ನಿಜಗುಣಾನಂದರಿಗೆ ಕೊಲೆ ಬೆದರಿಕೆ: ಬೈಲೂರು ಸ್ವಾಮೀಜಿ ಜೊತೆಗೆ ನಾವಿದ್ದೇವೆ ಎಂದ ಭಾಲ್ಕಿಶ್ರೀ

Date:

Advertisements

ಬೆಳಗಾವಿ ಜಿಲ್ಲೆಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮದೇಯ ವ್ಯಕ್ತಿ ಕೊಲೆ ಬೆದರಿಕೆ ಹಾಕಿರುವುದನ್ನು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ, ಲಿಂಗಾಯತ ಮಠಾಧಿಪತಿ ಒಕ್ಕೂಟ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಖಂಡಿಸಿದ್ದಾರೆ.

ನಿಜಗುಣಾನಂದ ಸ್ವಾಮಿಗಳಿಗೆ ಬೆಂಬಲ ನೀಡಿ ಪತ್ರ ಬರೆದಿರುವ ಅವರು, “ನಿಜಗುಣಾನ೦ದ ಸ್ವಾಮಿಗಳು ನಮ್ಮ ನಾಡಿನ ಪ್ರಗತಿಪರ ಚಿ೦ತನೆಯ ಧ್ವನಿಯಾಗಿದ್ದಾರೆ. ಬಸವಾದಿ ಶರಣರ ಹಾಗೂ ಬುದ್ಧ, ಘುಲೆ, ಅ೦ಬೇಡ್ಡರ್‌ ಅವರ ಚಿ೦ತನೆಗಳನ್ನು ನಿರ್ಭಿಡೆಯಿ೦ದ ಜನ-ಮನದಲ್ಲಿ ಬಿತ್ತುತ್ತ ವೈಚಾರಿಕ ಪ್ರಜ್ಞೆ ಬೆಳೆಸುತ್ತಿದ್ದಾರೆ. ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ” ಎಂದು ಹೇಳಿದ್ದಾರೆ.

“ಅವರ ಪ್ರಗತಿಪರ ಚಿಂತನೆಗಳಗೆ ವಿರುದ್ಧವಾಗಿರುವ ಪಟ್ಟಭದ್ರರು ಇದನ್ನು ವಿರೋಧಿಸುವುದಕ್ಕಾಗಿ ಸ್ವಾಮೀಜಿಯವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ. ಇ೦ತಹ ಕೃತ್ಯಗಳಿಗೆ ಶರಣರ ವಾರಸುದಾರರು ಎ೦ದಿಗೂ ಅಂಜುವುದಿಲ್ಲ. ಪಟ್ಟಭದ್ರರು ಬೆದರಿಸುವ ಮೂಲಕ ಪ್ರಗತಿಪರ ಚಿ೦ತನೆಗಳನ್ನು ಅಡಗಿಸಬೇಕೆಂದು ಇ೦ತಹ ಹುನ್ನಾರು ಮಾಡುತ್ತಲೇ ಇರುತ್ತಾರೆ. ಅದಕ್ಕೆ ನಿಜಗುಣಾನ೦ದ ಸ್ವಾಮಿಗಳು ಹೆದರಬೇಕಾಗಿಲ್ಲ” ಎಂದು ಅವರು ತಿಳಿಸಿದ್ದಾರೆ.

Advertisements

“ನಿಜಗುಣಾನಂದರ ಜೊತೆ ನಾಡಿನ ಬಸವಪರ ಚಿ೦ತನೆಯ ಅನೇಕ ಸಂಘಟನೆಗಳು ಇವೆ. ಪೂಜ್ಯರಿಗೆ ಬೆದರಿಕೆ ಹಾಕುತ್ತಿರುವುದು ಯಾರೆ೦ದು ಸರ್ಕಾರ ಶೀಘ್ರದಲ್ಲೇ ಪತ್ತೆ ಹಚ್ಚಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಜೊತೆಗೆ ನಾಡಿನ ಪ್ರಜ್ಞಾವಂತ ಸಮಾಜ ಸ್ವಾಮೀಜಿಯವರ ಚಿ೦ತನೆಗಳಿಗೆ ಬೆಂಬಲ ನೀಡಬೇಕೆಂದು ಆಶಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ನೆರೆ ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿ : ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರಗಿ ಜಿಲ್ಲೆಯಾದ್ಯಂತ ಸತತ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನೆರೆ ಪರಿಸ್ಥಿತಿ...

ಗದಗ | ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

 "ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಿಂದ ಸಾಕಷ್ಟು ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳ ಸಾರ್ವಜನಿಕರ...

ಬೀದರ್‌ | ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವದ್ವಯರ ಭೇಟಿ; ಪರಿಶೀಲನೆ

ಕಮಲನಗರ ಹಾಗೂ ಔರಾದ್‌ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಸ್ತುವಾರಿ...

ಹಾವೇರಿ | ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

"ಪರಿಶಿಷ್ಟ ವರ್ಗದ ಜನಾಂಗದ ಏಳಿಗಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳಿಗೆ ಶ್ರೀ ಮಹರ್ಷಿ...

Download Eedina App Android / iOS

X