ಬೀದರ ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್‌ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಈ ಕುರಿತು ವೇದಿಕೆಯ ಜಿಲ್ಲಾಧ್ಯಕ್ಷ ಗುರುದಾಸ ಅಮದಲಪಾಡ ನೇತ್ರತ್ವದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ನಗರ ಸಾರಿಗೆಯ ಎಲ್ಲ ಬಸ್‌ಗಳು ತಹಸೀಲ್ದಾರ್ ಕಛೇರಿ, ಜಿಲ್ಲಾ ನ್ಯಾಯಾಲಯ ಕಚೇರಿ, ಭಗತ್ ಸಿಂಗ್ ವೃತ್ತದ ಎದುರುಗಡೆ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ತೆರಳುತ್ತಿವೆ. ಆದರೆ, ನಗರದ ಹೃದಯ ಭಾಗವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತಲಿನ ಸಾರ್ವಜನಿಕರಿಗೆ ಬಸ್ ಇಲ್ಲದೆ ತೊಂದರೆಯಾಗುತ್ತಿದೆ. ಹೀಗಾಗಿ ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಬಸ್ ಮಾರ್ಗ ಬದಲಾಯಿಸಬೇಕು” ಎಂದು ಒತ್ತಾಯಿಸಿದರು.
“ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ತಮ್ಮ ಸಂಸ್ಥೆಯ ನೀತಿ ನಿಯಮಗಳು ಪಾಲನೆ ಮಾಡದೆ ಮನ ಬಂದಂತೆ ಬಸ್ ಚಲಾವಣೆ ಮಾಡುತ್ತಿದ್ದಾರೆ. ವಡಗಾಂವ -ಚಿಂತಾಕಿ ಬೀದರ್ ಹಾಗೂ ಕರಂಜಿ-ಬೀದರ್ ಮಾರ್ಗಮಧ್ಯೆ ಸಂಚರಿಸುವ ಬಸ್‌ಗಳು ಜನವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ವಾಪಸ್ ಬರುವಾಗ ಅಡ್ಡದಾರಿಯಿಂದ ಬರುತ್ತಿವೆ. ಈ ʼರಾಂಗ್ ರೂಟ್ʼ ಬಸ್ ಚಾಲನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ” ಎಂದು ದೂರಿದರು.
ಈ ಬಗ್ಗೆ ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗೂ ಕೂಡಲೇ ಈ ವಿಷಯದ ಬಗ್ಗೆ ಗಮನ ಹರಿಸಿ ಇಲಾಖೆಯ ನಿಯಮದಂತೆ ಬಸ್ ಓಡಿಸಲು ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಹಾಗೂ ನಗರ ಬಸ್ ಸಾರಿಗೆ ಸಂಚಾರ ಮಾರ್ಗ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜನವಾಡ ಗ್ರಾಪಂ ಪಿಡಿಒ ವರ್ಗಾವಣೆಗೆ ಸದಸ್ಯರ ಆಗ್ರಹ
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲಾಧ್ಯಕ್ಷ ಗುರುದಾಸ ಅಮದಲಪಾಡ, ಕರ್ನಾಟಕ ದಲಿತ ಸೇನೆ ಜಿಲ್ಲಾಧ್ಯಕ್ಷ ಧನರಾಜ ಕೋಳಾರ, ಕ.ಸ.ಸೇ ಜಿಲ್ಲಾಧ್ಯಕ್ಷ ಸಂಜು ಲಕ್ಷ್ಮೀದೊಡ್ಡಿ ಹಾಗೂ ಮಹೇಂದ್ರ ಹೊಸಮನಿ, ಬಸವರಾಜ ಬಾವಿದೂಡ್ಡಿ ಇನ್ನಿತರ ಇದ್ದರು.