ಸಾಲಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಲಸೂರು ತಾಲೂಕಿನ ಕೇಸರ ಜವಳಗಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕಂಟೆಪ್ಪ ಪೀರಣ್ಣ ವಾಘೆ (60) ಮೃತ ರೈತ. ಕೃಷಿ ಚಟುವಟಿಕೆಗಾಗಿ ಪಿಕೆಪಿಎಸ್ ಬ್ಯಾಂಕ್ ನಲ್ಲಿ 2.5 ಲಕ್ಷ ರೂ. ಸಾಲ ಸೇರಿದಂತೆ ಖಾಸಗಿ ಸಾಲ ಮಾಡಿದ್ದರು.
ಕಳೆದ ಮೂರು ವರ್ಷಗಳಿಂದ ಬೆಳೆದ ಫಸಲು ಕೈಗೆ ಸಿಗದೆ ನಷ್ಟವುಂಟಾಗಿದ್ದರಿಂದ ಸಾಲ ತೀರಿಸುವ ಚಿಂತೆಯಲ್ಲಿ ನೊಂದು ಶುಕ್ರವಾರ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಮಂಗಲಬಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಇಡೀ ಜೀವಸಂಕುಲವನ್ನು ʼನಮ್ಮವʼ ಎಂದು ಕರೆದವರು ಬಸವಣ್ಣ : ಸಭಾಪತಿ ಬಸವರಾಜ ಹೊರಟ್ಟಿ
ಈ ಕುರಿತು ತಾಲೂಕಿನ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.