ತುಮಕೂರಿನ ಸಿದ್ಧಗಂಗಾ ಮಠದ ನಡೆದಾಡುವ ದೇವರು ಶ್ರೀ ಶಿವಕುಮಾರ ಶ್ರೀಗಳ ತ್ರಿವಿಧ ದಾಸೋಹ, ಅವರ ಆದರ್ಶ ಜೀವನ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ತಿಳಿಸಿದರು.
ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಶ್ರೀಗಳ ಆರನೇ ವರ್ಷದ ಸ್ಮರಣೋತ್ಸವ, ಪುತ್ಥಳಿ ಅನಾವರಣ ಹಾಗೂ ದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ವಿವಿಧ ಪೀಠದ ಶ್ರೀಗಳಿಗೆ, ಶರಣರಿಗೆ ಗೌರವ ಮರ್ಯಾದೆಗಳು ದೊರೆಯುತ್ತಿದೆ ಎಂದರೆ ಅದಕ್ಕೆ ತ್ರಿವಿಧ ದಾಸೋಹಿ ಎಂದೇ ಪ್ರಸಿದ್ಧಿ ಹೊಂದಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಮಾಡಿದ ಸೇವೆ ಹಾಗೂ ಅವರು ಹಾಕಿಕೊಟ್ಟ ಜೀವನ ಮಾರ್ಗವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿರಕ್ತಪೀಠದ ಬಸವಕುಮಾರ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಮರುಳ ಶಂಕರ ಗುರುಪೀಠದ ಸಿದ್ದ ಬಸವ ಕಬೀರ ಶ್ರೀಗಳು, ಚಿತ್ರದುರ್ಗ ಐಮಂಗಲದ ಹರಳಯ್ಯ ಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು, ಬೆಂಗಳೂರಿನ ಸರ್ವಧರ್ಮ ಸಮನ್ವಯಪೀಠದ ಸಂಗಮಾನಂದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಜ. 30ರಂದು ದೇಶಕ್ಕಾಗಿ ಮಡಿದ ಹುತಾತ್ಮರ ನೆನಪಿನ ದಿನಾಚರಣೆ
ಮಾಜಿ ಸಂಸದ ಜಿ ಎಂ ಸಿದ್ದೇಶ್ವರ, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯಶವಂತ ರಾವ್ ಜಾಧವ್, ಕಾಂಗ್ರೆಸ್ ಮುಖಂಡ ಬಕ್ಕೇಶ್, ದೂಡಾ ಸದಸ್ಯ ವಾಣಿ ಬಕ್ಕೇಶ್, ಬಿಜೆಪಿ ಮುಖಂಡ ಪುಲಾಯ್, ನವೀನ್ ಕುಮಾರ್, ಮಂಜುನಾಥ್ ಪಿಬಿ, ವೀರೇಶ್ ಹೆಚ್ ಎಸ್, ಜೆಎಚ್ ಪಟೇಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮುಸ್ತಫಾ, ದಾವಣಗೆರೆಯ ಸಿದ್ಧಗಂಗಾ ಶಿವಕುಮಾರ ಸರ್ಕಲ್ ಯುವಕರ ಸಂಘದ ಅಧ್ಯಕ್ಷ ಶಂಕರ್ ಶಿರೇಕರ್, ಸಮಿತಿಯ ಸದಸ್ಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

