‘ಫ್ಯಾಸಿಸಂ’ ಸೋಲು ಜನಪರ ಚಳುವಳಿಗಳ ನಿರಂತರ ಹೋರಾಟದಿಂದ ಮಾತ್ರ ಸಾಧ್ಯ : ಚಿಂತಕ ಶಿವಸುಂದರ್

Date:

Advertisements

ದೇಶದಲ್ಲಿರುವ ಫ್ಯಾಸಿಸಂ ಅನ್ನು ಸೋಲಿಸಲು ಜನಪರ ಚಳುವಳಿಗಳು ಸಕ್ರಿಯವಾಗಬೇಕೆಂದು ಖ್ಯಾತ ಚಿಂತಕರಾದ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ್ದ “ಯುವ ಅಂದೋಲನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಫ್ಯಾಸಿಸಂ ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಫ್ಯಾಸಿಸಂ ಮನಸ್ಥಿತಿಯನ್ನು ಹೋಗಲಾಡಿಸುವ ವ್ಯವಸ್ಥೆಯೇ ಈ ಸಮಸ್ಯೆಯ ಭಾಗವಾಗಿರುವುದು ವಾಸ್ತವಿಕತೆಯಾಗಿದ್ದು ಕಾಂಗ್ರೆಸ್ ಹೊರತಾದ ಚಳುವಳಿಯೊಂದನ್ನು ಸಕ್ರಿಯಗೊಳಿಸಬೇಕಾದ ಅಗತ್ಯವಿದೆ. ಈ ಚಳುವಳಿಗಳಿಂದ ತಕ್ಷಣ ಫಲಿತಾಂಶ ಹೊರಬಾರದಿದ್ದರೂ ದಶಕಗಳ ನಿರಂತರ ಪ್ರಯತ್ನದಿಂದ ಜನರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿರುವ ಕೋಮುವಾದವನ್ನು ದೂರೀಕರಿಸಲು ಖಂಡಿತ ಸಾಧ್ಯ ಎಂದರು.

Advertisements

ದಶಕಗಳ ಹಿಂದೆ ಕನಿಷ್ಠ ವೋಟ್ ಶೇರಿಂಗ್ ಪಡೆದ ಬಿಜೆಪಿ ಇಂದು ದೇಶದಲ್ಲಿ 36 % ಮತಗಳಿಸಿದ್ದಿದ್ದರೆ ಅದರ ಹಿಂದೆ ನೂರು ವರ್ಷದ ಪರಿಶ್ರಮ ಇದೆ. ಈ ಮುಂಚೆ ಜನರ ಬಳಿ ಚಳುವಳಿಗಳು ಇದ್ದವು. ದಲಿತ ಚಳುವಳಿ, ಕಾರ್ಮಿಕ ಚಳುವಳಿ, ಮುಸ್ಲಿಮರ ವಿವಿಧ ಚಳುವಳಿಗಳು ಸಕ್ರಿಯವಾಗಿದ್ದ ಕಾರಣ ಜನ ಫ್ಯಾಸಿಸಂ ಅಜೆಂಡಾಗಳಿಗೆ ಬಲಿಯಾಗದಂತೆ ಚಳುವಳಿಗಳ ಜನರು ತಡೆಯುವಲ್ಲಿ ಸಫಲರಾಗುತ್ತಿದ್ದರು. ಇಂದು ಚಳುವಳಿಗಳ ವಿಭಜನೆ ಮತ್ತು ದುರ್ಬಲಗೊಂಡ ಕಾರಣ ಫ್ಯಾಸಿಸಂ ಬಲಿಷ್ಠವಾಗಿ ಬೆಳೆಯುತ್ತಿದೆ. ಈಗ ಫ್ಯಾಸಿಸಂನ ಹಿಂದೆ ಕಾರ್ಪೊರೇಟ್ ಶಕ್ತಿಗಳು ಕೂಡ ಇರುವುದರಿಂದ ಇದನ್ನು ಸೋಲಿಸಲು ನಿರಂತರ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು.

ಚಿಂತಕ shiv sundar

ನಾವುಗಳು ಇಂದು ಚಳುವಳಿಗಳನ್ನು ನಮ್ಮ ಜೀವನದ ಆದ್ಯತೆ ಮಾಡಿಕೊಂಡರೆ ಭವಿಷ್ಯದ ಜನರಿಗೆ ಒಂದೊಳ್ಳೆಯ ಸಮಾಜ ನಿರ್ಮಿಸಿ, ಬಿಟ್ಟು ಹೋಗಲು ಸಾಧ್ಯವಾಗುತ್ತದೆ. ಈ ಫ್ಯಾಸಿಸಂ ಅನ್ನು ಸಂವಿಧಾನದ ಪರಿಧಿಯಲ್ಲಿ ಅರ್ಥೈಸಿಕೊಂಡು ಜನರಿಗೆ ವಿವಿಧ ಕಾರ್ಯಕ್ರಮಗಳ ಮುಖಾಂತರ ತಲುಪಬೇಕಾಗಿದೆ. ನಿರಂತರ ಸುಳ್ಳಿನಿಂದ ಜನರಲ್ಲಿ ದ್ವೇಷ ಬಿತ್ತುವ ಫ್ಯಾಸಿಸಂ ಶಕ್ತಿಗಳ ಹಾಗೆ ನಾವು ನಿರಂತರ ಸತ್ಯ ತಲುಪಿಸುವ ಮುಖಾಂತರ ಜನರ ಮನಸ್ಸು ತೆರೆಯಲು ಸಾಧ್ಯವಾಗುತ್ತದೆ. ಇವತ್ತು ದೇಶದಲ್ಲಿ ‌ಮುಸ್ಲಿಮರು ಫ್ಯಾಸಿಸ್ಟ್ ಶಕ್ತಿಗಳ ಕುರಿತು ಹೆಚ್ಚು ಅರಿವು ಮೂಡಿಸಿಕೊಂಡಿದ್ದಾರೆ. ಮುಸ್ಲಿಮೇತರರು ಈ ಕುರಿತು ಚಿಂತಿಸಿ ತಿರಸ್ಕರಿಸಬೇಕಾದ ಅಗತ್ಯವಿದೆ. ಎಲ್ಲರನ್ನೊಳಗೊಂಡ ಜನಪರ ಚಳುವಳಿಯಿಂದ ಖಂಡಿತ ಈ ಫ್ಯಾಸಿಸಂ ಅನ್ನು ಸೋಲಿಸಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಶುಐಬ್ ಮಲ್ಪೆ, ಸರ್ಫರಾಜ್ ಮನ್ನಾ,ಎಸ್.ಐ.ಓನ ಆಯಾನ್ ಮಲ್ಪೆ, ಜಿ.ಐ.ಓನ ನೂಝ್ಲಾ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X