ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡಗಳ ವ್ಯತಿರಿಕ್ತ ಭಾಗ ಅಥವಾ ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಕ್ರಿಯವಾಗಿ ನಡೆಸಲಾಗುತ್ತಿದ್ದು, ಸೋಮವಾರ 12 ಕಟ್ಟಡಗಳ ವ್ಯತಿರಿಕ್ತ ಭಾಗ/ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಯಲಹಂಕ ವಲಯ ಆಯುಕ್ತರಾದ ಕರೀಗೌಡ ಅವರು ತಿಳಿಸಿದರು.
ಯಲಹಂಕ ಹಾಗೂ ಬ್ಯಾಟರಾನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಕ್ಷೆ ಮಂಜೂರಾತಿ ಪಡೆದಿರುವುದನ್ನು ಉಲ್ಲಂಘಿಸಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ವ್ಯತಿರಿಕ್ತ ಹಾಗೂ ಹೆಚ್ಚುವರಿ ಮಹಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಯಲಹಂಕ ವಿಧಾನ ಸಭಾ ಕ್ಷೇತ್ರದ ಯಲಹಂಕ ಉಪ ವಿಭಾಗದ ಕೆಂಪೇಗೌಡ ವಾರ್ಡ್ ನಂ-01ರ ವ್ಯಾಪ್ತಿಯಲ್ಲಿರುವ ಸ್ವತ್ತಿನ ಸಂಖ್ಯೆ 24, ಶಿವನಹಳ್ಳಿ ಮುಖ್ಯರಸ್ತೆ, ಸುರಬಿ ಬಡಾವಣೆ, ಯಲಹಂಕ ಬೆಂಗಳೂರು-64 ವಿಳಾಸದಲ್ಲಿರುವ 40 X 60 ಸೈಟ್‌ನಲ್ಲಿ ಸ್ಟೀಲ್ಟ್ + ನೆಲ + 1ನೇ + 2ನೇ ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆದುಕೊಂಡಿರುತ್ತಾರೆ. ಆದರೆ ಸದರಿ ಕಟ್ಟಡದಲ್ಲಿ ಸ್ಟೀಲ್ಟ್ + ನೆಲ + 1ನೇ + 2ನೇ ಮಹಡಿ ನಿರ್ಮಿಸುವ ಬದಲು ಹೆಚ್ಚುವರಿಯಾಗಿ 3ನೇ ಮಹಡಿಯನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸಲಾಗಿದೆ.

ಯಲಹಂಕ ಉಪನಗರ ಉಪ ವಿಭಾಗದ ಅಟ್ಟೂರು ವಾರ್ಡ್ ನಂ-03ರ ವ್ಯಾಪ್ತಿಯಲ್ಲಿರುವ ಸ್ವತ್ತಿನ ಸಂಖ್ಯೆ: 3 ಮತ್ತು 4, ಮುನೇಶ್ವರ ಬಡಾವಣೆ, 1ನೇ ಅಡ್ಡರಸ್ತೆಯ ವಿಳಾಸದಲ್ಲಿರುವ 40 X 60 ಸೈಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಸ್ಟೀಲ್ಟ್ + ನೆಲ + 1ನೇ + 2ನೇ + 3ನೇ ಮಹಡಿಯನ್ನು ಅನಧಿಕೃತವಾಗಿ ನಿರ್ಮಿಸಿರುವುದು ಕಂಡು ಬಂದಿತ್ತು. ಸದರಿ ಸ್ವತ್ತು ‘ಬಿ’ ಖಾತಾವಾಗಿರುವುದರಿಂದ ನಕ್ಷೆ ಮಂಜೂರಾತಿ ನೀಡಿರುವುದಿಲ್ಲ. ಒಂದು ವೇಳೆ ನಕ್ಷೆ ಮಂಜೂರಾತಿ ನೀಡಿದ್ದಲ್ಲಿ ಸ್ಟೀಲ್ಟ್ + ನೆಲ + 1ನೇ + 2ನೇ ಮಹಡಿಗೆ ಮಾತ್ರ ಅನುಮತಿ ಇರುತ್ತದೆ. ಆದರೆ ಕಟ್ಟಡದ ಮಾಲೀಕರು 3ನೇ ಮಹಡಿಯನ್ನು ಹೆಚ್ಚುವರಿಯಾಗಿ ನಿರ್ಮಿಸಿರುತ್ತಾರೆ. ಆದುದರಿಂದ ಹೆಚ್ಚುವರಿಯಾಗಿ ನಿರ್ಮಿಸಿರುವ 3ನೇ ಮಹಡಿಯನ್ನು ತೆರವುಗೊಳಿಸಲಾಯಿತು.
