ದಾವಣಗೆರೆ | ಕಾಮಗಾರಿ ಮುಗಿದ ಒಂದೇ ತಿಂಗಳಲ್ಲಿ ಬಿರುಕು ಬಿಟ್ಟ ರಸ್ತೆ; ಗ್ರಾಮಸ್ಥರ ಆಕ್ರೋಶ

Date:

Advertisements

ಗ್ರಾಮದಲ್ಲಿ ಸಿಮೆಂಟ್ ರಸ್ತೆಯ ಕಾಮಗಾರಿ ಮುಗಿದು ಕೇವಲ ಒಂದುವರೆ ತಿಂಗಳಷ್ಟೇ ಕಳೆದಿದ್ದು, ಅಷ್ಟರಲ್ಲಿಯೇ ರಸ್ತೆ ಸಂಪೂರ್ಣ ಬಿರುಕು ಬಿಟ್ಟು ಹಾಳಾಗಿದೆ ಎಂದು ಹುಚ್ಚವ್ವನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿಯ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಿ.ಸಿ.ರಸ್ತೆಯ ಸ್ಥಿತಿ ಇದು. ನಿರ್ಮಾಣವಾಗಿ ಸ್ವಲ್ಪದಿನಗಳಲ್ಲಿ ಅಲ್ಲಲ್ಲಿ ಬಿರುಕು, ಸರಿಯಾಗಿ ನೀರುಣಿಸದೇ ಇರುವುದರಿಂದ ಅಲ್ಲಲ್ಲಿ ಮೇಲ್ಪದರ ಕಿತ್ತುಹೋಗುವಂತಾಗಿದೆ.

2021-22ಸಾಲಿನ ಪ್ರಧಾನಮಂತ್ರಿ ಅಭ್ಯುದಯ ಯೋಜನೆಯ ಆದರ್ಶ ಗ್ರಾಮ ಯೋಜನೆಯಲ್ಲಿ ಸುಮಾರು 20ಲಕ್ಷ ರೂ.ಗಳ ಅನುದಾನದಲ್ಲಿ ಮಂಜೂರಾಗಿದ್ದು, ಇತ್ತೀಚೆಗೆ ಕಾಮಗಾರಿ ಕೈಗೊಂಡಿದ್ದ ಕೆಆರ್‌ಐಡಿಎಲ್ ಇಲಾಖೆ ಅಧಿಕಾರಿಗಳ ಅಥವಾ ಗುತ್ತಿಗೆದಾರರ ನಿರ್ಲಕ್ಷದಿಂದ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿ, ಸಂಪೂರ್ಣ ಕಳಪೆಯಾಗಿದ್ದು ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇದರಿಂದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

