ಸಾಲಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಕೆಎಚ್‍ಬಿ ಕಾಲೋನಿಯಲ್ಲಿರುವ ಗ್ರೀನ್‍ಪಾರ್ಕ್‌ನಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಸಂಗೋಳಗಿ (ಸಿ) ಗ್ರಾಮದ ಮಹೇಶಕುಮಾರ ಮೃತ ವ್ಯಕ್ತಿ ಎನ್ನಲಾಗಿದೆ.
ಮಹೇಶಕುಮಾರ್ ಸಾಲ ಮಾಡಿ ಗ್ರೀನ್‍ಪಾರ್ಕ್‍ನಲ್ಲಿ ಅಪಾರ್ಟ್‍ಮೆಂಟ್ ಖರೀದಿ ಮಾಡಿದ್ದರು. ಅಲ್ಲದೆ ಸ್ನೇಹಿತರ ಬಳಿ ಕೈಗಡ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವುದು ಹೇಗೆ ಎಂದು ನೊಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.