ದಾವಣಗೆರೆ | ಬೆಂಗಳೂರಿಗೆ ಹೋಗುವ ವಂದೇಭಾರತ್ ರೈಲಿನಲ್ಲಿ ಬೆಂಕಿ ಅವಘಡ; ಯಾವುದೇ ಅಪಾಯವಿಲ್ಲ ರೈಲ್ವೆ ಇಲಾಖೆ ಸ್ಪಷ್ಟನೆ

Date:

Advertisements

ಧಾರವಾಡದಿಂದ ಬೆಂಗಳೂರಿಗೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಶುಕ್ರವಾರ ಮಧ್ಯಾಹ್ನ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ರೈಲಿನ ಚಕ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎಂಜಿನ್ ಗೆ ಮಾಹಿತಿ ರವಾನೆಯಾಗಿದ್ದು, ತಕ್ಷಣ ಚಾಲಕ, ರೈಲ್ವೆ ಸಿಬ್ಬಂದಿ, ಕಾರ್ಯಪ್ರವೃತ್ತರಾಗಿ ರೈಲನ್ನು ನಿಲ್ಲಿಸಿ ಸಂಭಾವ್ಯ ಅನಾಹುತ, ಅಪಾಯ ತಪ್ಪಿಸಿದ್ದಾರೆ. ಪರಿಶೀಲನೆ ಬಳಿಕ ವಂದೇ ಭಾರತ್ ರೈಲು ಸಂಚಾರವನ್ನು ರದ್ದುಪಡಿಸಿ ಪ್ರಯಾಣಿಕರಿಗೆ ಬೆಂಗಳೂರಿಗೆ ಹೋಗಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿತು.

‘ವಂದೇ ಭಾರತ್‌’ ರೈಲಿನ ‘ಸಿ-4’ ಕೋಚ್‌ನ ಗಾಲಿಯೊಂದರ ‘ಹಾಟ್ ಎಕ್ಸೆಲ್‌’ನಿಂದ ಬೆಂಕಿ ಕಿಡಿ ಹೊತ್ತಿಕೊಂಡು ಹೊಗೆ ಆವರಿಸಿದೆ . ಈ ಬಗ್ಗೆ ರೈಲಿನಲ್ಲಿ ಸ್ವಯಂ ಚಾಲಿತ ಅವಘಡ ಸಂದೇಶ ವ್ಯವಸ್ಥೆಯಿಂದ ಎಂಜಿನ್‌ಗೆ ಮಾಹಿತಿ ರವಾನೆಯಾಗಿದೆ. ಮಧ್ಯಾಹ್ನ 3.30ಕ್ಕೆ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಈ ವೇಳೆ ವಂದೇ ಭಾರತ್ ರೈಲು ಸುಮಾರು 100 ಕಿಮೀ ವೇಗದಲ್ಲಿ ಸಾಗುತ್ತಿದ್ದು, ರೈಲು ನಿಲ್ಲಿಸಿದ ಬಳಿಕ ಬೆಂಕಿ ನಂದಿಸಲಾಗಿದೆ’.

1002223523
Oplus_0

ಸಿ-4 ಬೋಗಿಯಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ದಾವಣಗೆರೆ ನಿಲ್ದಾಣದವರೆಗೆ ರೈಲನ್ನು ತರಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ರೈಲನ್ನು ಪರಿಶೀಲಿಸಿದ ತಾಂತ್ರಿಕ ತಂಡ ಸಂಚಾರವನ್ನು ರದ್ದುಪಡಿಸಿದೆ.

Advertisements

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭದಲ್ಲಿ ನೂಕಾಟ ವಾಗ್ವಾದ; ಬಣ ರಾಜಕೀಯ ಜೋರು

ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಜನಶತಾಬಿ’, ‘ಜೋದ್‌ಪುರ ಎಕ್ಸ್‌ಪ್ರೆಸ್’ ರೈಲುಗಳಲ್ಲಿ ವಂದೇ ಭಾರತ್ ರೈಲಿನಲ್ಲಿದ್ದ 502 ಜನ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ. ನಂತರ ಹರಿಹರದ ದುರಸ್ತಿ ಮತ್ತು ನಿರ್ವಹಣೆ ಕೇಂದ್ರಕ್ಕೆ ರೈಲನ್ನು ಕಳುಹಿಸಲಾಗಿದೆ. ಇದೇ ವಂದೇ ಭಾರತ್ ರೈಲಿನ ಬೋಗಿಗೆ ಆರಂಭದಲ್ಲಿ ಒಂದು ಬಾರಿ ಕಲ್ಲು ತೂರಲಾಗಿತ್ತು. ತನಿಖೆ ಬಳಿಕ ರೈಲ್ವೆ ಪೊಲೀಸರು ಪುಂಡರನ್ನು ಬಂಧಿಸಿದ್ದರು.‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೈಬರ್ ವಂಚನೆ | ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ಸೆ.15ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ

ಸೈಬರ್ ವಂಚನೆ ಸೇರಿದಂತೆ ಹಲವು ಆನ್‌ಲೈನ್ ಬೆಳವಣಿಗೆಗಳ ಬಗ್ಗೆ ಸೋಲಿಡಾರಿಟಿ ಯೂತ್...

ಒಳಮೀಸಲಾತಿ : ‘ಎಕೆ, ಎಡಿ, ಎಎ’ ಸಮಸ್ಯೆ ಜೀವಂತ ಉಳಿಸಿದ ರಾಜ್ಯ ಸರ್ಕಾರ

'ಸಿ' ಮತ್ತು 'ಡಿ' ಗ್ರೂಪ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇತರೆ ಅಸ್ಪೃಶ್ಯ...

ಧರ್ಮಸ್ಥಳ ಸುತ್ತ ವ್ಯವಸ್ಥಿತ ಷಡ್ಯಂತ್ರ, ಹಿಂದಿನ ಶಕ್ತಿಗಳನ್ನು ಎಸ್‌ಐಟಿ ಪತ್ತೆ ಮಾಡಲಿ: ಸುನಿಲ್‍ ಕುಮಾರ್

ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್‍ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು...

ನಾನು ದಲಿತರನ್ನು ವಿರೋಧಿಸಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ: ಶಾಸಕ ಜಿ.ಟಿ.ದೇವೇಗೌಡ

ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ...

Download Eedina App Android / iOS

X