ಭಾಲ್ಕಿ ತಾಲೂಕಿನ ಅಂಗನವಾಡಿ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅನ್ಯಾಯ ಆಗಿದ್ದು ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ತಾಲೂಕು ಮಾದಿಗ ಮೀಸಲಾತಿ ಸಮಿತಿ ಒತ್ತಾಯಿಸಿದೆ.
ಈ ಕುರಿತು ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಾದಿಗ ಮೀಸಲಾತಿ ಸಮಿತಿಯ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಕಾರ್ಯಕರ್ತೆ ಹುದ್ದೆಗಳ ನೇಮಕಾತಿಯಲ್ಲಿ ನಿಯಮ ಪಾಲನೆ ಆಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೂಲ ದಾಖಲೆ ಪರಿಶೀಲಿಸದೇ ಬೇಕಾಬಿಟ್ಟಿ ನೇಮಕ ಮಾಡಲಾಗಿದೆ. ಇದರಿಂದ ಅರ್ಹರಿಗೆ ಅನ್ಯಾಯ ಆಗಿದೆ ಕೂಡಲೇ ತಾತ್ಕಾಲಿಕ ನೇಮಕಾತಿ ಪಟ್ಟಿ ತಡೆ ಹಿಡಿದು ಕಮಿಟಿ ರಚಿಸಿ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ ಮೋರೆ, ಪ್ರೇಮಕುಮಾರ ಮೇತ್ರೆ, ಮನೋಜಕುಮಾರ ಕಾಂಬಳೆ, ದಿಕ್ಷಿತ ಮೋರೆ, ತುಕಾರಾಮ ಕಾಸಳೆ, ಪ್ರವೀಣ ಮೇತ್ರೆ, ಸಿದ್ಧಾರ್ಥ ಪ್ಯಾಗೆ, ಸಲ್ಮಾನ ಸಿಂದನಕೇರೆ, ಪ್ರೇಮ ಬಸನೂರ್, ಸಂತೋಷ ನಾಟೇಕರ್, ಸಾರಿಪುತ್ರ ಸಿಂಗಾರೆ ಇದ್ದರು.