Advertisements

ಈ ಬಗ್ಗೆ ಕಾಮಗಾರಿ, ಗುಣಮಟ್ಟದ ಕಾಯ್ದುಕೊಳ್ಳಲು ಗಮನಹರಿಸಬೇಕಾಗಿದ್ದ ಜನಪ್ರತಿನಿಧಿಗಳು ಅದರಲ್ಲೂ ವಿಶೇಷವಾಗಿ ಯೋಜನೆ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬರುವ ಮಾಹಿತಿ ಗ್ರಾಮಸ್ಥರು ನೀಡಿದ್ದು, ಮಾನ್ಯ ಸಂಸದರು ಮೇಲುಸ್ತುವಾರಿ ಮಾಡಬೇಕಿತ್ತು. ಆದರೆ, ಸಂಸದರು ಗಮನಹರಿಸಲು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸರ್ಕಾರಗಳು ಎಸ್‌ಸಿ-ಎಸ್‌ಟಿ ಕಾಲೋನಿ ಅಭಿವೃದ್ಧಿಗಾಗಿ ವರ್ಷಕ್ಕೆ ಸಾವಿರಾರು ಕೋಟಿಗಳು ವ್ಯಯ ಮಾಡುತ್ತದೆ. ಆದರೆ, ಅದರ ಅನುಷ್ಠಾನ ಜವಾಬ್ದಾರಿ ಹೊತ್ತ ಇಲಾಖೆಯ ಅಧಿಕಾರಿಗಳು ಮಾತ್ರ ದಿವ್ಯಮೌನ ವಹಿಸಿ ಜಾಣಕುರುಡಾರಾಗಿದ್ದಾರೆ. ಇದರ ನಿರ್ವಹಣೆ ಜವಾಬ್ದಾರಿ ಹೊತ್ತ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಮಾತ್ರ ಬೇಕಾಬಿಟ್ಟಿ ಕೆಲಸ ನಿರ್ವಹಿಸಿದ ಫಲವಾಗಿ ಸಿ.ಸಿ.ರಸ್ತೆಯ ಗುಣಮಟ್ಟವೇ ಇಲ್ಲದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಾಮಗಾರಿ ಮುಕ್ತಾಯಗೊಂಡು 30 ದಿನಗಳು ಸಹ ಕಳೆದಿಲ್ಲ, ಆಗಲೇ ರಸ್ತೆಯೆಲ್ಲ ಬಿರುಕು ಬಿಟ್ಟಿರುವುದು ಒಂದು ಕಡೆಯಾದರೆ, ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಯದೆ ಕಡಿಮೆ ಅಳತೆಯ ರಸ್ತೆ ನಿರ್ಮಾಣ ವಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಇನ್ನು ಕಾಮಗಾರಿ ಪ್ರಾರಂಭಗೊಂಡು ಇಲ್ಲಿಯವರೆಗೂ ಹನಿ ನೀರು ಹಾಕಿ ಕ್ಯುರಿಂಗ್‌ ಮಾಡಿಲ್ಲ, ಅದಲ್ಲದೆ ಅಗತ್ಯಕ್ಕೆ ತಕ್ಕಷ್ಟು ಸಿಮೆಂಟ್ ಇನ್ನಿತರ ಸಾಮಾಗ್ರಿಗಳನ್ನು ಬಳಸಿಲ್ಲ ವೆಂಬುವುದು ರಸ್ತೆಯನ್ನು ನೋಡಿದರೆ ಎಂತವರಿಗೂ ಸಹ ತಿಳಿಯುತ್ತದೆ ಇದೊಂದು ಕಳಪೆ ಕಾಮಗಾರಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಗ್ರಾಮದ ನಿವಾಸಿ ಜಗಜೀವನ್, ಸರ್ಕಾರ ಗ್ರಾಮಗಳ ಮತ್ತು ಎಸ್‌ಸಿ-ಎಸ್‌ಟಿ ಕಾಲೋನಿಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ಅವುಗಳ ಪ್ರಯೋಜನ ಈ ರೀತಿಯ ಕಳಪೆ ಕಾಮಗಾರಿಗಳಿಂದ ಸಾರ್ವಜನಿಕರಿಗೆ, ತಳವರ್ಗದವರಿಗೆ ದೊರೆಯುತ್ತಿಲ್ಲ. ಕಳಪೆ ಕಾಮಗಾರಿ ನಡೆಸಿ ಬಿಲ್ ಮಾಡಿಸಿಕೊಳ್ಳುವುದು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸರ್ವೇಸಾಮಾನ್ಯವಾಗಿದೆ. ಈ ರಸ್ತೆಯನ್ನು ಅಗತ್ಯ ಸಾಮಗ್ರಿಗಳಿಂದ ನಿರ್ಮಿಸದೆ ಕಳಪೆ ಗುಣಮಟ್ಟದ ಮತ್ತು ಕಡಿಮೆ ಸಾಮಗ್ರಿ ಬಳಸಿ ನಿರ್ಮಿಸಲಾಗಿದ್ದು ಕ್ಯೂರಿಂಗ್ ಸಹ ಮಾಡಿರಲಿಲ್ಲ ಹಾಗಾಗಿ ರಸ್ತೆ ಗುಣಮಟ್ಟ ಕಳಪೆಯಾಗಿದೆ. ಅಳತೆಯ ಪ್ರಕಾರ ನಿರ್ಮಿಸಿಲ್ಲ, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಕೆ.ಆರ್.ಐ.ಡಿ.ಎಲ್ ಅಭಿಯಂತರ ಅಧಿಕಾರಿಗಳನ್ನ ದೂರವಾಣಿ ಮೂಲಕ ಸಂಪರ್ಕಿಸಿದರೆ ಕೆಲಸ ನಿರ್ವಹಿಸಿದ ಮಧ್ಯವರ್ತಿಗಳಿಗೆ ಹಲವು ಬಾರಿ ಸರಿಯಾಗಿ ನಿರ್ವಹಣೆ ಮಾಡಲು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ.  ಹೀಗಾಗಿ ಕಂತಿನ ಅನುದಾನ ತಡೆಹಿಡಿದ್ದೇವೆ, ಮುಂದಿನ ದಿನಗಳಲ್ಲಿ ರಿಪೇರಿ ಅಥವಾ ನಿರ್ವಹಣೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರವಿಂದ್ ಈ ಕಾಮಗಾರಿಯು ಕೆ.ಆರ್.ಐ.ಡಿ.ಎಲ್ ಟೆಂಡರ್ ಕರೆದಿದ್ದ ಕಾಮಗಾರಿ ಹಾಗೂ ಅವರೇ ಇದನ್ನು ಮೇಲುಸ್ತುವಾರಿ ವಹಿಸಿ ನಿರ್ಮಿಸಿದ್ದು. ಇದು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವುದರಿಂದ ಇದರ ಬಗ್ಗೆ  ಕಳಪೆ ಕಾಮಗಾರಿಯ ಆರೋಪದ ಮಾಹಿತಿ ಬಂದಿದ್ದು, ಈ ಬಗ್ಗೆ ಅವರಿಗೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮತ್ತು ಇಲಾಖೆಗೆ ಪತ್ರ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

