ಬೆಳಗಾವಿ ಜಿಲ್ಲೆಯ ಕಾಘವಾಡ ತಾಲೂಕು ರಚನೆಯಾಗಿ 4 ವರ್ಷ ಕಳೆದಿವೆ. ಆದರೂ, ಇಲ್ಲಿಯವರೆಗೆ ತಾಲೂಕಿನಲ್ಲಿ ಇರಬೇಕಾದ ಅನೇಕ ಕಚೇರಿಗಳನ್ನು ನಿರ್ಮಿಸಿಲ್ಲ. ಶೀಘ್ರವಾಗಿ ತಾಲೂಕು ಮಟ್ಟದ ಎಲ್ಲ ಕಚೇರಿಗಳನ್ನು ತೆರೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಕಾಘವಾಡ ತಹಸಿಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಸಂಘಟನೆ ಕಾರ್ಯಕರ್ತರು, “ಕಾಘವಾಡದಲ್ಲಿ ತೋಟಗಾರಿಕಾ ಇಲಾಖೆ ಕಚೇರಿ, ಉಪನೋಂಧನಾಧಿಕಾರಿ ಕಚೇರಿ, ಅಬಕಾರಿ ಇಲಾಖೆ, ಆಹಾರ ಇಲಾಖೆ, ಸಹಾಯಕ ಭೂ ಧಾಖಲೆಗಳ ಇಲಾಖೆ, ಕಾರ್ಮಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ಜಲ ಮತ್ತು ಒಳನಾಡು ಸಾರಿಗೆ ಇಲಾಖೆ, ಆರ್‌ಟಿಓ ಇಲಾಖೆಯ ಕಚೇರಿಗಳಿಲ್ಲ. ಮಾತ್ರವಲ್ಲ, ಪರಿಸರ ಮಾಲಿನ್ಯ, ಸಹಕಾರ ನಿಬಂಧಕರು, ತಾಲೂಕು ಆರೋಗ್ಯಾಧಿಕಾರಿಗಳು, ಕೃಷಿ ಮಾರುಕಟ್ಟೆ. ಅಗ್ನಿಶಾಮಕ ದಳ. ಪಶು ಸಂಗೋಪನ ಇಲಾಖೆಯ ಕಚೆರಿಗಳು ಕೂಡ ಇಲ್ಲ. ಕೂಡಲೇ ಎಲ್ಲ ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು. ಆ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.