ಯಲಹಂಕ ಉಪನಗರ ಉಪ ವಿಭಾಗದ ಅಟ್ಟೂರು ವಾರ್ಡ್ ನಂ-03ರ ವ್ಯಾಪ್ತಿಯಲ್ಲಿರುವ ಸ್ವತ್ತಿನ ಸಂಖ್ಯೆ:15 ಮತ್ತು 16, ಮುನೇಶ್ವರ ಬಡಾವಣೆ, 5ನೇ ಅಡ್ಡರಸ್ತೆ ಯಲಹಂಕ ಉಪನಗರದ ವಿಳಾಸದಲ್ಲಿರುವ 40 X 60 ಸೈಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಸ್ಟೀಲ್ಟ್ + ನೆಲ + 1ನೇ + 2ನೇ + 3ನೇ ಮಹಡಿಯನ್ನು ಅನಧಿಕೃತವಾಗಿ ನಿರ್ಮಿಸಿರುವುದು ಕಂಡು ಬಂದಿರುತ್ತದೆ. ಸದರಿ ಸ್ವತ್ತು ‘ಬಿ’ ಖಾತಾ ವಾಗಿರುವುದರಿಂದ ನಕ್ಷೆ ಮಂಜೂರಾತಿ ನೀಡಿರುವುದಿಲ್ಲ. ಒಂದು ವೇಳೆ ನಕ್ಷೆ ಮಂಜೂರಾತಿ ನೀಡಿದ್ದಲ್ಲಿ ಸ್ಟೀಲ್ಟ್ + ನೆಲ + 1ನೇ + 2ನೇ ಮಹಡಿಗೆ ಮಾತ್ರ ಅನುಮತಿ ಇರುತ್ತದೆ. ಆದರೆ ಕಟ್ಟಡದ ಮಾಲೀಕರು 3ನೇ ಮಹಡಿಯನ್ನು ಹೆಚ್ಚುವರಿಯಾಗಿ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಲಾಗಿದೆ.
ಯಲಹಂಕ ನ್ಯೂಟೌನ್ ವಾರ್ಡ್ ಸಂಖ್ಯೆ-04ರ ವ್ಯಾಪ್ತಿಯ ಎ ಸೆಕ್ಟರ್, ಸ್ವತ್ತಿನ ಸಂಖ್ಯೆ:1200/322ಡಿ ನಲ್ಲಿ ಜಿ + 2 ಮಹಡಿಗೆ ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಸದರಿ ಕಟ್ಟಡದಲ್ಲಿ 1 ಮಹಡಿ ಹೆಚ್ಚುವರಿಯಾಗಿ ನಿರ್ಮಿಸುತ್ತಿರುವುದನ್ನು ಗಮನಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದ್ದಾರೆ.
