ಬೀದರ್ ತಾಲ್ಲೂಕಿನ ವಿಳಾಸಪುರ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವಾಡ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ವಿಳಾಸಪುರದ ಗ್ರಾಮದ ಅವಿನಾಶ್ ಉಪ್ಪಾರ್ ಮತ್ತು ದಿಗಂಬರ್ ಪಾಟೀಲ್ ಬಂಧಿತ ಆರೋಪಿಗಳು. ಮಂಗಳವಾರ ಬೆಳಗ್ಗೆ ಬೀದರ ನಗರದ ನೌಬಾದ್ ಬಸವೇಶ್ವರ್ ವೃತ್ತದ ಹತ್ತಿರ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಹುಲೆಪ್ಪ ಗೌಡಗೊಂಡ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮೆಕಾಲೆ ಶಿಕ್ಷಣದಿಂದ ಸಂಸ್ಕೃತಿಗೆ ಧಕ್ಕೆ : ತಡೋಳಾ ಶ್ರೀ
ಡಿ.12ರ ರಾತ್ರಿ ವಿಳಾಸಪುರ್ ಗ್ರಾಮದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿತ್ತು. ಈ ಘಟನೆ ಸಂಬಂಧ ಗ್ರಾಮದ ಕಬೀರದಾಸ್ ಮೇತ್ರೆ ಎಂಬುವರು ದೂರು ನೀಡಿದ್ದರು. ಡಿ.13ರಂದು ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿತ್ತು.