ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರ ಅಭಿವೃದ್ಧಿಗಾಗಿ ಪ್ರತ್ಯೇಕ ಹಣ ನೀಡುತ್ತದೆ. ಆದರೆ ಕಳೆದ ನಾಲ್ಕು ಐದು ವರ್ಷಗಳಿಂದ ಅಂಗವಿಕಲರಿಗೆ ಮೀಸಲಿರುವ ಹಣ ಸಮಪರ್ಕವಾಗಿ ಬಳಕೆ ಮಾಡದೇ ಅಂಗವಿಕಲರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಭಾರತೀಯ ಅಂಗವಿಕಲರ ಸಂಘ ಹಾಗೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಾಂತಕುಮಾರ ಮುಕ್ತಾ ಆರೋಪಿಸಿದ್ದಾರೆ.
ಈ ಸಂಬಂಧ ಅಂಗವಿಕಲರ ಸಂಘ ಹಾಗೂ ಹಿತರಕ್ಷಣಾ ಸಮಿತಿಯಿಂದ ಹುಲಸೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅವರಿಗೆ ಹಕ್ಕೊತ್ತಾಯ ಪತ್ರ ಸಲಿಸಿದರು.
“ಈಗಾಗಲೇ ಗ್ರಾಮ ಪಂಚಾಯಿತಿನಲ್ಲಿ ಇರುವ ಹತ್ತು ಲಕ್ಷದಷ್ಟು ಹಣ ದುರ್ಬಳಕೆ ಮಾಡದೇ ಅರ್ಹ ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಬಳಸಬೇಕು. ಈ ಕುರಿತು ಒಂದು ವಾರದಲ್ಲಿ ಈ ಮೀಸಲು ಹಣ ಬಳಸದೆ ಇದ್ದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸತ್ಯಾಗ್ರಹ ಆರಂಭಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಈ ಕುರಿತು ಹಿರಿಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ; ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಕಾಂತ ನಂಜವಾಡೆ, ರವಿ ದೇವನಾಳೆ, ಅರವಿಂದ ಪಾರಶೆಟ್ಟೆ, ರವೀಂದ್ರ, ಕಾಶಿನಾಥ್, ನೌಸೇದ ಹಮ್ಮಿದ್ ಸೇರಿದಂತೆ ಸಮಿತಿ ಸದಸ್ಯರು ಇದ್ದರು.
ವರದಿ ಮಾಹಿತಿ : ದತ್ತಾ ಮೋರೆ