ಕಲಬುರಗಿ ಜಿಲ್ಲೆಗೆ ಹಸಿ ಬರಗಾಲವೆಂದು ಘೋಷಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ನೀಡಿ: ಸ್ಥಳೀಯ ಸಂಘಟನೆಗಳ ಆಗ್ರಹ

Date:

Advertisements

ಕಲಬುರಗಿ ಜಿಲ್ಲೆಗೆ ಹಸಿ ಬರಗಾಲವೆಂದು ಘೋಷಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ಕೊಡಿ, ರೈತರ ಸಾಲ ಮನ್ನಾ ಮಾಡಿ ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತ, ದಲಿತ, ಕನ್ನಡ, ವಿದ್ಯಾರ್ಥಿ, ಮಹಿಳಾ, ಕಾರ್ಮಿಕ ಪರ ಸಂಘಟನೆಗಳ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.

ಕಲಬುರಗಿ ನಗರದಲ್ಲಿ ಇಂದು ಮಧ್ಯಾಹ್ನ ದುಂಡು ಮೇಜಿನ ಸಭೆ ನಡಸಿ ಒಮ್ಮತವಾಗಿ ತಿರ್ಮಾನಿಸಿದ್ದು, “ನದಿಗಳು ನೀರಿನಿಂದ ಜಲಾವೃತವಾಗಿರುವ ಮುಳುಗಡೆ ಪ್ರದೇಶಕ್ಕೆ ಶಾಶ್ವತ ಪರಿಹಾರ ಮಾಡಿಕೊಡಬೇಕು. ದನಕರುಗಳು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಕೊಡಬೇಕು. ಹಿಂಗಾರು ಬಿತ್ತನೆಗೆ ಬಿತ್ತನೆಬೀಜ, ರಸಗೊಬ್ಬರವನ್ನು ಉಚಿತವಾಗಿ ನೀಡಬೇಕು” ಎಂದು ಆಗ್ರಹಿಸಿದರು.

“ಅಕ್ಟೋಬರ್‌ 2ರಿಂದ ಕೆರಿ ಬಂಡ್ ರೊಡ್ ಜಗತ್ ಸರ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ, 13ರಂದು ಕಲಬುರಗಿ ಬಂದ್‌ಗೆ ಕರೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್‌ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡನ್ನೂ ಪಾರಾಗಿ ಉತ್ತಮ ಬೆಳೆ ಬಂದರೂ ಕೂಡ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯ ಸ್ಥಳೀಯ ಸಂಘಟನೆಗಳು

ಈ ಸುದ್ದಿ ಓದಿದ್ದೀರಾ? ಜಿಬಿಎ ವ್ಯಾಪ್ತಿಯ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ: ಅ. 8 ರಂದು ಸಿಎಂ ನೇತೃತ್ವದಲ್ಲಿ ಸಭೆ

ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್)‌ ಶಿವುಶರಣಪ್ಪಾ ಮುಳೆಗಾಂವ, ಎ ಬಿ ಹೊಸಮನಿ, ಅರ್ಜುನ್ ಗೊಬ್ಬುರು, ಕಲಬುರಗಿ HKCCI ಅಧ್ಯಕ್ಷ ಶರಣು ಪಪ್ಪಾ, ಕೆಪಿಆರ್‌ಎಸ್‌ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸ್ಸಪ್ಪಾ ಮಮಶೆಟ್ಟಿ,
ರಾಜ್ಯ ರೈತ ಸಂಘ ಅಧ್ಯಕ್ಷ, ಆದಿನಾತ ಹಿರಾ ಪ್ರಗತಿ ಪರ ರೈತ ದಯಾನಂದ ಪಾಟಿಲ್, AIAWU ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಗದೀಶ್ ಪಾಟೀಲ್, ಜಗದೇವಿ ರಾಜ್ಯ ರೈತ ಸಂಘದ ಉಮಾಪತಿ ಪಾಟೀಲ್, ತೊಗರಿ ಬೆಳೆಗಾರರ ಸಂಘ ಅಧ್ಯಕ್ಷ ಬಸವರಾಜ ಇಂಗಿನ, ಎಐಕೆಎಸ್‌ ಅಧ್ಯಕ್ಷ ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ರಾಜ್ಯ ರೈತ ಸಂಘ ಹಸಿರು ಸೈನ್ಯ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಾಹಾಂತ ಗೌಡ ಪಾಟಿಲ್, ಮಂಜುಳಾ ಬಜಂತ್ರಿ, ಕನ್ನಡ ಪರ ಸಂಘಟನೆ ಅಧ್ಯಕ್ಷ ರವಿ ದೆಗಾಂವ, ದಿವ್ಯಾ ಹಾಗರಗಿ, ಕನ್ನಡ ಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಸಂದಿಪ್ ಭರಣಿ, ಚಂದ್ರಶೇಖರ ಪಾಟಿಲ್ ಹರಸುರು, ಸಿಐಟಿಯು ಎಂ ಬಿ ಸಂಜನ, ಜೆಎಂಎಸ್‌ ಪದ್ಮಿನಿ ಕಿರಣಗಿ ಕೆಆರ್‌ಎಸ್‌ ಸಿದ್ದು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X