ಬೇಸಿಗೆ ಜಳಕ್ಕೆ ಕೋಳಿಫಾರಂಗಳಲ್ಲಿ ಕೋಳಿ ಸಾಯುತ್ತಿರುವ ಹಿನ್ನೆಲೆ ಕೋಳಿ ಉತ್ಪಾದನೆ ಕುಸಿದಿದ್ದು, ಮಾರಾಟಕ್ಕೆ ಮಾಂಸದ ಕೊರತೆ ಉಂಟಾಗಿದೆ.
ಯುಗಾದಿ ಹಬ್ಬಕ್ಕೆ ಸಹಜವಾಗಿಯೇ ಕೋಳಿ ಬೆಲೆ ಹೆಚ್ಚಾಗುತ್ತದೆ. ಹಾಗಾಗಿಯೇ ಹಬ್ಬಕ್ಕೆ ಮಾರುಕಟ್ಟೆಗೆ ಬರುವಂತೆ ರೈತರು ಫಾರಂ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಆದರೆ ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕೋಳಿಗಳು ಸಾಕಾಣಿಕೆ ಕೇಂದ್ರದಲ್ಲಿ ಸಾಯುವ ಪ್ರಮಾಣ ಹೆಚ್ಚಾಗಿದೆ.
ಸಾಮಾನ್ಯವಾಗಿ ಯುಗಾದಿ ಹಬ್ಬ ಒಂದು ವಾರ ಇರುವಂತೆ ಮಾರುಕಟ್ಟೆಗೆ ಕೋಳಿ ಸಬರಾಜು ಕಡಿಮೆಯಾಗುತ್ತದೆ. ಹಾಗೆಯೇ ಖರೀದಿಯೂ ಕಡಿಮೆಯಾಗುತಿತ್ತು. ಆದರೆ ಈ ಬಾರಿ ಖರೀದಿ ಮಾತ್ರ ಕಡಿಮೆಯಾಗಿಲ್ಲ. ರಂಜಾನ್, ಯುಗಾದಿ ಹಬ್ಬ ಎರಡೂ ಒಂದೆರಡು ದಿನಗಳ ಅಂತರದಲ್ಲೇ ಇರುವುದರಿಂದ ಕೋಳಿ ಮಾಂಸದ ಬೆಲೆ ಮತ್ತಷ್ಟು ಹೆಚ್ಚಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಕಾಂಗ್ರೆಸ್ ಅಭ್ಯರ್ಥಿ ಪರ ಕರಪತ್ರ ಮುದ್ರಣ; ಅನುಮತಿ ಪಡೆಯದ ಪ್ರಿಂಟಿಂಗ್ ಪ್ರೆಸ್‌ಗೆ ಬೀಗಮುದ್ರೆ
ಲೋಕಸಭಾ ಚುನಾವಣೆ ಇರುವುದರಿಂದ ಜನಸಾಮಾನ್ಯರ ಕೈಯಲ್ಲಿ ಹಣ ಇರುವುದು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರ ಕೈಯಲ್ಲೂ ಹಣ ಇರುವುದರಿಂದ ಕೊಳ್ಳುವ ಶಕ್ತಿ ವೃದ್ಧಿಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕೋಳಿ ಮಾಂಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯು ಇದೆ ಎಂಬುದು ಕೋಳಿ ಮಾರಾಟಗಾರರ ಲೆಕ್ಕಾಚಾರವಾಗಿದೆ.
