದ ಪಾಲನೆಯಾಗುತ್ತಿರುವುದು ಕನ್ನಡ ಪ್ರಿಯರಲ್ಲಿ ಮತ್ತು ಹೋರಾಟಗಾರರಲ್ಲಿ ನಾಗರಿಕರಲ್ಲಿ ಸಂತಸ ಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಿಬ್ಬಂದಿ ಮಾರುತಿ ಎರಡು ಮೂರು ತಂಡಗಳು ದಾವಣಗೆರೆಯಲ್ಲಿ ಶೇಕಡಾ 60ರಷ್ಟು ಕನ್ನಡ ಆದೇಶ ಪಾಲಿಸದ ನಾಮ ಫಲಕಗಳನ್ನು ತೆರವುಗೊಳಿಸಲು ಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಮುಂಚೆ ಹಲವು ಬಾರಿ ಆದೇಶ ಪಾಲಿಸದವರಿಗೆ ಎಚ್ಚರಿಸಿದ್ದರೂ , ಯಾರು ಆದೇಶ ಪಾಲನೆ ಮಾಡಿಲ್ಲವೋ ಅಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಡೆಯೂ ತೆರವು ಗೊಳಿಸಬೇಕು ಎಂದು ಅಭಿಪ್ರಾಯ ಇದ್ದು, ದಾವಣಗೆರೆಯಲ್ಲಿ ಎಲ್ಲಾ ಕಡೆ ಹಂತ ಹಂತವಾಗಿ ತೆರವು ಗೊಳಿಸುವ ಕೆಲಸ ನಡೆಯುತ್ತದೆ ಎಂದು ತಿಳಿಸಿದರು.
ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ದಾವಣಗೆರೆ ಘಟಕ ಮಂಗಳವಾರ ಪ್ರತಿಭಟನೆ ನಡೆಸಿ ಆದೇಶ ಪಾಲನೆ ಮಾಡದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು. ನಿನ್ನೆ ನಡೆದ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನದಲ್ಲೂ ಈ ಕುರಿತು ಕೂಗು ಕೇಳಿ ಬಂದಿತ್ತು.
ತೆರವು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿಗಳಾದ ಆರೋಗ್ಯ ನಿರೀಕ್ಷಕ ರಾದ ಡಾ. ಚಂದ್ರಮೋಹನ್, ರಮೇಶ್ ಚಿನ್ನಿಕಟ್ಟೆ ವಿನಾಯಕ್, ರಾಘವೇಂದ್ರ, ಮಾರುತಿ, ಇನ್ನಿತರರು ಹಾಜರಿದ್ದರು.