ಬೀದರ್‌ | ಪಂಚನಾಮೆ ಪ್ರಕ್ರಿಯೆಗಾಗಿ ಲಂಚಕ್ಕೆ ಬೇಡಿಕೆ; ಎಎಸ್‌ಐ ಅಮಾನತು

Date:

Advertisements

ಬೆಳೆದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬು ಸುಟ್ಟಿ ಹೋಗಿದ್ದರ ಬಗ್ಗೆ ದೂರು ನೀಡಿದ ವ್ಯಕ್ತಿಯೊಬ್ಬರ ಹೊಲಕ್ಕೆ ಪಂಚನಾಮೆಗೆ ತೆರಳಿದ ವೇಳೆ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದು ಸಾಬೀತಾದ ಹಿನ್ನಲೆ ಎಎಸ್‌ಐ ಒಬ್ಬರು ಅಮಾನತುಗೊಂಡಿದ್ದಾರೆ.

ಬೀದರ್ ಜಿಲ್ಲೆಯ ಹುಲಸೂರ ಪೊಲೀಸ್ ಠಾಣೆ ಎಎಸ್ಐ ಶಾವುರಾಜ್ ಅಮಾನತುಗೊಂಡವರು.

“ಹುಲಸೂರ ತಾಲೂಕಿನ ಬೇಲೂರು ಗ್ರಾಮದ ವ್ಯಕ್ತಿಯೊಬ್ಬರ ಹೊಲದಲ್ಲಿ ಸುಟ್ಟು ಹೋದ ಕಬ್ಬಿನ ಪಂಚನಾಮೆ ಪ್ರಕ್ರಿಯೆಗಾಗಿ ತೆರಳಿದ್ದಾಗ ಎಎಸ್‌ಐ ಶಾವುರಾಜ್‌ ರೈತರೊಂದಿಗೆ ಅನುಚಿತವಾಗಿ ವರ್ತಿಸಿ, ಹಣ ನೀಡುವಂತೆ ಹಣದ ಬೇಡಿಕೆ ಇಟ್ಟಿರುವುದು ಪ್ರಾಥಮಿಕ ವಿಚಾರಣೆಯಿಂದ ಮತ್ತು ವಿಡಿಯೋ ತುಣುಕಿನಿಂದ ಮೇಲ್ನೋಟಕ್ಕೆ ಸಾಬೀತಾಗಿದೆ” ಎಂದು ಬೀದರ್‌ ಎಸ್ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

“ಕರ್ತವ್ಯದಲ್ಲಿ ಅತೀವ ಬೇಜವಾಬ್ದಾರಿ ಹಾಗೂ ದುರ್ನಡತೆ ತೋರಿಸಿದ್ದಕ್ಕೆ ಎಎಸ್ಐ ಶಾವುರಾಜ್‌  ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ” ಎಂದು ಬುಧವಾರ ಬೀದರ್ ಎಸ್.ಪಿ ಚೆನ್ನಬಸವಣ್ಣ ಲಂಗೋಟಿ ಅವರು ಆದೇಶ ಹೊರಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾದಾಮಿ | ವಿದ್ಯಾರ್ಥಿಗಳು ಸಂವಿಧಾನವನ್ನು ಅರಿಯಬೇಕಾದ ಅಗತ್ಯವಿದೆ: ಪರಶುರಾಮ ಮಹಾರಾಜನವರ

ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಅರಿತಾಗ ಮಾತ್ರ ಸಂವಿಧಾನದ ತಿರುಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ....

ಹಾವೇರಿ | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಜಾಗೃತಿ ಅಭಿಯಾನ: ಜೇಬ್ರಿನ್ ಖಾನ್

"ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ಆಗಸ್ಟ್...

ಉತ್ತರ ಕನ್ನಡ | ಲಾಟರಿ, ಮಟ್ಕಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಂದ ಸ್ಕ್ವಾಡ್ ರಚನೆ

ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆ್ಯಕ್ಟ್ 1998 ಮತ್ತು ಸರ್ಕಾರದ ಆದೇಶದಂತೆ...

ಚಿಕ್ಕಬಳ್ಳಾಪುರ | ಒಳ ಮೀಸಲಾತಿ: ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ; ಪಟ್ರೇನಹಳ್ಳಿ ಕೃಷ್ಣ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಭಂದ ಬಲಗೈ ಹಾಗೂ ಎಡಗೈ...

Download Eedina App Android / iOS

X