ಯಲಹಂಕ ಉಪನಗರ ಉಪ ವಿಭಾಗದ ವಾರ್ಡ್ ನಂ-04ರ ವ್ಯಾಪ್ತಿಯಲ್ಲಿರುವ ಸ್ವತ್ತಿನ ಸಂಖ್ಯೆ: 17, ಚಿಕ್ಕಬೊಮ್ಮಸಂದ್ರ ನಂಜುಂಡಪ್ಪ ಬಡಾವಣೆ ಯಲಹಂಕ ಉಪನಗರ ಬೆಂಗಳೂರು–560064 ಈ ವಿಳಾಸದಲ್ಲಿರುವ 40 X 60 ಸೈಟ್‌ನಲ್ಲಿ ಸ್ಟೀಲ್ಟ್ + ನೆಲ + 1ನೇ + 2ನೇ ಮಹಡಿಯನ್ನು ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಆದರೆ ಸದರಿ ಕಟ್ಟಡದಲ್ಲಿ ಹೆಚ್ಚುವರಿಯಾಗಿ 3ನೇ ಮಹಡಿಯನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸಲಾಗಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ವಾರ್ಡ್ ಸಂಖ್ಯೆ-05, ರ ವ್ಯಾಪ್ತಿಯ ಶ್ರೀರಾಮ್‌ಪುರ, ಎಂ.ಸಿ.ಇ.ಸಿ.ಹೆಚ್.ಎಸ್ ಸ್ವತ್ತಿನ ಸಂಖ್ಯೆ:790/964/1 ನಲ್ಲಿ ಎಸ್ + ಜಿ + 2 ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಆದರೆ ಕಟ್ಟಡದ ಮಾಲೀಕರು ಬಿ + ಜಿ + 1 + 2 + 3 + 4ನೇ ಮಹಡಿಯ ನಿರ್ಮಾಣಹಂತದಲ್ಲಿ ಇರುತ್ತದೆ. ಸದರಿ ಕಟ್ಟಡದಲ್ಲಿ ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿರುವ ಹೆಚ್ಚುವರಿ ಮಹಡಿಗಳನ್ನು ತೆರವುಗೊಳಿಸಲಾಗಿದೆ.
ಬ್ಯಾಟರಾಯನಪುರ ಉಪ ವಿಭಾಗದ, ವಾರ್ಡ್ ನಂ. 06(ಜಕ್ಕೂರು) ವ್ಯಾಪ್ತಿಯಲ್ಲಿ ಬರುವ ನಿವೇಶನ ಸಂಖ್ಯೆ. 767, ಖಾತಾ ನಂ. 323/322/767, ಎಂ.ಸಿ.ಇ.ಸಿ.ಹೆಚ್.ಎಸ್ ಬಡಾವಣೆ, ಶ್ರೀರಾಂಪುರದಲ್ಲಿ 104.16 ಚದರ ಮೀ. ಸೈಟ್ ನಲ್ಲಿ ಸ್ಟಿಲ್ಟ್ + ನೆಲ + 1ನೇ + 2ನೇ ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಸದರಿ ಕಟ್ಟಡದಲ್ಲಿ ನಕ್ಷೆಯನ್ನು ಉಲ್ಲಂಘಿಸಿ ವ್ಯತಿರಿಕ್ತ ಭಾಗವನ್ನು ನಿರ್ಮಿಸಿರುವುದನ್ನು ಗಮನಿಸಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲಾಗಿದೆ.
ಕೊಡಿಗೇಹಳ್ಳಿ ವ್ಯಾಪ್ತಿಯ ಸ್ವತ್ತಿನ ಸಂಖ್ಯೆ-08, 2ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಬಾಲಾಜಿ ಲೇಔಟ್‌ನಲ್ಲಿರುವ 40 * 100 ಸೈಟ್‌ನಲ್ಲಿ ಬೇಸ್ಮೆಂಟ್ + ನೆಲ + 1ನೇ + 2ನೇ + 3ನೇ ಮಹಡಿ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಸದರಿ ಕಟ್ಟಡದಲ್ಲಿ 4ನೇ ಮಹಡಿಯನ್ನು ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ನಿರ್ಮಿಸಿರುವುದನ್ನು ಗಮನಿಸಿ ಅದನ್ನು ತೆರವುಗೊಳಿಸಲಾಗಿದೆ.
