ಸಿರಗುಪ್ಪ ನಗರ ಸೇರಿದಂತೆ ತಾಲೂಕಿನಾದ್ಯಂತ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಕೂಡಲೇ ಸ್ವಚ್ಛತೆಗೆ ಆದ್ಯತೆ ಕೊಟ್ಟು ಎಚ್ಚರವಹಿಸಬೇಕೆಂದು ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಸೇವಾ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬರುವ ಹಿನ್ನಲೆ ಜನರಲ್ಲಿ ಆತಂಕ ಮೂಡಿದೆ. ವಿಶೇಷವಾಗಿ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳ ಕೊಠಡಿಗಳಲ್ಲಿ ಫಿನೈಲ್, ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಸೊಳ್ಳೆಗಳು ಹರಡದಂತೆ ಶಾಲಾ ಪರಿಸರ ಸ್ವಚ್ಛತೆ ಇಟ್ಟುಕೊಳ್ಳಲು ಸೂಚಿಸಬೇಕುʼ ಎಂದು ಒತ್ತಾಯಿಸಿದರು.
ʼಶಾಲಾ ಅಂಗಳದಲ್ಲಿ ಮಳೆ ನೀರು ಸಂಗ್ರಹವಾಗದಂತೆ, ಶಾಲಾ ಕೊಠಡಿ, ಕಿಟಕಿ ಮೂಲಕ ಮಳೆ ನೀರು ಬಾರದಂತೆ ಸೊಳ್ಳೆ ಪರದೆ ಅಳವಡಿಸಿ ಮಕ್ಕಳನ್ನು ಆರೋಗ್ಯದಿಂದ ಕಾಪಾಡಲಿ ಕ್ರಮವಹಿಸಲು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಟ್ಟುನಿಟ್ಟಿನ ಸೂಚನೆಗೆ ಮುಂದಾಗಬೇಕುʼ ಎಂದು ಆಗ್ರಹಿಸಿದರು.
ಈ ವೇಳೆ ಸೇವಾ ಸಮಿತಿಯ ಅಧ್ಯಕ್ಷ ಸಿರಿಗಿರಿ ಮಂಜು, ಉಪಾಧ್ಯಕ್ಷ ಧರ್ಮರಾಜ, ರವಿಕುಮಾರ್, ಎಚ್.ಸಿದ್ದಪ್ಪ, ಅನಂದಮ್ಮ, ಸಂಗೀತಾ ಹಾಗೂ ಇತರರಿದ್ದರು.
ವರದಿ : ಗುರುಸ್ವಾಮಿ