ಒಟ್ಟಾರೆ, ಏನೇ ಇರಲಿ ಸರ್ಕಾರ ನೀಡುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಅನುದಾನ ಸದ್ಬಳಕೆ ಆಗಬೇಕು ವಿನಃ ಕಾಟಚಾರಕ್ಕೆ ಕಾಮಗಾರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವುದು ಅದರ ಪ್ರಯೋಜನ ಜನಸಾಮಾನ್ಯರಿಗೆ ದೊರೆಯದೆ ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುವುದನ್ನು  ಪ್ರಜ್ಞಾವಂತರು ತಡೆಯಬೇಕಿದೆ. ಸಂಭಂದಪಟ್ಟ ಅಧಿಕಾರಿಗಳು, ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡು ಉತ್ತಮ ರಸ್ತೆ, ಸೌಲಭ್ಯ ಜನಗಳಿಗೆ ಒದಗಿಸಲಿ ಎನ್ನುವುದು ಗ್ರಾಮಸ್ಥರ ಆಗ್ರಹ ಮತ್ತು ಈ ದಿನ.ಕಾಂ ಕಳಕಳಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

1 COMMENT

  1. ಮೊದಲು ಮಾಹಿತಿ ತಿಳಿದು ಪಬ್ಲಿಶ್ ಮಾಡಿ ಬ್ರದರ್ ಅದು ಪ್ರಧಾನ ಮಂತ್ರಿಗಳಾದ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಅಲ್ಲ ರಾಜ್ಯ ಸರ್ಕಾರದ ಸಮಾಜಕಲ್ಯಾಣ ಇಲಾಖೆಯ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಬರುವ ಅನುದಾನ ಅದರ ಮೇಲ್ ಉಸ್ತುವಾರಿ ಶಾಸಕರು ಆಗಿರುತ್ತಾರೆ ಸಂಸದರಾಗಿರುವುದಿಲ್ಲ ಇನ್ನು ಅಲ್ಲಿ ಯಾವುದೇಕಳಪೆ ಕಾಮಗಾರಿ ನೆಡೆದಿಲ್ಲ ನಂದು ಅದೆ ಊರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X