ಕೊಡಿಗೆಹಳ್ಳಿ ಉಪ ವಿಭಾಗದ ವ್ಯಾಪ್ತಿಯ ಹೊಸ ವಾರ್ಡ್ ನಂ-10 ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಬರುವ ಟೆನ್ನಿಸ್ ವಿಲೇಜ್ ಬಡಾವಣೆಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡದ ಭಾಗವನ್ನು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸ್ವತ್ತಿನ ಸಂಖ್ಯೆ 05, ರಲ್ಲಿ ನೆಲಮಹಡಿ 1ನೇ ಮಹಡಿ, 2ನೇ ಮಹಡಿ ಮತ್ತು 3ನೇ ಮಹಡಿ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಆದರೆ ಸದರಿ ಕಟ್ಟಡದಲ್ಲಿ ಅನಧಿಕೃತವಾಗಿ 4ನೇ ಮಹಡಿಯನ್ನು ನಿರ್ಮಾಣ ಮಾಡಿದ್ದು, ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ 4ನೇ ಮಹಡಿಯನ್ನು ತೆರವುಗೊಳಿಸಲಾಗಿದೆ.
ಕೊಡಿಗೇಹಳ್ಳಿ ವಿಭಾಗ ವ್ಯಾಪ್ತಿಯಲ್ಲಿನ ಹೊಸ ವಾರ್ಡ್ ನಂ-10 ಹೆಬ್ಬಾಳ ಕೆಂಪಾಪುರ ಯೋಗೇಶ್ ನಗರದಲ್ಲಿ ಪ್ರಭು ಎಂಬುವವರು ಕಟ್ಟಡ ಪರವಾನಗಿ ಪಡೆಯದೆ ನೆಲ ಮಹಡಿ, 1ನೇ ಮಹಡಿ, 2ನೇ ಮಹಡಿ, 3ನೇ ಮಹಡಿ ಮತ್ತು 4ನೇ ಮಹಡಿಯನ್ನು ವಲಯ ನಿಯಮಾವಳಿಗೆ ವ್ಯತಿರಿಕ್ತವಾಗಿ ಅನಧಿಕೃತ ನಿರ್ಮಿಸಲಾಗಿರುತ್ತದೆ. ವ್ಯಕ್ತಿರಿಕ್ತವಾಗಿ ನಿರ್ಮಿಸಿದ್ದ 4ನೇ ಮಹಡಿಯನ್ನು ಭಾಗಶಃ ಪೂರ್ಣಗೊಳಿಸಿರುತ್ತಾರೆ. ಮುಂದುವರೆದು ಕಟ್ಟಡದ ಮಾಲೀಕರು ಸ್ವತಃ ತಾವೇ ವ್ಯತಿರಿಕ್ತವಾಗಿ ನಿರ್ಮಿಸಿರುವಂತಹ 4ನೇ ಮಹಡಿಯನ್ನು ತೆರವುಗೊಳಿಸುವುದಾಗಿ 15 ದಿನಗಳ ಕಾಲಾವಕಾಶ ಕೋರಿ ಪಾಲಿಕೆಗೆ ಪತ್ರವನ್ನು ನೀಡಿರುವುದಾಗಿ ಬಿಬಿಎಂಪಿ ತಿಳಿಸಿದೆ.
ಕೊಡಿಗೆಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿನ ಹೊಸಟ್ಟಿ ಬಡಾವಣೆಯಲ್ಲಿ ಸ್ವತ್ತಿನ ಮಾಲೀಕರು ಸರಸ್ವತಿ ಎಂಬುವವರು ನೆಲಮಹಡಿ, 1ನೇ ಮಹಡಿ, 2ನೇ ಮಹಡಿ, 3ನೇ ಮಹಡಿ ಮತ್ತು 4ನೇ ಮಹಡಿಯನ್ನು ನಿರ್ಮಾಣ ಮಾಡಿದ್ದು, ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ನಿರ್ಮಿಸಿದ್ದ 4ನೇ ಮಹಡಿಯ ತೆರವು ಕಾರ್ಯವನ್ನು ಕೈಗೊಳ್ಳಲಾಗಿದೆ. ಕಟ್ಟಡದ ಮಾಲೀಕರು ಸ್ವತಃ ತಾವೇ ವ್ಯತಿರಿಕ್ತವಾಗಿ ಮಹಡಿಯನ್ನು ತೆರವು ಗೊಳಿಸುವುದಾಗಿ 10 ದಿನಗಳ ಕಾಲಾವಕಾಶ ಕೋರಿ ಪಾಲಿಕೆಗೆ ಪತ್ರವನ್ನು ನೀಡಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
ವಿದ್ಯಾರಣ್ಯಪುರ ವಾರ್ಡಿನ ಹೆಚ್.ಎಂ.ಟಿ ಬಡಾವಣೆ, 4ನೇ ಬ್ಲಾಕ್, ನಿವೇಶನ ಸಂ. 695 ರಲ್ಲಿ ವಲಯ ನಿಯಮಾವಳಿಗಳಂತೆ ಅನುಮೋದಿಸಬಹುದಾದ ಅಂತಸ್ತುಗಳಿಗಿಂತ ಹೆಚ್ಚುವರಿಯಾಗಿ ನಿರ್ಮಿಸುತ್ತಿದ್ದ ಮಹಡಿಯನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ‘ಅವಳ ಹೆಜ್ಜೆ’ ಮಹಿಳಾ ಕನ್ನಡ ಕಿರುಚಿತ್ರೋತ್ಸವ: ಕವಿತಾ ಅವರ ‘ಅನ್ ಹರ್ಡ್ ಎಕೋಸ್’ಗೆ ಪ್ರಶಸ್ತಿ
ನೋಟಿಸ್ ಜಾರಿ
ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ಪಡೆದು, ನಕ್ಷೆ ಉಲ್ಲಂಘಿಸಿ ವ್ಯತಿಕ್ತವಾಗಿ ನಿರ್ಮಿಸುವ ಹಾಗೂ ಹೆಚ್ಚುವರಿ ಮಹಡಿಗಳನ್ನು ನಿರ್ಮಾಣ ಮಾಡುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಅದರಂತೆ ಕೆಲ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಇನ್ನು ಕೆಲವರು ತೆರವುಗೊಳಿಸಿರುವುದಿಲ್ಲ. ಅಂತಹ ಕಟ್ಟಡಗಳ ವ್ಯತಿರಿಕ್ತ ಭಾಗ ಹಾಗೂ ಹೆಚ್ಚುವರಿ ಮಹಡಿಗಳನ್ನು ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗುತ್ತಿದ್ದು, ತೆರವು ಕಾರ್ಯಾಚರಣೆ ವೇಳೆ ತಗಲುವ ವೆಚ್ಚವನ್ನು ಕಟ್ಟಡದ ಮಾಲೀಕರಿದಂಲೇ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಕಟ್ಟಡ ಮಾಲೀಕರಿಗೆ ಎಚ್ಚರಿಕೆ
ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಪಡೆಯುವಂತಹ ಮಾಲೀಕರಿಗೆ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಕಟ್ಟಡ ತೆರವುಗೊಳಿಸುವುದರ ಜೊತೆಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕಟ್ಟಡಗಳ ವ್ಯತಿರಿಕ್ತ ಭಾಗಗಳ ತೆರವು ಕಾರ್ಯಚರಣೆಯ ವೇಳೆ ನಗರ ಯೋಜನೆಯ ಜಂಟಿ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರು, ನಗರ ಯೋಜನೆಯ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
